ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅವರು ಕರೆದಾಗ ಆರ್‌ಸಿಬಿ ಬಿಟ್ಟು ಬೇರೆ ತಂಡ ಸೇರಲು ಸಿದ್ಧನಾಗಿದ್ದೆ ಆದರೆ ಈ ಕಾರಣದಿಂದ ಆಗಲಿಲ್ಲ ಎಂದ ಕೊಹ್ಲಿ

Virat Kohli Reveals That Some Franchises Have Asked Him To Enter IPL Auction previously

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭವಾದಾಗಿನಿಂದ ಇಲ್ಲಿಯವರೆಗೂ ಕೂಡ ಒಂದೇ ಫ್ರಾಂಚೈಸಿ ಪರ ಆಡುತ್ತಿರುವ ಕ್ರಿಕೆಟಿಗ ಯಾರು ಎಂಬ ಪ್ರಶ್ನೆ ಎದುರಾದಾಗ ಪ್ರತಿಯೊಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ ವೀಕ್ಷಕ ಕೂಡ ಹೇಳುವ ಮೊದಲ ಉತ್ತರವೇ ವಿರಾಟ್ ಕೊಹ್ಲಿ ಎಂದು. ಹೌದು, 2008ರಲ್ಲಿ ಆಗತಾನೆ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸಿ ಟ್ರೋಫಿಯನ್ನು ಗೆದ್ದಿದ್ದ ವಿರಾಟ್ ಕೊಹ್ಲಿ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ತೆಕ್ಕೆಗೆ ಬಿದ್ದಿದ್ದರು. ಹೀಗೆ ಅಂತರರಾಷ್ಟ್ರೀಯ ಪುರುಷರ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೆರ್ಸಿ ತೊಟ್ಟಿದ್ದ ವಿರಾಟ್ ಕೊಹ್ಲಿ ಇಂದಿಗೂ ಸಹ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿ ಉಳಿದುಕೊಂಡಿದ್ದಾರೆ.

ಕೊಹ್ಲಿ ಚಾಹಲ್‌ಗೆ ನೀಡಿದ ಆ ಉಪಾಯದಿಂದ ಬಿತ್ತು ಪೊಲಾರ್ಡ್ ವಿಕೆಟ್!; ವಿಡಿಯೋ ವೈರಲ್ಕೊಹ್ಲಿ ಚಾಹಲ್‌ಗೆ ನೀಡಿದ ಆ ಉಪಾಯದಿಂದ ಬಿತ್ತು ಪೊಲಾರ್ಡ್ ವಿಕೆಟ್!; ವಿಡಿಯೋ ವೈರಲ್

ಟೀಮ್ ಇಂಡಿಯಾದ ಬಹುತೇಕ ದೊಡ್ಡ ದೊಡ್ಡ ಆಟಗಾರರು ಹಲವಾರು ಫ್ರಾಂಚೈಸಿಗಳ ಪರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ತಾನು ಎಷ್ಟು ದಿನಗಳವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಡುತ್ತೇನೋ ಅಷ್ಟೂ ದಿನಗಳೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವೇ ಕಣಕ್ಕಿಳಿಯುತ್ತೇನೆ ಎಂಬ ಹೇಳಿಕೆ ನೀಡುವುದರ ಮೂಲಕ ತಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಖಾಯಂ ಸದಸ್ಯ ಎಂಬುದನ್ನು ಬಹಿರಂಗಪಡಿಸಿದ್ದರು. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಈ ಹಿಂದಿನಿಂದಲೂ ವಿರಾಟ್ ಕೊಹ್ಲಿ ಎಂದರೆ ವಿಶೇಷ ಪ್ರಾತಿನಿಧ್ಯವನ್ನು ನೀಡುತ್ತಾ ಬರುತ್ತಿದೆ.

ರೋಹಿತ್ ಆಗಮನ ತಂಡಕ್ಕೆ ಬಲ ತಂದಿದೆ ಆದರೆ ಇವರದ್ದೇ ತಲೆನೋವು ಎಂದ ಅಗರ್ಕರ್ರೋಹಿತ್ ಆಗಮನ ತಂಡಕ್ಕೆ ಬಲ ತಂದಿದೆ ಆದರೆ ಇವರದ್ದೇ ತಲೆನೋವು ಎಂದ ಅಗರ್ಕರ್

2013ರಿಂದ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ನೀಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಬಾರಿ ವಿರಾಟ್ ಕೊಹ್ಲಿ ನಾಯಕತ್ವವನ್ನು ತ್ಯಜಿಸಿದರೂ ಕೂಡ ರಿಟೆನ್ಷನ್ ಪ್ರಕ್ರಿಯೆಯಲ್ಲಿ ಮೊದಲನೇ ಆಟಗಾರನನ್ನಾಗಿ ಕೊಹ್ಲಿಯನ್ನು ಉಳಿಸಿಕೊಂಡಿತು. ಹೀಗೆ ವಿರಾಟ್ ಕೊಹ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಡುವೆ ಉತ್ತಮ ಬಾಂಧವ್ಯವಿದ್ದು, ಈ ಹಿಂದೆ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯನ್ನು ತ್ಯಜಿಸುವಂತಹ ಯೋಚನೆ ಬಂದಿತ್ತು ಎಂಬ ವಿಷಯವನ್ನು ತಿಳಿಸಿದ್ದು, ಈ ಕೆಳಗಿನಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಕೆಲವು ಬಾರಿ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಯೋಚಿಸಿದ್ದೆ

ಕೆಲವು ಬಾರಿ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಯೋಚಿಸಿದ್ದೆ

ಸದಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುವ ಇಂಗಿತವನ್ನು ವ್ಯಕ್ತ ಪಡಿಸಿರುವ ವಿರಾಟ್ ಕೊಹ್ಲಿ ಈ ಹಿಂದೆ ತಮಗೆ ಕೆಲವು ಬಾರಿ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ಬೇಡಿಕೆಗಳು ಬಂದಿದ್ದವು ಎಂದಿದ್ದಾರೆ. ಹೌದು, ಈ ಹಿಂದೆ ಇತರೆ ಫ್ರಾಂಚೈಸಿಗಳಿಂದ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳುವಂತೆ ವಿರಾಟ್ ಕೊಹ್ಲಿಗೆ ಮನವಿಗಳು ಬಂದಿತ್ತು ಎಂಬ ವಿಷಯವನ್ನು ಸ್ವತಃ ವಿರಾಟ್ ಕೊಹ್ಲಿ ಅವರೇ ಬಿಚ್ಚಿಟ್ಟಿದ್ದಾರೆ. ಹಾಗೂ ಈ ಬೇಡಿಕೆಗಳ ಬಗ್ಗೆ ಅಂದು ತಾನು ಕೆಲ ಸಮಯದವರೆಗೆ ಚಿಂತನೆಯನ್ನು ಕೂಡ ನಡೆಸಿದ್ದೆ ಎಂಬ ವಿಷಯವನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ.

ಈ ಕಾರಣದಿಂದ ಬೇರೆ ತಂಡಕ್ಕೆ ಹೋಗಲಿಲ್ಲ ಎಂದ ಕೊಹ್ಲಿ

ಈ ಕಾರಣದಿಂದ ಬೇರೆ ತಂಡಕ್ಕೆ ಹೋಗಲಿಲ್ಲ ಎಂದ ಕೊಹ್ಲಿ

ಇನ್ನೂ ಮುಂದುವರಿದು ಮಾತನಾಡಿರುವ ವಿರಾಟ್ ಕೊಹ್ಲಿ ತಾನು ಅವಕಾಶಗಳು ಇದ್ದರೂ ಸಹ ಮೆಗಾ ಹರಾಜಿನಲ್ಲಿ ಏಕೆ ಭಾಗವಹಿಸಲಿಲ್ಲ ಎಂಬುದಕ್ಕೆ ಕಾರಣವನ್ನು ಕೂಡ ತಿಳಿಸಿದ್ದಾರೆ. ತಾನು ಅಂಡರ್ 19 ವಿಶ್ವಕಪ್ ತಂಡದ ಭಾಗವಾಗಿದ್ದಾಗ ತನ್ನನ್ನು ಗುರುತಿಸಿ ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮೇಲೆ ಮೊದಲ 3 ವರ್ಷಗಳ ಕಾಲ ಭರವಸೆಯನ್ನು ಇಟ್ಟು ಪದೇಪದೆ ಅವಕಾಶಗಳನ್ನು ನೀಡಿತ್ತು. ಇಂಥ ಉತ್ತಮ ಫ್ರಾಂಚೈಸಿಯನ್ನು ಬಿಟ್ಟು ಬೇರೆ ತಂಡದ ಪರ ಆಟವನ್ನಾಡಲು ತನ್ನ ಮನಸ್ಸು ಒಪ್ಪಲಿಲ್ಲ ಎಂಬುದನ್ನು ವಿರಾಟ್ ಕೊಹ್ಲಿ ತಿಳಿಸಿದ್ದಾರೆ.

ಹಿಟ್ ಮ್ಯಾನ್ ಹೊಡೆದ ಸಿಕ್ಸ್ ನೋಡಿ ದಂಗಾದ ಪೊಲ್ಲಾರ್ಡ್ ರಿಯಾಕ್ಷನ್ ಫುಲ್ ವೈರಲ್ | Oneindia Kannada
ಟ್ರೋಫಿಗಳಿಗಿಂತ ವ್ಯಕ್ತಿ ಮುಖ್ಯ

ಟ್ರೋಫಿಗಳಿಗಿಂತ ವ್ಯಕ್ತಿ ಮುಖ್ಯ

ಎಷ್ಟೇ ಟ್ರೋಫಿಗಳನ್ನು ಗೆದ್ದರೂ ಸಹ ಆಟಗಾರರನ್ನು ಗುರುತಿಸುವಾಗ ಈತ ಎಷ್ಟು ಟ್ರೋಫಿ ಗೆದ್ದಿದ್ದಾನೆ ಎಂದು ಗುರುತಿಸುವುದಿಲ್ಲ ಬದಲಾಗಿ ಒಳ್ಳೆತನ ಮುಖ್ಯವಾಗುತ್ತದೆ ಎಂದು ಕೊಹ್ಲಿ ಹೇಳಿದ್ದಾರೆ. ನೀವು ಒಳ್ಳೆಯ ವ್ಯಕ್ತಿಯಾಗಿದ್ದರೆ ಜನ ನಿಮ್ಮ ಸನಿಹ ಬರುತ್ತಾರೆ, ಇಲ್ಲವಾದರೆ ನಿಮ್ಮಿಂದ ದೂರ ಇರುತ್ತಾರೆ ಎಂದು ವಿರಾಟ್ ಕೊಹ್ಲಿ ಹೇಳಿಕೆ ನೀಡುವುದರ ಮೂಲಕ ತಂಡದ ಜತೆ ಉತ್ತಮ ಬಾಂಧವ್ಯ ಇಲ್ಲದಿರುವ ಆಟಗಾರರನ್ನು ಫ್ರಾಂಚೈಸಿ ಕೈಬಿಡಲಿದೆ ಎಂಬುದನ್ನು ತಿಳಿಸಿದ್ದಾರೆ.

Story first published: Monday, February 7, 2022, 16:25 [IST]
Other articles published on Feb 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X