ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಣಬ್ ಮುಖರ್ಜಿ ನಿಧನಕ್ಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂತಾಪ

Virat Kohli, Rohit Sharma mourn the demise of former President Pranab Mukherjee

ನವದೆಹಲಿ: ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೋಮವಾರ (ಆಗಸ್ಟ್ 31) ಕೊನೆಯುಸಿರೆಳೆದಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು 21 ದಿನಗಳಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಪ್ರಣಬ್ ಸಾವನ್ನಪ್ಪಿರುವುದಾಗಿ ಅವರ ಪುತ್ರ ಅಭಿಜಿತ್ ಮುಖರ್ಜಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

2020ರ ಐಪಿಎಲ್‌ಗೆ ಮತ್ತೊಂದು ಹಿನ್ನಡೆ, ಟೂರ್ನಿ ಆರಂಭ ವಿಳಂಬ ಸಾಧ್ಯತೆ!2020ರ ಐಪಿಎಲ್‌ಗೆ ಮತ್ತೊಂದು ಹಿನ್ನಡೆ, ಟೂರ್ನಿ ಆರಂಭ ವಿಳಂಬ ಸಾಧ್ಯತೆ!

ಮಾಜಿ ರಾಷ್ಟ್ರಪತಿಯ ನಿಧನಕ್ಕೆ ಭಾರತೀಯ ಕ್ರೀಡಾಲೋಕ ಸಂತಾಪ ಸೂಚಿಸಿದೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ, ಮೊಹಮ್ಮದ್ ಕೈಫ್, ಆರ್ ಅಶ್ವಿನ್, ವಿಜೇಂದರ್ ಸಿಂಗ್, ವೀರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕ ಕ್ರೀಡಾ ತಾರೆಯರು ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ.

ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್ವಿರಾಟ್ ಕೊಹ್ಲಿ, ಆ್ಯರನ್ ಫಿಂಚ್ ದಾಖಲೆ ಸರಿದೂಗಿಸಿದ ಬಾಬರ್ ಅಝಾಮ್

ನವದೆಹಲಿಯಲ್ಲಿರುವ ಆರ್ಮಿ ರೀಸರ್ಚ್ ಆ್ಯಂಡ್ ರೆಫರಲ್ ಹಾಸ್ಪಿಟಲ್‌ನಲ್ಲಿ ಪ್ರಣಬ್ ಮುಖರ್ಜಿ ದಾಖಲಾಗಿದ್ದರು. ಮೆದುಳಿನ ಚಿಕಿತ್ಸೆಗೂ ಒಳಗಾಗಿದ್ದ ಪ್ರಣಬ್ ಸ್ಥಿತಿ ಗಂಭೀರವಾಗಿತ್ತು. ಆಗಸ್ಟ್ 10ರಂದೇ ಆಸ್ಪತ್ರೆಗೆ ದಾಖಲಾಗಿದ್ದ ಮುಖರ್ಜೀಗೆ ಕೊರೊನಾವೈರಸ್ ಸೋಂಕು ಕೂಡ ಇತ್ತು.

ಪ್ರಣಬ್ ನಿಧನಕ್ಕೆ ಸಂತಾಪ ಸೂಚಿಸಿರುವ ಕೊಹ್ಲಿ, 'ರಾಷ್ಟ್ರವು ಅದ್ಭುತ ನಾಯಕನನ್ನು ಕಳೆದುಕೊಂಡಿದೆ. ಶ್ರೀ ಪ್ರಣಬ್ ಮುಖರ್ಜಿ ಅವರ ನಿಧನದ ಬಗ್ಗೆ ಕೇಳಿದಾಗ ಬೇಸರವಾಯಿತು. ಅವರ ಕುಟುಂಬಕ್ಕೆ ನನ್ನ ಮನಪೂರ್ವಕ ಸಂತಾಪಗಳು' ಎಂದು ಬರೆದುಕೊಂಡಿದ್ದಾರೆ.

'ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಪ್ರಣಬ್ ಮುಖರ್ಜಿ. ರಾಷ್ಟ್ರಕ್ಕೆ ನೀವೊಬ್ಬರು ಸ್ಫೂರ್ತಿಯ ವ್ಯಕ್ತಿಯಾಗಿದ್ದೀರಿ' ಎಂದು ರೋಹಿತ್‌ ಟ್ವೀಟ್ ಮಾಡಿದ್ದಾರೆ. ಕೊಹ್ಲಿ, ರೋಹಿತ್ ಅಲ್ಲದೆ ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾ, ವಿವಿಎಸ್ ಲಕ್ಷ್ಮಣ್, ಕಿರಣ್ ರಿಜಿಜು, ಇಶಾಂತ್ ಶರ್ಮಾ, ಕೃನಾಲ್ ಪಾಂಡ್ಯ ಇಂಥ ಬಹಳಷ್ಟು ಕ್ರೀಡಾಪಟುಗಳು ಟ್ವೀಟ್ ಮಾಡಿ ಸಂತಾಪ ತೋರಿಕೊಂಡಿದ್ದಾರೆ.

Story first published: Tuesday, September 1, 2020, 10:04 [IST]
Other articles published on Sep 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X