ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಿಂಕ್ ಬಾಲ್ ಅನುಭವ ಹಂಚಿಕೊಂಡ ನಾಯಕ ಕೊಹ್ಲಿ

Virat Kohli Reveals His First Experience With Pink Cricket Ball

ಭಾರತ-ಬಾಂಗ್ಲಾದೇಶ ವಿರುದ್ಧ ನಾಳೆಯಿಂದ ಮೊದಲ ಟೆಸ್ಟ್‌ ಪಂದ್ಯ ಇಂದೋರ್‌ನಲ್ಲಿ ಆರಂಭವಾಗಲಿದೆ. ಆದರೆ ಈ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ನಾಯಕ ವಿರಾಟ್‌ಕೋಹ್ಲಿ ಪಿಂಕ್ ಬಾಲ್ ಕುರಿತಾಗಿನ ತಮ್ಮ ಮೊದಲ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತ -ಬಾಂಗ್ಲಾ ನಡುವಿನ ಎರಡನೇ ಪಂದ್ಯ ಡೇ&ನೈಟ್ ಪಂದ್ಯವಾಗಿರಲಿದ್ದು ಐತಿಹಾಸಿಕವಾಗಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.

ನಾಳೆಯಿಂದ ಮೊದಲ ಪಂದ್ಯ ಆರಂಭವಾಗಲಿದ್ದು ಅದಕ್ಕೂ ಮುನ್ನ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೋಹ್ಲಿ ಪ್ರತಿಕ್ರಿಯಿಸಿದ್ರು. ಈ ಸಂದರ್ಭದಲ್ಲಿ ಕೋಹ್ಲಿ ಪಿಂಕ್ ಬಾಲ್ ಅನುಭವ ಹಂಚಿಕೊಂಡರು

ಮೊದಲ ಟೆಸ್ಟ್‌ನ ಭಾರತದ ಸಂಭಾವ್ಯ ಪ್ಲೇಯಿಂಗ್ XI ತಂಡಮೊದಲ ಟೆಸ್ಟ್‌ನ ಭಾರತದ ಸಂಭಾವ್ಯ ಪ್ಲೇಯಿಂಗ್ XI ತಂಡ

ಟೀಮ್ ಇಂಡಿಯಾ ಆಟಗಾರು ಪಿಂಕ್ ಬಾಲ್ ಹೇಗೆ ವರ್ತಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಅಭ್ಯಾಸವನ್ನು ನಡೆಸಿದ್ದಾಗಿ ತಿಳಿಸಿದರು. 'ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ನಲ್ಲಿ ಆಡಿದ್ದೇನೆ. ಚೆಂಡನ್ನು ಪಿಕ್ ಮಾಡಲು ಸ್ವಲ್ಪ ಹೆಚ್ಚಿನ ಏಕಾಗ್ರತೆಯ ಅವಶ್ಯಕತೆಯಿದೆ' ಎಂದು ತಮ್ಮ ಅನುಭವ ಹಂಚಿಕೊಂಡರು.

ಕೆಂಪು ಬಾಲ್‌ನಲ್ಲಿ ಆಡಿದ ಬಳಿಕ ಪಿಂಕ್ ಬಾಲ್‌ನಲ್ಲಿ ಆಡಿದರೆ ಸ್ವಲ್ಪ ಹೆಚ್ಚಿನ ಏಕಾಗ್ತತೆಯನ್ನು ನೀಡಬೇಕಾಗುತ್ತದೆ. ಮಾತ್ರವಲ್ಲ ಕೆಂಪುಬಾಲ್‌ಗೆ ಹೋಲಿಸಿದರೆ ಪಿಂಕ್ ಬಾಲ್ ಹೆಚ್ಚೇ ಸ್ವಿಂಗ್ ಆಗುತ್ತದೆ. ವೇಗದ ಎಸೆತಗಳು ಹೆಚ್ಚಿನ ಸ್ವಿಂಗ್ ಪಡೆಯುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಅಂಪೈರನ್ನೇ ಒಮ್ಮೆ ಯಾಮಾರಿಸಿದ ಕೀರನ್ ಪೊಲಾರ್ಡ್: ವೈರಲ್ ವಿಡಿಯೋಅಂಪೈರನ್ನೇ ಒಮ್ಮೆ ಯಾಮಾರಿಸಿದ ಕೀರನ್ ಪೊಲಾರ್ಡ್: ವೈರಲ್ ವಿಡಿಯೋ

ಭಾರತ ಬಾಂಗ್ಲಾದೇಶ ನಡುವಿನ ಡೇ&ನೈಟ್ ಪಂದ್ಯ ನವೆಂಬರ್ 22ನೇ ತಾರೀಕು ಈಡನ್ ಗಾರ್ಡನ್ ಮೈದಾನದಲ್ಲಿ ಆರಂಭವಾಗಲಿದೆ.

Story first published: Wednesday, November 13, 2019, 18:03 [IST]
Other articles published on Nov 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X