ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Virat Kohli message: ಕೋವಿಡ್ 19 ನಿಯಮಗಳನ್ನು ಪಾಲಿಸುವಂತೆ ಮನವಿ ಮಾಡಿದ ವಿರಾಟ್ ಕೊಹ್ಲಿ

Virat Kohli requests Citizens To Follow Coronavirus Protocols and Maintain Social Distancing

ದೇಶಾದ್ಯಂತ ಕೋರೋನಾ ವೈರಸ್‌ನ ಎರಡನೇ ಅಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ವಿಡೊಯೋ ಸಂದೇಶವನ್ನು ನೀಡಿದ್ದಾರೆ. ನಾಗರೀಕರು ಕೊರೊನಾ ವೈರಸ್‌ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ನಿಯಮಗಳನ್ನು ಪಾಲಿಸುವ ಮೂಲಕ ಈ ಸಾಂಕ್ರಾಮಿಕ ರೋಗದ ತಡೆಗೆ ಕೈಜೋಡಿಸಬೇಕು ಎಂದಿದ್ದಾರೆ.

ಈ ವಿಡಿಯೋವನ್ನು ಡೆಲ್ಲಿ ಪೊಲೀಸರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಅಂತರವನ್ನು ಪಾಲಿಸಿ, ಮಾಸ್‌ಕ್ ಧರಿಸಿ ಹಾಗೂ ಯಾವಾಗಲೂ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ ಎಂದು ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಮನವಿಯನ್ನು ಮಾಡಿದ್ದಾರೆ.

'ನಾನು ಅನ್‌ಫಿಟ್‌ ಎಂದು ಯಾರಾದರು ಹೇಳುವುದನ್ನು ಬಯಸುವುದಿಲ್ಲ''ನಾನು ಅನ್‌ಫಿಟ್‌ ಎಂದು ಯಾರಾದರು ಹೇಳುವುದನ್ನು ಬಯಸುವುದಿಲ್ಲ'

"ನಿಮಗೆ ತಿಳಿದಿರುವಂತೆ ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿ ಹೆಚ್ಚಾಗಿದೆ. ಹೀಗಾಗಿ ಅಗತ್ಯ ವಸ್ತುಗಳಿಗಾಗಿ, ಅಗತ್ಯ ಕರ್ತವ್ಯಗಳಿಗೆ ತೆರಳುವುದಾದರೆ ಮಾಸ್ಕ್ ಧರಿಸಿಕೊಳ್ಳಿ. ಸಮಾಜಿಕ ಅಂತರವನ್ನು ಪಾಲಿಸಿ ಹಾಗೂ ನಿಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುತ್ತಿರಿ. ಈ ಮುನ್ನಚ್ಚರಿಕಾ ಕ್ರಮಗಳು ಸಾಕಷ್ಟು ಅಗತ್ಯವಾಗಿದೆ. ಎರಡನೇ ಅಲೆಯನ್ನು ನಾವು ಸದೃಢವಾಗಿ ಎದುರಿಸಬೇಕಾದರೆ ಪೊಲೀಸರು ಹಾಗೂ ಸರ್ಕಾರಕ್ಕೆ ಸಾಥ್ ನೀಡಬೇಕಿದೆ. ನೀವು ಸುರಕ್ಷಿತವಾಗಿದ್ದರೆ ದೇಶ ಸುರಕ್ಷಿತವಾಗಿರುತ್ತದೆ" ಎಂದು ಕೊಹ್ಲಿ ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.

ಕೊರೊನಾ ಅಲೆ ದೇಶದ ರಾಜಧಾನಿ ದೆಹಲಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿತ್ತಿದ್ದು ಅಲ್ಲಿನ ಸರ್ಕಾರ ಆರು ದಿನಗಳ ಸಂಪೂರ್ಣ ಲಾಕ್‌ಡೌನ್ ಘೋಷಿಸಿದೆ.

ಐಪಿಎಲ್: ಡೆಲ್ಲಿ vs ಮುಂಬೈ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳುಐಪಿಎಲ್: ಡೆಲ್ಲಿ vs ಮುಂಬೈ ಮುಖಾಮುಖಿಯ ಕುತೂಹಲಕಾರಿ ಅಂಕಿ-ಅಂಶಗಳು

ಸದ್ಯ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಭಾಗಿಯಾಗಿದ್ದು ಆರ್‌ಸಿಬಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆರ್‌ಸಿಬಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

Story first published: Tuesday, April 20, 2021, 17:29 [IST]
Other articles published on Apr 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X