ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚಿಕನ್ ಬಿರಿಯಾನಿ ಪ್ರಿಯ ವಿರಾಟ್ ಕೊಹ್ಲಿ ಮಾಂಸಾಹಾರ ತ್ಯಜಿಸಿದ್ದೇಕೆ?

ಬೆಂಗಳೂರು, ಏಪ್ರಿಲ್ 4: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ನೆಚ್ಚಿನ ಬಿರಿಯಾನಿ ತಿನ್ನೋದು ಬಿಟ್ಟು ತರಕಾರಿ, ಸೊಪ್ಪು, ಡಯೆಟ್ ತೆಗೆದುಕೊಳ್ಳುವುದೇಕೆ? ಇದಕ್ಕೆ ಪತ್ನಿ ಅನುಷ್ಕಾ ಶರ್ಮ ಕಾರಣವೇ? ಎಂಬ ಪ್ರಶ್ನೆಗೆ ಎರಡು ಮೂರು ವರ್ಷಗಳ ಹಿಂದೆಯೇ ಉತ್ತರ ಸಿಕ್ಕಿದೆ. ಈಗ ಅಸಲಿ ರಹಸ್ಯವನ್ನು ಕೊಹ್ಲಿ ಬಿಚ್ಚಿಟ್ಟಿದ್ದಾರೆ.

ದೇಶದೆಲ್ಲೆಡೆ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಮಾಜಿ ಕ್ರಿಕೆಟರ್ ಕೆವಿನ್ ಪೀಟರ್ಸನ್ ಜೊತೆ ಇನ್ಸ್ಟ್ರಾಗ್ರಾಂದಲ್ಲಿ ಮಾತನಾಡುತ್ತಾ, 2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಉಂಟಾದ ಆರೋಗ್ಯ ಸಮಸ್ಯೆಯೇ ಇದಕ್ಕೆ ಕಾರಣ ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್, ಕಳಪೆ ಫಾರ್ಮ್ ನಿಂದ ಚಿಂತೆಗೊಳಗಾದ ಸಂದರ್ಭ, ಸಂಪೂರ್ಣವಾಗಿ ಮಾಂಸಾಹಾರ ತೊರೆದಿದ್ದೇಕೆ? ಕೊವಿಡ್19 ಸಂದರ್ಭದಲ್ಲಿ ಹೇಗೆ ಕಾಲಕಳೆಯುತ್ತಿದ್ದೇನೆ ಎಂಬುದನ್ನು ಕೊಹ್ಲಿ ಹೇಳಿಕೊಂಡರು.

ಕೊಹ್ಲಿ ಸಸ್ಯಾಹಾರಿಯಾಗಿದ್ದೇಕೆ

ಕೊಹ್ಲಿ ಸಸ್ಯಾಹಾರಿಯಾಗಿದ್ದೇಕೆ

2018ರ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಕುತಿಗೆ ಭಾಗದ ಬೆನ್ನುಹುರಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಜೊತೆಗೆ ಕಿರು ಬೆರಳಲ್ಲೂ ನೋವು ಹೆಚ್ಚಾಗಿತ್ತು. ಸೆಂಚುರಿಯನ್ ಟೆಸ್ಟ್ ಸಂದರ್ಭದಲ್ಲಿ ತೀವ್ರ ನೋವಿನಲ್ಲೇ ಆಟವಾಡಿದೆ. ಇದಲ್ಲದೆ, ಹೊಟ್ಟೆಯಲ್ಲಿನ ಯೂರಿಕ್ ಆಮ್ಲ ಅಧಿಕವಾಗಿ, ಮೂಳೆಗಳಲ್ಲಿನ ಕ್ಯಾಲ್ಸಿಯಂ ಅಂಶ ತಗ್ಗುತ್ತಿತ್ತು. ಇದೆಲ್ಲವೂ ಬೆನ್ನುನೋವಿಗೆ ಕಾರಣವಾಗಿತ್ತು. ವೈದ್ಯರ ಸಲಹೆ ಮೇರೆಗೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಜಿಸಿದೆ. ನಂತರ ಈ ರೀತಿ ಸಮಸ್ಯೆ ಕಾಣಿಸಿಕೊಳ್ಳಲಿಲ್ಲ ಎಂದು ಕೊಹ್ಲಿ ವಿವರವಾಗಿ ಹೇಳಿದರು.

ಫಿಟ್ನೆಸ್ ಉಳಿಸಿಕೊಳ್ಳಲು ಕಠಿಣ ನಿರ್ಧಾರ

ಫಿಟ್ನೆಸ್ ಉಳಿಸಿಕೊಳ್ಳಲು ಕಠಿಣ ನಿರ್ಧಾರ

ಫಿಟ್ನೆಸ್ ಕಾಪಾಡಿಕೊಳ್ಳಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು. ಆನಂತರ ಕೇವಲ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಿದ್ದೇನೆ. ಮೊಟ್ಟೆ ಹಾಗೂ ಇತರೆ ಡೇರಿ ಉತ್ಪನ್ನಗಳು, ಪ್ರಾಣಿಜನ್ಯ ಪ್ರೋಟಿನ್ ಸೇವನೆಯಿಂದ ದೂರವಿದ್ದೇನೆ. ಇದರಿಂದ ಉತ್ತಮ ಫಲಿತಾಂಶ ಸಿಕ್ಕಿದೆ ಎಂದಿದ್ದಾರೆ.

ಯೋ ಯೋ ಟೆಸ್ಟ್ ನಲ್ಲೂ ಮಿಂಚಿದ್ದ ಕೊಹ್ಲಿ

ಯೋ ಯೋ ಟೆಸ್ಟ್ ನಲ್ಲೂ ಮಿಂಚಿದ್ದ ಕೊಹ್ಲಿ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಯೋ-ಯೋ ಟೆಸ್ಟ್ ನಲ್ಲಿ ಪಾಸಾಗಲೇಬೇಕೆಂಬ ಮಾನದಂಡವಿದೆ. ಇದರಲ್ಲಿ ಕೊಹ್ಲಿ 19 ಅಂಕ ಪಡೆದು ಗುರುತಿಸಿಕೊಂಡಿದ್ದರು. ಆದರೆ 32ರ ಹರೆಯದ ಹಾಕಿ ಮಿಡ್ ಫೀಲ್ಡರ್ ಸರ್ದಾರ್ 21.4 ಅಂಕಗಳಿಂದ ಕೊಹ್ಲಿಯನ್ನು ಸರಿಗಟ್ಟುವ ಮೂಲಕ ತಾನು ಕೊಹ್ಲಿಗಿಂತ ಫಿಟ್ ಎಂದು ತೋರಿಸಿಕೊಟ್ಟಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಾದರೆ ಆಟಗಾರನೊಬ್ಬ ಯೋ-ಯೋ ಟೆಸ್ಟ್ ನಲ್ಲಿ ಕನಿಷ್ಠ 16.1 ಅಂಕ ಪಡೆಯಬೇಕೆಂಬ ಮಾನದಂಡವನ್ನು ಬಿಸಿಸಿಐ ವಿಧಿಸಿದೆ.

ಪತ್ನಿ ಅನುಷ್ಕಾ ಪ್ರಭಾವದಿಂದ ಸಸ್ಯಾಹಾರಿ

ಪತ್ನಿ ಅನುಷ್ಕಾ ಪ್ರಭಾವದಿಂದ ಸಸ್ಯಾಹಾರಿ

ಸಸ್ಯಾಹಾರ, ಪ್ರಾಣಿ ಪ್ರಿಯ, ಪರಿಸರ ಪ್ರೇಮದ ಪರ ಜಾಗೃತಿ ಮೂಡಿಸುವ ನಟಿ ಅನುಷ್ಕಾ ಶರ್ಮ ಅವರು ಅನೇಕ ವರ್ಷಗಳಿಂದ ಸಮತೋಲನ ಆಹಾರ ಪದ್ಧತಿ ಅನುಸರಿಸುತ್ತಿದ್ದಾರೆ. ಕೊಹ್ಲಿ ಅವರು ಈ ಮುಂಚೆ ಚಿಕನ್ ಸೇವಿಸುತ್ತಿದ್ದರೂ, ಸಾಕಷ್ಟು ಸಮಯ ಜಿಮ್ ನಲ್ಲಿ ಬೆವರು ಹರಿಸಿ ಫಿಟ್ ಆಗುತ್ತಿದ್ದರು. ಆದರೆ, ಸ್ನಾಯು ಸೆಳೆತ ಬಾಧಿಸುತ್ತಿತ್ತು. ಈಗ ಪತ್ನಿ ಅನುಷ್ಕಾ ಪ್ರಭಾವದಿಂದ ಸಸ್ಯಾಹಾರಿಯಾಗಿದ್ದು, ಅನೇಕ ಆರೋಗ್ಯ ಸಮಸ್ಯೆಗಳು ದೂರಾಗಿವೆಯಂತೆ.

ಕೊಹ್ಲಿ ಫಿಟ್ನೆಸ್ ಅನೇಕರಿಗೆ ಪ್ರೇರಣೆ

ಕೊಹ್ಲಿ ಫಿಟ್ನೆಸ್ ಅನೇಕರಿಗೆ ಪ್ರೇರಣೆ

ಈಗಿನ ಆಹಾರ ಪದ್ಧತಿ ನನ್ನನ್ನು ಹೆಚ್ಚೆಚ್ಚು ಸಂಯಮದಿಂದ ವರ್ತಿಸಲು ಪ್ರೇರೇಪಿಸುತ್ತಿದೆ ಎಂದು ಕೊಹ್ಲಿ ಹೇಳಿದ್ದಾರೆ. ಅಫ್ಘನ್ ತಂಡದ ಫಿಸಿಯೋ ಮತ್ತು ಕಂಡಿಶನಿಂಗ್ ಕೋಚ್‌ಗಳು ಸಹ ಕೊಹ್ಲಿ ಅನುಸರಿಸುವ ಫಿಟ್‌ನೆಸ್‌ ತಂತ್ರಗಳನ್ನೇ ಆಟಗಾರರ ಮೇಲೂ ಪ್ರಯೋಗಿಸಿದ್ದಾರೆ ಹಾಗಾಗಿ ಎಲ್ಲ ಆಟಗಾರ ಫಿಟ್‌ನೆಸ್‌ನಲ್ಲೂ ಸಾಕಷ್ಟು ಪ್ರಗತಿ ಕಂಡಿದೆ ಎನ್ನುತ್ತಾರೆ ಅಫ್ಘನ್ ತಂಡದ ವ್ಯವಸ್ಥಾಪಕ. ಹೀಗಾಗಿ, ಅನೇಕರಿಗೆ ಕೊಹ್ಲಿ ಪ್ರೇರಣೆಯಾಗಿದ್ದಾರೆ.

Story first published: Saturday, April 4, 2020, 14:13 [IST]
Other articles published on Apr 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X