ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ವೃತ್ತಿ ಜೀವನಕ್ಕೆ ತಿರುವು ನೀಡಿದ "ಆ" ಇನ್ನಿಂಗ್ಸ್!

Virat Kohli Remembers His ‘Game-changer’ Innings

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಟಗಾರ ಎಂದು ದಿಗ್ಗಜರಿಂದಲೇ ಹೊಗಳಿಸಿಕೊಂಡಿದ್ದಾರೆ. ತನ್ನ ಆಟ ಮತ್ತು ದಾಖಲೆಗಳಿಂದಲೇ ವಿರಾಟ್ ತಾನೊಬ್ಬ ಶ್ರೇಷ್ಠ ಆಟಗಾರ ಎಂಬುದನ್ನು ಸಾಭೀತುಪಡಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿಯ ವೃತ್ತಿ ಬದುಕಿಗೆ ತಿರುವು ನೀಡಿದ್ದು ಅದೊಂದು ಇನ್ನಿಂಗ್ಸ್ ಅಂತೆ. ಅದನ್ನು ಸ್ವತಃ ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

2012ರಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್‌ನ ಲೀಗ್ ಹಂತದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಬದುಕಿನಲ್ಲಿ ಬಹುದೊಡ್ಡ ತಿರುವಿಗೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ. ಪಾಕಿಸ್ತಾನದ ನೀಡಿದ್ದ ದಾಖಲೆಯ ಮೊತ್ತವನ್ನು ಟೀಮ್ ಇಂಡಿಯಾ ಯಶಸ್ವಿಯಾಗಿ ಬೆನ್ನತ್ತಿತ್ತು. ಅದರಲ್ಲಿ ವಿರಾಟ್ ಪಾತ್ರ ಬಹು ದೊಡ್ಡದಿತ್ತು.

ರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾರೋಹಿತ್‌ಗೆ ಟಿ20 ನಾಯಕನ ಪಟ್ಟ ಕೂಗು: ಈಗ ಬೇಡ ಎಂದ ಚೇತನ್ ಶರ್ಮಾ

ಪಾಕಿಸ್ತಾನ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 329 ರನ್‌ ಗಳಿಸಿತ್ತು. ಇದರಲ್ಲಿ ನಾಸೀರ್‌ ಜೆಮ್‌ಶೆದ್‌ ಹಾಗೂ ಮೊಹಮ್ಮದ್‌ ಹಫೀಜ್‌ 224 ರನ್‌ ಆರಂಭಿಕ ಜತೆಯಾಟವಾಡಿದ್ದರು. ಇದರ ಸಹಾಯದಿಂದ ಪಾಕಿಸ್ತಾನ ಟೀಮ್ ಇಂಡಿಯಾಗೆ 330 ರನ್ ಗಳಿಸುವ ದೊಡ್ಡ ಗುರಿಯನ್ನು ನೀಡಿತ್ತು.

ಇದನ್ನು ದೊಡ್ಡ ಮೊತ್ತವನ್ನು ಭಾರತ ಯಶಸ್ವಿಯಾಗಿ ಬೆನ್ನಟ್ಟಿತ್ತು. 47.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಪಾಕ್ ನೀಡಿದ್ದ ಗುರಿಯನ್ನು ಭಾರತ ತಲುಪುವಲ್ಲಿ ಯಶಸ್ವಿಯಾಗಿತ್ತು. ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ತಮ್ಮ ಶ್ರೇಷ್ಠ ಆಟವನ್ನು ಪ್ರದರ್ಶಿಸಿದರು. ವಿರಾಟ್‌ 183 ರನ್‌ ಗಳಿಸುವ ಮೂಲಕ ಪಂದ್ಯದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ಇದು ಕೊಹ್ಲಿ ವೃತ್ತಿ ಜೀವನದ ಗರಿಷ್ಠ ರನ್ ಗಳಿಕೆಯಾಗಿದೆ.

'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ'ಖೇಲ್ ರತ್ನ'ಕ್ಕೆ ರೋಹಿತ್ ಶರ್ಮಾ, 'ಅರ್ಜುನ'ಕ್ಕೆ ಧವನ್ ನಾಮನಿರ್ದೇಶನ

'ಅಂದಿನ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್‌ಗಳ ದಾಳಿ ಅಸಾಧಾರಣವಾಗಿತ್ತು. ಅಂದು ಸನ್ನಿವೇಶಕ್ಕೆ ತಕ್ಕಂತೆ ಆಡಬೇಕೆಂದು ನಾನು ಅಂದುಕೊಂಡಿದ್ದೆ. ಅದಕ್ಕಾಗಿ ನನ್ನನ್ನು ನಾನೇ ಸಾಕಷ್ಟು ತಯಾರಿ ನಡೆಸಿಕೊಂಡೆ. ಇದರ ನಡುವೆ ಆ ಇನಿಂಗ್ಸ್‌ನಲ್ಲಿ ಸ್ವಾಭಾವಿಕವಾಗಿ ಮೂಡಿದ ಆಟ ನನ್ನ ಬ್ಯಾಟಿಂಗ್‌ ದಿಕ್ಕನ್ನೆ ಬದಲಾಯಿಸಿತು' ಎಂದು ವಿರಾಟ್ ಕೊಹ್ಲಿ ಆರ್‌ ಅಶ್ವಿನ್ ಜೊತೆಗೆ ನಡೆಸಿದ ಇನ್ಸ್ಟಾಗ್ರಾಮ್ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.

Story first published: Sunday, May 31, 2020, 9:39 [IST]
Other articles published on May 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X