ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಂಡೀಸ್‌ ಪ್ರವಾಸದಲ್ಲಿ ಕೊಹ್ಲಿ-ರೋಹಿತ್‌ ಮುರಿಯಬಹುದಾದ ದಾಖಲೆಗಳಿವು

Virat Kohli & Rohit Sharma 2019.jpg

ಬೆಂಗಳೂರು, ಆಗಸ್ಟ್‌ 01: ವಿಶ್ವಕಪ್‌ ವೈಫಲ್ಯವನ್ನು ಬದಿಗೊತ್ತಿ ಮುಂಬರುವ ಸರಣಿಗಳ ಕಡೆಗೆ ಗಮನ ನೀಡುವ ಕಡೆಗೆ ಟೀಮ್‌ ಇಂಡಿಯಾ ಸಜ್ಜಾಗುತ್ತಿದ್ದು, ಈ ನಿಟ್ಟಿನಲ್ಲಿ ಮೊದಲ ಸವಾಲಾಗಿ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಟಿ20, ಒಡಿಐ ಹಾಗೂ ಟೆಸ್ಟ್‌ ಸರಣಿಗಳನ್ನಾಡಲಿದೆ.

ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌: ಟೀಮ್‌ ಇಂಡಿಯಾದ ವೇಳಾಪಟ್ಟಿ

ಅಂದಹಾಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಉಪನಾಯಕ ರೋಹಿತ್‌ ಶರ್ಮಾ ಅವರಿಗೆ ಮುಂಬರುವ ವಿಂಡೀಸ್‌ ಪ್ರವಾಸದ ಕ್ರಿಕೆಟ್‌ ಸರಣಿಗಳಲ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟುವ ಉತ್ತಮ ಅವಕಾಶವಿದೆ. ಕಿಂಗ್‌ ಕೊಹ್ಲಿ ಮತ್ತು ಹಿಟ್‌ಮ್ಯಾನ್‌ ರೋಹಿತ್‌ ಯಾವ ದಾಖಲೆಗಳನ್ನು ಮುರಿಯಬಲ್ಲರು ಎಂಬುದನ್ನು ಮೈಖೇಲ್‌ ಕನ್ನಡ ಇಲ್ಲಿ ಪಟ್ಟಿ ಮಾಡಿದೆ.

ಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಕನ್ನಡಿಗಟೀಮ್‌ ಇಂಡಿಯಾದ ಬೌಲಿಂಗ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಿದ ಕನ್ನಡಿಗ

ಆಗಸ್ಟ್‌ ಮೂರರಂದು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಮೊದಲ ಟಿ20 ಪಂದ್ಯವನ್ನಾಡಲಿರುವ ಟೀಮ್‌ ಇಂಡಿಯಾ, ಆಗಸ್ಟ್‌ 22ರಂದು ನಡೆಯಲಿರುವ ಮೊದಲ ಟೆಸ್ಟ್‌ ಪಂದ್ಯದ ಮೂಲಕ ತನ್ನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಅಭಿಯಾನವನ್ನೂ ಆರಂಭಿಸಲಿದೆ.

1. ಧೋನಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಕೊಹ್ಲಿ

1. ಧೋನಿ ದಾಖಲೆ ಮುರಿಯುವ ಹೊಸ್ತಿಲಲ್ಲಿ ಕೊಹ್ಲಿ

ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವದಲ್ಲಿ ಇನ್ನೆರಡು ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಟ್ಟರೆ ಎಂ.ಎಸ್‌ ಧೋನಿ ಅವರ ದಾಖಲೆಯನ್ನು ಅಳಿಸಿಹಾಕಲಿದ್ದಾರೆ. ವಿರಾಟ್‌ ತಮ್ಮ ನಾಯಕತ್ವದಲ್ಲಿ ಈವರೆಗೆ ಒಟ್ಟು 26 ಪಂದ್ಯಗಳನ್ನು ಗೆದ್ದುಕೊಟ್ಟರೆ, ಧೋನಿ 27 ಪಂದ್ಯಗಳನ್ನು ಗೆದ್ದ ದಾಖಲೆ ಹೊಂದಿದ್ದಾರೆ. ಭಾರತ ತಂಡವನ್ನು 60 ಪಂದ್ಯಗಳಲ್ಲಿ ಮುನ್ನಡೆಸಿರುವ ಧೋನಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದುಕೊಟ್ಟ ನಾಯಕ ಎಂಬ ದಾಖಲೆ ಹೊಂದಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಭಾರತ ತಂಡ 2 ಟೆಸ್ಟ್‌ ಪಂದ್ಯಗಳನ್ನಾಡಲಿದ್ದು, ಕೊಹ್ಲಿಗೆ ಈ ದಾಖಲೆ ತಮ್ಮದಾಗಿಸಿಕೊಳ್ಳುವ ಉತ್ತಮ ಅವಕಾಶವಿದೆ. ಮಾಜಿ ನಾಯಕ ಸೌರವ್‌ ಗಂಗೂಲಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು 49 ಪಂದ್ಯಗಳಲ್ಲಿ 21 ಟೆಸ್ಟ್‌ ಗೆಲುವು ತಂದುಕೊಟ್ಟಿದ್ದಾರೆ.

2. ಏಕದಿನದಲ್ಲಿ ವಿಂಡೀಸ್‌ ವಿರುದ್ಧ 2000 ರನ್‌

2. ಏಕದಿನದಲ್ಲಿ ವಿಂಡೀಸ್‌ ವಿರುದ್ಧ 2000 ರನ್‌

ಕ್ಯಾಪ್ಟನ್‌ ಆಗಿಯೂ ದಾಖಲೆ ಮುರಿಯುವ ಅವಕಾಶ ಹೊಂದಿರುವ ವಿರಾಟ್‌ ಕೊಹ್ಲಿಗೆ ಬ್ಯಾಟಿಂಗ್‌ನಲ್ಲೂ ಹೊಸ ದಾಖಲೆ ಬರೆಯುವ ಹೊಸ್ತಿಲಲ್ಲಿದ್ದಾರೆ. ಕೊಹ್ಲಿ ಇನ್ನು 88 ರನ್‌ಗಳನ್ನು ಗಳಿಸಿದರೆ ವೆಸ್ಟ್‌ ಇಂಡೀಸ್‌ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ 2000 ರನ್‌ಗಳನ್ನು ಪೂರೈಸಿದ ದಾಖಲೆ ಬರೆಯಲಿದ್ದಾರೆ. ಇದು ಸಾಧ್ಯವಾದರೆ ವಿಂಡೀಸ್‌ ಎದುರು ಒಡಿಐನಲ್ಲಿ 2000 ರನ್‌ ಗಳಿಸಿದ ಮೊದಲ ಬ್ಯಾಟ್ಸ್‌ಮನ್‌ ಎನಿಸಲಿದ್ದಾರೆ. ಬ್ಯಾಟಿಂಗ್‌ ಮಾಂತ್ರಿಕ ಸಚಿನ್‌ ತೆಂಡೂಲ್ಕರ್‌ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, 39 ಪಂದ್ಯಗಳಿಂದ 52.43ರ ಸರಾಸರಿಯಲ್ಲಿ 1573 ರನ್‌ಗಳನ್ನು ಗಳಿಸಿದ್ದಾರೆ. ಕೊಹ್ಲಿ, ಸದ್ಯ 33 ಪಂದ್ಯಗಳಿಂದ 1912 ರನ್‌ಗಳನ್ನು ಗಳಿಸಿರುವ ಕೊಹ್ಲಿ, ಕೆರಿಬಿಯನ್ನರ ಎದುರು 70.81ರ ಸರಾಸರಿಯಲ್ಲಿ 7 ಶತಕ ಮತ್ತು 10 ಅರ್ಧಶತಕಗಳನ್ನು ಸಿಡಿಸಿದ್ದಾರೆ.

3. ಟೆಸ್ಟ್‌ನಲ್ಲೂ ವಿಂಡೀಸ್‌ ಎದುರು 1000 ರನ್‌

3. ಟೆಸ್ಟ್‌ನಲ್ಲೂ ವಿಂಡೀಸ್‌ ಎದುರು 1000 ರನ್‌

ಟೆಸ್ಟ್‌ ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆಡಿರುವ 15 ಇನಿಂಗ್ಸ್‌ಗಳಿಂದ 45.73ರ ಸರಾಸರಿಯಲ್ಲಿ 686 ರನ್‌ಗಳನ್ನು ಗಳಿಸಿರುವ ವಿರಾಟ್‌ ಕೊಹ್ಲಿ, ಮುಂಬರುವ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 314 ರನ್‌ಗಳನ್ನು ಗಳಿಸಿದ್ದೇ ಆದರೆ, ವೆಸ್ಟ್‌ ಇಂಡೀಸ್‌ ವಿರುದ್ಧ ಸಾವಿರ ಟೆಸ್ಟ್‌ ರನ್‌ಗಳನ್ನು ದಾಖಲಿಸಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇದು ಸಾಧ್ಯವಾದರೆ ಈ ಸಾಧನೆ ಮಾಡಿದ 11ನೇ ಭಾರತೀಯ ಎಂಬ ಶ್ರೇಯಕ್ಕೆ ಪಾತ್ರರಾಗಲಿದ್ದಾರೆ.

4. ರೋಹಿತ್‌ಗೆ ಸಿಕ್ಸರ್‌ ಕಿಂಗ್‌ ಎನಿಸಿಕೊಳ್ಳುವ ಅವಕಾಶ

4. ರೋಹಿತ್‌ಗೆ ಸಿಕ್ಸರ್‌ ಕಿಂಗ್‌ ಎನಿಸಿಕೊಳ್ಳುವ ಅವಕಾಶ

ತಮ್ಮ ಸ್ಫೋಟಕ ಬ್ಯಾಟಿಂಗ್‌ ಮತ್ತು ದೊಡ್ಡ ಸಿಕ್ಸರ್‌ಗಳ ಮೂಲಕ ಹಿಟ್‌ಮ್ಯಾನ್‌ ಎಂದೇ ಖ್ಯಾತಿ ಪಡೆದಿರುವ ಭಾರತದ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮಾ ಅವರಿಗೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಇನ್ನು 5 ಸಿಕ್ಸರ್‌ಗಳು ಲಭ್ಯವಾದರೆ, ಈ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಬ್ಯಾಟ್ಸ್‌ಮನ್‌ ಎಂದೆನಿಸಿಕೊಳ್ಳಲಿದ್ದಾರೆ. ಸದ್ಯ ವೆಸ್ಟ್‌ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ 105 ಸಿಕ್ಸರ್‌ಗಳೊಂದಿಗೆ ಈ ದಾಖಲೆ ಹೊಂದಿದ್ದಾರೆ. ನಂತರದ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಅನುಭವಿ ಬ್ಯಾಟ್ಸ್‌ಮನ್‌ ಮಾರ್ಟಿನ್‌ ಗಪ್ಟಿಲ್‌ (103) ಇದ್ದಾರೆ. 94 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 101 ಸಿಕ್ಸರ್‌ಗಳನ್ನು ಚೆಚ್ಚಿರುವ ರೋಹಿತ್‌ 3ನೇ ಸ್ಥಾನದಲ್ಲಿದ್ದಾರೆ.

Story first published: Thursday, August 1, 2019, 15:52 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X