ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಬ್‌ ಬ್ರ್ಯಾಂಟ್‌ ನಿಧನಕ್ಕೆ ಮರುಗಿದ ಕೊಹ್ಲಿ, ರೋಹಿತ್, ಬೂಮ್ರಾ, ಶ್ರೇಯಸ್

ಬ್ರ್ಯಾಂಟ್ ನಿಧನಕ್ಕೆ ಸಂತಾಪ ಸೂಚಿಸಿದ ವಿರಾಟ್, ರೋಹಿತ್ | VIRAT KOHLI | ROHIT SHARMA | KOBE | MAMBA
Virat Kohli, Rohit Sharma condoles demise of Kobe Bryant

ಬೆಂಗಳೂರು, ಜನವರಿ 27: ಬಾಸ್ಕೆಟ್‌ ಬಾಲ್‌ ಲೋಕದ ದಂತಕತೆ ಅಮೆರಿಕಾದ ಕೋಬ್‌ ಬ್ರ್ಯಾಂಟ್‌ ಮತ್ತವರ ಪುತ್ರಿ ಗಿಯಾನ್ನಾ ಮಾರಿಯಾ ಒನೋರ್ ಬ್ರ್ಯಾಂಟ್ ಅಕಾಲಿಕ ಮರಣಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ ಸೇರಿದಂತೆ ಭಾರತದ ಅನೇಕ ಕ್ರಿಕೆಟಿಗರೂ ಬ್ರ್ಯಾಂಟ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಹೆಲಿಕಾಪ್ಟರ್ ಅಪಘಾತ: ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣಹೆಲಿಕಾಪ್ಟರ್ ಅಪಘಾತ: ಬಾಸ್ಕೆಟ್‌ಬಾಲ್ ದಂತಕಥೆ ಬ್ರ್ಯಾಂಟ್ ದುರ್ಮರಣ

ಅಪ್ಪನಂತೆ ಮಗಳೂ ಬಾಸ್ಕೆಟ್‌ ಬಾಲ್‌ ಆಟಗಾರ್ತಿ. ಭಾನುವಾರ ತೌಂಸಾಂಡ್ ಓಕಾಸ್‌ನ ಮಂಬಾ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆಯಬೇಕಿದ್ದ ಬಾಸ್ಕೆಟ್‌ಬಾಲ್ ಪಂದ್ಯವೊಂದರಲ್ಲಿ ಪಾಲ್ಗೊಳ್ಳಲು ಬ್ರ್ಯಾಂಟ್‌ ಮತ್ತು ಗಿಯಾನ ಹೆಲಿಕಾಪ್ಟರ್‌ನಲ್ಲಿ ತೆರಳುತ್ತಿದ್ದರು. ಮಗಳಿದ್ದ ತಂಡಕ್ಕೆ ಕೋಚ್‌ ಆಗಿದ್ದರಿಂದ ಬ್ರ್ಯಾಂಟ್‌ ಕೂಡ ಹೆಲಿಕಾಪ್ಟರ್‌ನಲ್ಲಿದ್ದರು.

ನ್ಯೂಜಿಲೆಂಡ್‌ಗೂ ಬಂದ 'ಹೌದು ಹುಲಿಯಾ', 'ಮಿಣಿಮಿಣಿ ಪೌಡರ್': ವೀಡಿಯೋನ್ಯೂಜಿಲೆಂಡ್‌ಗೂ ಬಂದ 'ಹೌದು ಹುಲಿಯಾ', 'ಮಿಣಿಮಿಣಿ ಪೌಡರ್': ವೀಡಿಯೋ

ಬ್ರ್ಯಾಂಟ್‌, ಗಿಯಾನ್ನಾ ಅವರಿದ್ದ ಹೆಲಿಕಾಪ್ಟರ್, ಕ್ಯಾಲಿಫೋರ್ನಿಯಾದ ಕಾಲಬಾಸಾಸ್ ಎಂಬ ಬೆಟ್ಟದ ಬಳಿಕ ಭಾನುವಾರ ಅಪಘಾತಕ್ಕೀಡಾಗಿದೆ. 41ರ ಹರೆಯದ ಬ್ರ್ಯಾಂಟ್‌ ಮತ್ತು 13ರ ಹರೆಯದ ಗಿಯಾನ್ನ ಇಬ್ಬರೂ ದುರ್ಘಟನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಚಿನ್ ತೆಂಡೂಲ್ಕರ್ ಸಂತಾಪ

ಹೆಲಿಕಾಪ್ಟರ್ ಅಪಘಾತದಲ್ಲಿ ಮೃತರಾದ ಕೋಬ್ ಬ್ರ್ಯಾಂಟ್‌ಗೆ ಭಾರತದ ಕ್ರಿಕೆಟ್‌ ದಂತಕತೆ ಸಚಿನ್ ತೆಂಡೂಲ್ಕರ್ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಕೋಬ್‌ ಮತ್ತವರ ಮಗಳು ಗಿಯಾನ್ನ ಮೃತರಾದ ವಿಚಾರಕ್ಕೆ ದುಃಖವಾಗಿದೆ. ಅವರ ಕುಟುಂಬ, ಗೆಳೆಯರು ಮತ್ತು ವಿಶ್ವದಗಲದ ಅಭಿಮಾನಿಗಳಿಗೆ ನನ್ನ ಸಂಪಾತಗಳು,' ಎಂದು ಸಚಿನ್ ಬರೆದುಕೊಂಡಿದ್ದಾರೆ.

ಮಹಾನ್ ಚಾಂಪಿಯನ್

ಫಿಲಡೆಲ್ಫಿಯಾದಲ್ಲಿ ಜನಿಸಿದ್ದ ಬ್ರ್ಯಾಂಟ್, ಮೂರನೇ ವರ್ಷದವರಾಗಿದ್ದಾಗಿನಿಂದಲೇ ಬಾಸ್ಕೆಟ್‌ಬಾಲ್ ಆಡಲು ಪ್ರಾರಂಭಿಸಿದ್ದರು. ಬಳಿಕ ಪ್ರತಿಷ್ಠಿತ ಎನ್‌ಬಿಎ (ನ್ಯಾಷನಲ್ ಬಾಸ್ಕೆಟ್‌ಬಾಲ್ ಅಸೋಸಿಯೇಷನ್) ಮಹಾನ್ ಚಾಂಪಿಯನ್‌ಗಳಲ್ಲಿ ಒಬ್ಬರೆಂಬ ಕೀರ್ತಿ ಪಡೆದರು. 1996ರಲ್ಲಿ ಎನ್‌ಬಿಎ ಸೇರಿದಾಗ ಅವರಿಗೆ 18 ವರ್ಷ, 2 ತಿಂಗಳು ಮತ್ತು 11 ದಿನ. ಎನ್‌ಬಿಎ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆ ಅವರದು (ಬ್ರ್ಯಾಂಟ್‌ ಆಡುತ್ತಿದ್ದಾಗಿನ ಕೆಲ ದೃಶ್ಯಗಳು ಮೇಲಿನ ವೀಡಿಯೋದಲ್ಲಿದೆ).

ಮರುಗಿದ ವಿರಾಟ್ ಕೊಹ್ಲಿ

ಮರುಗಿದ ವಿರಾಟ್ ಕೊಹ್ಲಿ

ಇವತ್ತು ಈ ಸುದ್ದಿ ಕೇಳಲು ಆಘಾತವೆನಿಸುತ್ತಿದೆ. ಬಾಲ್ಯದಲ್ಲಿ ಬೇಗನೆ ಎದ್ದು ಈ ಮಾಂತ್ರಿಕನ ಆಟ ನೋಡಲು ಕುಳಿತುಕೊಳ್ಳುತ್ತಿದ್ದ ಅದೆಷ್ಟೋ ನೆನಪುಗಳು ಕಣ್ಣಮುಂದೆ ಬರುತ್ತಿವೆ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೇಸರದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಸಾಲುಗಳನ್ನು ಬರೆದುಕೊಂಡಿದ್ದಾರೆ.

ರೋಹಿತ್, ಶ್ರೇಯಸ್, ಬೂಮ್ರಾ ಬೇಸರ

ರೋಹಿತ್, ಶ್ರೇಯಸ್, ಬೂಮ್ರಾ ಬೇಸರ

ಬಾಸ್ಕೆಟ್‌ ಬಾಲ್ ದಿಗ್ಗಜನ ಸಾವಿಗೆ ಸಂತಾಪ ಸೂಚಿಸಿ ಭಾರತದ ಅನೇಕ ಕ್ರೀಡಾಪಟುಗಳು, ಕ್ರಿಕೆಟಿಗರು, ಚಿತ್ರನಟರು ಸೇರಿದಂತೆ ಅನೇಕರು ಟ್ವಿಟರ್-ಇನ್‌ಸ್ಟಾಗ್ರಾಮ್‌ನಲ್ಲಿ ಸಾಲುಗಳನ್ನು ಬರೆದುಕೊಂಡಿದ್ದಾರೆ. ಭಾರತದ ಉಪನಾಯಕ ರೋಹಿತ್ ಶರ್ಮಾ, ವೇಗಿ ಜಸ್‌ಪ್ರೀತ್‌ ಬೂಮ್ರಾ, ಬ್ಯಾಟ್ಸ್‌ಮನ್ ಶ್ರೇಯಸ್ ಐಯ್ಯರ್ ಕೂಡ ವಿಷಾದ ತೋರಿಕೊಂಡಿದ್ದಾರೆ.

Story first published: Monday, January 27, 2020, 16:43 [IST]
Other articles published on Jan 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X