ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

KKR ವಿರುದ್ಧ ಧೂಳೆಬ್ಬಿಸಿದ ಸಿರಾಜ್ ಬದಲು, ವಾ. ಸುಂದರ್‌ಗೆ ಬೌಲಿಂಗ್‌ ಕೊಡಲು ಯೋಚಿಸಿದ್ದ ಕೊಹ್ಲಿ

Virat Kohli Reveals Was Thinking Of Giving The Ball To Sundar Instead Of Siraj

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬುಧವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯದೊಂದಿಗೆ ಪ್ಲೇಆಫ್ ಸ್ಥಾನಕ್ಕೆ ಇನ್ನಷ್ಟು ಹತ್ತಿರವಾಗಿದೆ. ಹತ್ತು ಪಂದ್ಯಗಳಲ್ಲಿ ಆರ್‌ಸಿಬಿಯು ಏಳನೇ ಗೆಲುವು ಕಂಡು, ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

ಸಾಧಾರಣ 85 ರನ್ನು ಬೆನ್ನಟ್ಟಿದ ಆರ್‌ಸಿಬಿ 14 ನೇ ಓವರ್‌ನಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಅಂತಿಮ ಗೆರೆಯನ್ನು ದಾಟಿತು. ಓಪನರ್ ದೇವದತ್ ಪಡಿಕ್ಕಲ್ ಮತ್ತು ಆರೋನ್ ಫಿಂಚ್ ಏಳನೇ ಓವರ್‌ನಲ್ಲಿ ನಿರ್ಗಮಿಸುವ ಮೊದಲು ಮೊದಲ ವಿಕೆಟ್‌ಗೆ 46 ರನ್ ಸೇರಿಸುವ ಮೂಲಕ ಸುಲಭ ಗೆಲುವಿಗೆ ವೇದಿಕೆ ಕಲ್ಪಿಸಿದರು. ನಂತರ ವಿರಾಟ್ ಕೊಹ್ಲಿ ಮತ್ತು ಗುರಕೀರತ್ ಮನ್ ಅಜೇಯ 39 ರನ್ ಗಳಿಸಿ ತಂಡವನ್ನು ದಡ ಮುಟ್ಟಿಸಿದರು.

ಐಪಿಎಲ್ : ಕೆಕೆಆರ್ ಸೋಲಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ವಿರಾಟ್ ಪಡೆಐಪಿಎಲ್ : ಕೆಕೆಆರ್ ಸೋಲಿಸಿ, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ವಿರಾಟ್ ಪಡೆ

ಇದಕ್ಕೂ ಮುನ್ನ ಆರ್‌ಸಿಬಿ ಕೆಕೆಆರ್ ಅನ್ನು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 84 ರನ್‌ಗೆ ಸೀಮಿತಗೊಳಿಸಿತು. ಮೊದಲು ಬ್ಯಾಟಿಂಗ್ ಮಾಡುವ ಇಯಾನ್ ಮೋರ್ಗಾನ್ ಅವರ ನಿರ್ಧಾರವನ್ನು ಆರ್‌ಸಿಬಿ ಬೌಲರ್‌ಗಳು ಸಂಪೂರ್ಣವಾಗಿ ತಲೆಕೆಳಗಾಗಿ ಮಾಡಿದರು. ಏಕೆಂದರೆ ಕೆಕೆಆರ್ ಅನ್ನು ನಾಲ್ಕು ಓವರ್‌ಗಳಲ್ಲಿ ಕೆಕೆಆರ್‌ನ 4 ವಿಕೆಟ್ ಎಗರಿಸಿದರು.

ಎರಡನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಅವರು ರಾಹುಲ್ ತ್ರಿಪಾಠಿ ಮತ್ತು ನಿತೀಶ್ ರಾಣಾ ಅವರನ್ನು ಸತತ ಎಸೆತಗಳಲ್ಲಿ ಪೆವಿಲಿಯನ್‌ಗೆ ಕಳುಹಿಸಿದರು. ಮೂರನೇ ಓವರ್‌ನಲ್ಲಿ, ನವದೀಪ್ ಸೈನಿ ಶುಭಮನ್ ಗಿಲ್ ವಿಕೆಟ್ ಪಡೆದರೆ, ನಾಲ್ಕನೇ ಓವರ್‌ನಲ್ಲಿ ಸಿರಾಜ್ ಮತ್ತೆ ಅಬ್ಬರಿಸಿ ಟಾಮ್ ಬ್ಯಾಂಟನ್‌ನನ್ನು ಬಲಿ ಪಡೆದರು. ಈ ಮೂಲಕ ಕೆಕೆಆರ್ 14 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡಿತು.

ಪಂದ್ಯದ ಕೊನೆಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಸಿರಾಜ್ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಎರಡನೇ ಓವರ್ ನೀಡುವ ಬಗ್ಗೆ ಆರಂಭದಲ್ಲಿ ಯೋಚಿಸುತ್ತಿದ್ದೇನೆ ಎಂದು ಬಹಿರಂಗಪಡಿಸಿದರು. ವಿರಾಟ್ ಕೊಹ್ಲಿ ಕೂಡ ವಿಮರ್ಶಕರತ್ತ ತಮ್ಮ ಮಾತಿನ ಚಾಟಿ ಬೀಸಿದರು. 'ಬಹಳಷ್ಟು ಜನರು' ಆರ್‌ಸಿಬಿಯಲ್ಲಿ ನಂಬಿಕೆ ಹೊಂದಿಲ್ಲವಾದರೂ, ಆಟಗಾರರು ಇದ್ದಾರೆ ಎಂದು ಹೇಳಿದರು. ಆಲ್ರೌಂಡರ್ ಕ್ರಿಸ್ ಮೋರಿಸ್ ಅವರನ್ನು ಶ್ಲಾಘಿಸಿದರು.

ಇನ್ನು ಇಯಾನ್ ಮಾರ್ಗನ್ ಕೂಡ ತಾವು ಮೊದಲು ಬೌಲಿಂಗ್ ಮಾಡಬೇಕಿತ್ತು ಎಂದು ತಪ್ಪನ್ನು ಒಪ್ಪಿಕೊಂಡರು.

Story first published: Thursday, October 22, 2020, 10:09 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X