ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ಯಾವ ನಾಯಕನಿಗೂ ಆಗದ ಅವಮಾನಕ್ಕೆ ತುತ್ತಾದ ಕೊಹ್ಲಿ

 Virat Kohli Registered An Unwanted Record As A Captain Against Australia

ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಅವಮಾಕರ ರೀತಿಯಲ್ಲಿ ಆಸ್ಟ್ರೇಲಿಯಾಗೆ ಶರಣಾಗಿದೆ. ಹತ್ತು ವಿಕೆಟ್‌ಗಳಿಂದ ಆಸ್ಟ್ರೇಲಿಯಾಗೆ ಟೀಮ್ ಇಂಡಿಯಾ ಸೋತಿದ್ದು ಇದೇ ಮೊದಲು. ಹೀಗಾಗಿ ವಿರಾಟ್ ಕೊಹ್ಲಿ ನಾಯಕನಾಗಿ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

ಹಾಗಂತ ಟೀಮ್ ಇಂಡಿಯಾ ಹತ್ತು ವಿಕೆಟ್‌ಗಳ ಸೋಲನ್ನು ಕಂಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ನ್ಯೂಜಿಲ್ಯಾಂಡ್‌ ವಿರುದ್ಧ (1981), ವೆಸ್ಟ್‌ ಇಂಡೀಸ್‌(1997), ದಕ್ಷಿಣ ಆಫ್ರಿಕಾ(2000) ಮತ್ತು 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಬಾರಿಗೆ ಹತ್ತು ವಿಕೆಟ್‌ಗಳ ಸೋಲನ್ನು ಟೀಮ್ ಇಂಡಿಯಾ ಕಂಡಿದೆ. ಆದರೆ ಆಸ್ಟ್ರೇಲಿಯಾ ವಿರುದ್ಧ ಈ ರೀತಿಯ ಸೋಲು ಇದೇ ಮೊದಲು.

ಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನಭಾರತ vs ಆಸ್ಟ್ರೇಲಿಯಾ: ಕೊಹ್ಲಿ ನಿರ್ಧಾರಕ್ಕೆ ಮಾಜಿ ಆಟಗಾರರ ಅಸಮಾಧಾನ

ಸಿರೀಸ್‌ನ ಮೊದಲ ಪಂದ್ಯದಲ್ಲಿ ಆಸಿಸ್ ನಾಯಕ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಅಬ್ಬರದ ಆಟವನ್ನಾಡಿದರು. ಅಜೇಯವಾಗುಳಿದ ಆರಂಭಿಕ ಆಟಗಾರಿಬ್ಬರೂ ಟೀಮ್ ಇಂಡಿಯಾ ನೀಡಿದ 256 ರನ್‌ಗಳ ಗುರಿಯನ್ನು 12.2 ಓವರ್‌ಗಳು ಬಾಕಿ ಉಳಿದಿರುವಂತೆಯೇ ತಲುಪಿದರು.

ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!ಪಾಕಿಸ್ತಾನ ದಂತಕತೆಗೆ ಕೊಹ್ಲಿಗಿಂತ ಮತ್ತೊಬ್ಬನ ಆಟ ಹೆಚ್ಚು ಇಷ್ಟವಂತೆ!

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ಗಿಳಿದ ಟೀಮ್ ಇಂಡಿಯಾ ಆರಂಭಿಕ ಆಟಗಾರ ರೋಹಿತ ಶರ್ಮಾ ವಿಕೆಟನ್ನು ಬೇಗನೆ ಕಳೆದುಕೊಂಡಿತು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿ ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದರು. ಆದರೆ ಇದು ಸರಿಯಾಗಿ ಕಾರ್ಯರೂಪಕ್ಕೆ ಬರಲಿಲ್ಲ. ವಿರಾಟ್ ಕೊಹ್ಲಿ ಮತ್ತು ಐದನೇ ಕ್ರಮಾಂಕದಲ್ಲಿ ಬಂದ ಶ್ರೇಯಸ್ ಅಯ್ಯರ್ ಕೂಡ ವಿಫಲರಾದರು.

Story first published: Wednesday, January 15, 2020, 13:11 [IST]
Other articles published on Jan 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X