ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test ranking‌ನಲ್ಲಿ ವಿರಾಟ್ ಕೊಹ್ಲಿಯೇ ಕಿಂಗ್, ಪೂಜಾರಗೆ 3ನೇ ಸ್ಥಾನ

Virat Kohli retains number one spot in ICC Test rankings

ನವದೆಹಲಿ, ಮಾರ್ಚ್ 19: ಐಸಿಸಿ ಟೆಸ್ಟ್ ವರ್ಷದ ಕ್ರಿಕೆಟಿಗ ಗೌರವಕ್ಕೆ ಪಾತ್ರರಾಗಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ನೂತನ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಮಂಗಳವಾರ ಪ್ರಕಟವಾಗಿರುವ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಕೊಹ್ಲಿ ನಂ.1 ಸ್ಥಾನದಲ್ಲಿ ಮುಂದುವರೆದಿದ್ದಾರೆ.

IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!IPL 2019: ಸಂಪೂರ್ಣ ವೇಳಾಪಟ್ಟಿ ಪ್ರಕಟ, ಮೇ 12ಕ್ಕೆ ಫೈನಲ್ ಪಂದ್ಯ!

ಒಟ್ಟು 922 ರೇಟಿಂಗ್ ಪಾಯಿಂಟ್ಸ್‌ ಗಳಿಸಿರುವ ವಿರಾಟ್ ಅಗ್ರಸ್ಥಾನದಲ್ಲಿದ್ದರೆ, ಭಾರತ ಟೆಸ್ಟ್ ಸ್ಟಾರ್ ಚೇತೇಶ್ವರ್ ಪೂಜಾರ ಕೂಡ 3ನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಟಾಪ್ 10 ಒಳಗೆ ಸ್ಥಾನಗಳಿಸಿ ಗಮನ ಸೆಳೆದರು.

ನಿದಹಾಸ್ ಫೈನಲ್‌ನಲ್ಲಿ ಭಾರತದ ರೋಚಕ ಗೆಲುವಿನ ಗುಟ್ಟು ಬಿಚ್ಚಿಟ್ಟ ಕಾರ್ತಿಕ್!ನಿದಹಾಸ್ ಫೈನಲ್‌ನಲ್ಲಿ ಭಾರತದ ರೋಚಕ ಗೆಲುವಿನ ಗುಟ್ಟು ಬಿಚ್ಚಿಟ್ಟ ಕಾರ್ತಿಕ್!

ಟೆಸ್ಟ್ ರ್ಯಾಂಕಿಂಗ್‌ಗೆ ಸಂಬಂಧಿಸಿ ತಂಡ, ಬ್ಯಾಟ್ಸ್ಮನ್‌ಗಳು, ಬೌಲರ್‌ಗಳು ಮತ್ತು ಆಲ್‌ ರೌಂಡರ್‌ಗಳ ಸ್ಥಿತಿಗತಿಗಳು ಕೆಳಗಿನಂತಿವೆ.

ಭಾರತ ನಂ. 1

ಭಾರತ ನಂ. 1

ಟೆಸ್ಟ್ ಮತ್ತು ಏಕದಿನ ರ್ಯಾಂಕಿಂಗ್‌ನಲ್ಲಿ ನಂ. 1 ಸ್ಥಾನದಲ್ಲಿದ್ದ ಭಾರತ ಏಕದಿನದಲ್ಲಿ ಮೊದಲ ಸ್ಥಾನ ಬಿಟ್ಟು ದ್ವಿತೀಯ ಸ್ಥಾನಕ್ಕೆ ಕುಸಿದಿದೆಯಾದರೂ ಟೆಸ್ಟ್ ನಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿದೆ. 116 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಭಾರತ ಮೊದಲ ಸ್ಥಾನದಲ್ಲಿದ್ದರೆ, 108 ಪಾಯಿಂಟ್ಸ್‌ಗಳಿಸಿರುವ ನ್ಯೂಜಿಲ್ಯಾಂಡ್ ದ್ವಿತೀಯ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಅನಂತರದ ಸ್ಥಾನಗಳಲ್ಲಿವೆ.

ಕೊಹ್ಲಿ ಮುಂದು

ಕೊಹ್ಲಿ ಮುಂದು

ಟೆಸ್ಟ್ ನಲ್ಲಿ ಬ್ಯಾಟ್ಸ್ಮನ್‌ಗಳನ್ನು ಪರಿಗಣಿಸಿದರೆ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಕೇನ್ ವಿಲಿಯಮ್ಸನ್-ನ್ಯೂಜಿಲ್ಯಾಂಡ್ (913 ರೇಟಿಂಗ್), ಚೇತೇಶ್ವರ್ ಪೂಜಾರ, ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಹೆನ್ರಿ ನಿಕೋಲ್ಸ್ (ನ್ಯೂಜಿಲ್ಯಾಂಡ್) ಕ್ರಮವಾಗಿ 3ರಿಂದ 5ನೇ ಸ್ಥಾನಗಳಲ್ಲಿದ್ದಾರೆ.

ಕಮಿನ್ಸ್ ಬೆಸ್ಟ್ ಬೌಲರ್

ಕಮಿನ್ಸ್ ಬೆಸ್ಟ್ ಬೌಲರ್

ಟೆಸ್ಟ್ ಬೌಲರ್‌ಗಳಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರ ಶ್ರೇಯಾಂಕದಲ್ಲಿದ್ದಾರೆ. ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ದಕ್ಷಿಣ ಆಫ್ರಿಕಾದ ಕಾಗಿಸೋ ರಬಾಡಾ, ಆಫ್ರಿಕಾದವರೇ ಆದ ವರ್ನಾನ್ ಫಿಲಾಂಡರ್ ಮತ್ತು ನ್ಯೂಜಿಲ್ಯಾಂಡ್‌ನ ನೈಲ್ ವ್ಯಾಗ್ನರ್ ಐದರೊಳಗೆ ಸ್ಥಾನ ಪಡೆದಿದ್ದಾರೆ. ಭಾರತದ ರವೀಂದ್ರ ಜಡೇಜಾ 6, ರವಿಚಂದ್ರನ್ ಅಶ್ವಿನ್ 10ನೇ ಸ್ಥಾನ ಪಡೆದಿದ್ದಾರೆ. ಬೌಲರ್‌ಗಳಲ್ಲಿ ಭಾರತದ ಇಬ್ಬರು 10ರೊಳಗೆ ಸ್ಥಾನ ಪಡೆದಿದ್ದರು ವಿಶೇಷ.

ಜೇಸನ್ ಹೋಲ್ಡರ್ ಫಸ್ಟ್

ಜೇಸನ್ ಹೋಲ್ಡರ್ ಫಸ್ಟ್

ಟೆಸ್ಟ್ ಸರ್ವಾಂಗಿಣ ಆಟಗಾರರಲ್ಲಿ ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲ ಸ್ಥಾನ ಪಡೆದಿದ್ದಾರೆ. ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ), ರವೀಂದ್ರ ಜಡೇಜಾ (ಭಾರತ), ಬೆನ್ ಸ್ಟೋಕ್ಸ್ (ಇಂಗ್ಲೆಂಡ್), ವರ್ನಾನ್ ಫಿಲಾಂಡರ್ (ದಕ್ಷಿಣ ಆಫ್ರಿಕಾ) 2ರಿಂದ 5ನೇ ಸ್ಥಾನ ಪಡೆದಿದ್ದಾರೆ.

Story first published: Tuesday, March 19, 2019, 20:12 [IST]
Other articles published on Mar 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X