ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ - ವಾರ್ನರ್ ನಡುವೆ ನಡೆದ ಸಣ್ಣ ಚರ್ಚೆ; ವಾರ್ನರ್‌ ಆರ್‌ಸಿಬಿ ಸೇರುವುದು ಖಚಿತ?

Virat Kohlis comment on David Warners latest Instagram post goes viral
David Warner ಅವರ ವಿಡಿಯೋ ನೋಡಿ ಕಾಲೆಳೆದ Virat Kohli | Oneindia Kannada

ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ಆಟಗಾರರ ಮತ್ತು ಫ್ರಾಂಚೈಸಿಗಳ ನಡುವೆ ಉಂಟಾದ ಮನಸ್ತಾಪಗಳಿಗೆ ಮತ್ತು ಇನ್ನಿತರ ವಿವಾದಗಳಿಗೆ ಸಾಕ್ಷಿಯಾಯಿತು. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮೊದಲಿಗೆ ಭಾರತದ ನೆಲದಲ್ಲಿ ಆರಂಭವಾಗಿ ವಿವಿಧ ತಂಡಗಳ ಆಟಗಾರರಲ್ಲಿ ಕೊರೋನಾವೈರಸ್ ಸೋಂಕು ಕಾಣಿಸಿಕೊಂಡ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡ ನಂತರ ಯುಎಇಗೆ ಸ್ಥಳಾಂತರಿಸಲ್ಪಟ್ಟು ಟೀಕೆಗಳಿಗೆ ಒಳಗಾಗಿತ್ತು.

ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: 42 ಅಂಕ ಪಡೆದ ಭಾರತಕ್ಕಿಂತ 24 ಅಂಕ ಪಡೆದ ತಂಡಕ್ಕೆ ಅಗ್ರಸ್ಥಾನ!ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್: 42 ಅಂಕ ಪಡೆದ ಭಾರತಕ್ಕಿಂತ 24 ಅಂಕ ಪಡೆದ ತಂಡಕ್ಕೆ ಅಗ್ರಸ್ಥಾನ!

ಹೀಗೆ ಯುಎಇಯಲ್ಲಿ ಮುಂದುವರಿದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಯಶಸ್ವಿಯಾಗಿ ಅಂತ್ಯಗೊಂಡಿತು. ಆದರೆ ಯುಎಇಯಲ್ಲಿ ನಡೆದ ಈ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ನಡೆಯುವ ವೇಳೆ ಮತ್ತು ಟೂರ್ನಿ ಯಶಸ್ವಿಯಾಗಿ ಮುಗಿದ ನಂತರವೂ ಕೂಡ ಆಟಗಾರರು ಮತ್ತು ಫ್ರಾಂಚೈಸಿಗಳ ನಡುವೆ ಕೆಲವೊಂದು ಕಾರಣಗಳಿಗೆ ಮನಸ್ತಾಪಗಳು ಉಂಟಾಗಿ, ಆ ಮನಸ್ತಾಪಗಳು ಫ್ರಾಂಚೈಸಿಗಳಿಂದ ಆಟಗಾರರು ದೂರವಾಗುವುದಕ್ಕೆ ಕಾರಣಗಳೂ ಆದವು. ಹೌದು, ಈ ರೀತಿ ಟೂರ್ನಿ ನಡೆಯುವ ವೇಳೆಗೆ ಆಟಗಾರ ಮತ್ತು ಫ್ರಾಂಚೈಸಿಯ ನಡುವೆ ಮನಸ್ತಾಪ ಉಂಟಾಗಿದ್ದಕ್ಕೆ ಎಲ್ಲರ ತಲೆಯಲ್ಲಿ ಬರುವ ಮೊದಲ ಉದಾಹರಣೆಯೇ ಡೇವಿಡ್ ವಾರ್ನರ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ.

 ದ.ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕಿದು ಸುವರ್ಣಾವಕಾಶ ಎಂದ ಮಾಜಿ ಕ್ರಿಕೆಟಿಗ ದ.ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲಲು ಭಾರತಕ್ಕಿದು ಸುವರ್ಣಾವಕಾಶ ಎಂದ ಮಾಜಿ ಕ್ರಿಕೆಟಿಗ

ಟೂರ್ನಿ ಆರಂಭದ ವೇಳೆಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕನಾಗಿದ್ದ ಡೇವಿಡ್ ವಾರ್ನರ್ ನಾಯಕತ್ವದಲ್ಲಿ ತಂಡ ಸಾಲುಸಾಲು ಪಂದ್ಯಗಳಲ್ಲಿ ಸೋಲುಂಡಿತು ಎಂಬ ಕಾರಣದಿಂದಾಗಿ ಟೂರ್ನಿ ಮಧ್ಯದಲ್ಲಿಯೇ ಸನ್ ರೈಸರ್ಸ್ ಹೈದರಾಬಾದ್ ತಂಡ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ಕೇನ್ ವಿಲಿಯಮ್ಸನ್ ಅವರನ್ನು ನೂತನ ನಾಯಕನನ್ನಾಗಿ ನೇಮಿಸಿತು. ಹೀಗೆ ಡೇವಿಡ್ ವಾರ್ನರ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕತ್ವವನ್ನು ಕಳೆದುಕೊಂಡು ನಂತರ ನಡೆದ ಒಂದೆರಡು ಪಂದ್ಯಗಳಲ್ಲಿ ಆಟಗಾರನಾಗಿ ಕಣಕ್ಕಿಳಿದರು. ಆದರೆ ತದನಂತರದ ಪಂದ್ಯಗಳಲ್ಲಿ ತಂಡದಲ್ಲಿ ಡೇವಿಡ್ ವಾರ್ನರ್ ಅವರಿಗೆ ಸ್ಥಾನ ನೀಡದ ಸನ್ ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ವಾರ್ನರ್ ಅವರನ್ನು ತಂಡದಿಂದ ಹೊರಗಿಟ್ಟಿತು. ಹೀಗೆ ಟೂರ್ನಿ ಮಧ್ಯದಲ್ಲಿಯೇ ಸನ್ ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಬಿದ್ದ ಡೇವಿಡ್ ವಾರ್ನರ್ ಮುಂದಿನ ವರ್ಷದ ಐಪಿಎಲ್ ಆವೃತ್ತಿಗಾಗಿ ನಡೆಯಲಿರುವ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲಿದ್ದು ಅನ್ಯ ತಂಡದ ಪರ ಆಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಹರಿದಾಡಿತ್ತು.

ಆಶಸ್ ಸರಣಿ: ತಿರುಗಿಬಿದ್ದ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಮೊದಲ ಟೆಸ್ಟ್ ವಶಪಡಿಸಿಕೊಂಡ ಆಸ್ಟ್ರೇಲಿಯಾಆಶಸ್ ಸರಣಿ: ತಿರುಗಿಬಿದ್ದ ಆಂಗ್ಲರಿಗೆ ಮಣ್ಣು ಮುಕ್ಕಿಸಿ ಮೊದಲ ಟೆಸ್ಟ್ ವಶಪಡಿಸಿಕೊಂಡ ಆಸ್ಟ್ರೇಲಿಯಾ

ಆ ಸುದ್ದಿಗೆ ಇದೀಗ ಮತ್ತಷ್ಟು ರೆಕ್ಕೆಪುಕ್ಕ ಬರುವಂತೆ ಮಾಡಿದೆ ಡೇವಿಡ್ ವಾರ್ನರ್ ಅವರು ಇತ್ತೀಚಿಗಷ್ಟೆ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಪೋಸ್ಟ್. ಅಷ್ಟಕ್ಕೂ ಡೇವಿಡ್ ವಾರ್ನರ್ ಹಾಕಿರುವ ಆ ಪೋಸ್ಟ್ ಮತ್ತು ವಿರಾಟ್ ಕೊಹ್ಲಿ ಜೊತೆ ನಡೆಸಿರುವ ಸಣ್ಣ ಚರ್ಚೆ ಏನು ಎಂಬುದರ ಮಾಹಿತಿ ಮುಂದೆ ಇದೆ ಓದಿ..

ಪುಷ್ಪ ಚಿತ್ರದ ಹಾಡಿಗೆ ಡೇವಿಡ್ ವಾರ್ನರ್ ಹೆಜ್ಜೆ

ಪುಷ್ಪ ಚಿತ್ರದ ಹಾಡಿಗೆ ಡೇವಿಡ್ ವಾರ್ನರ್ ಹೆಜ್ಜೆ

ಡೇವಿಡ್ ವಾರ್ನರ್ ಈ ಹಿಂದೆ ದಕ್ಷಿಣ ಭಾರತದ ಹಿಟ್ ಗೀತೆಗಳಿಗೆ ಟಿಕ್ ಟಾಕ್ ಮಾಡುವ ಮೂಲಕ ಭಾರೀ ಪ್ರಸಿದ್ಧಿಯನ್ನು ಪಡೆದಿದ್ದರು. ಅದೇ ರೀತಿ ಇದೀಗ ಪುಷ್ಪ ಚಿತ್ರದ ಹಿಟ್ ಗೀತೆಯೊಂದಕ್ಕೆ ಫೇಸ್ ಚೇಂಜರ್ ಅಪ್ಲಿಕೇಷನ್ ಬಳಸಿ ತಮ್ಮ ಮುಖವನ್ನು ಅಳವಡಿಸಿರುವ ಡೇವಿಡ್ ವಾರ್ನರ್ ಆ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯ ರೀಲ್ಸ್ ವಿಭಾಗದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಡೇವಿಡ್ ವಾರ್ನರ್ ಅವರ ಈ ವಿಡಿಯೋ ಇನ್ಸ್ಟಾಗ್ರಾಮ್ ತುಂಬಾ ವೈರಲ್ ಆಗಿದ್ದು ಹಲವಾರು ಕ್ರಿಕೆಟಿಗರಿಂದ ಪ್ರತಿಕ್ರಿಯೆಗಳು ಬರತೊಡಗಿವೆ.

ಇನ್ಸ್ಟಾಗ್ರಾಂನಲ್ಲಿಯೇ ವಾರ್ನರ್ - ಕೊಹ್ಲಿ ನಡುವೆ ಚರ್ಚೆ

ಇನ್ಸ್ಟಾಗ್ರಾಂನಲ್ಲಿಯೇ ವಾರ್ನರ್ - ಕೊಹ್ಲಿ ನಡುವೆ ಚರ್ಚೆ

ತೆಲುಗು ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರದ ಹಾಡನ್ನು ಡೇವಿಡ್ ವಾರ್ನರ್ ಈ ರೀತಿ ವಿಡಿಯೋವನ್ನು ಎಡಿಟ್ ಮಾಡಿ ಹಾಕಿರುವ ಇನ್ಸ್ಟಾಗ್ರಾಂ ಪೋಸ್ಟ್‌ಗೆ ವಿರಾಟ್ ಕೊಹ್ಲಿ ಕಾಮೆಂಟ್ ಮಾಡಿದ್ದು 'ಗೆಳೆಯಾ ನೀನು ಆರಾಮಾಗಿದ್ದೀಯಾ?' ಎಂದು ಪ್ರಶ್ನೆಯನ್ನು ಹಾಕಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಡೇವಿಡ್ ವಾರ್ನರ್ ಗೆಳೆಯಾ ನನ್ನ ತಲೆಯಲ್ಲಿ ಇನ್ನೂ ಕೂಡ ಬೇಸರವಿದೆ, ಅದು ಯಾವತ್ತಿಗೂ ಸರಿಹೋಗುವುದಿಲ್ಲ ಎಂದು ಹಾಸ್ಯಸ್ಪದವಾಗಿ ಮರು ಕಾಮೆಂಟ್ ಹಾಕಿದ್ದಾರೆ. ಹೀಗೆ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ವಿರಾಟ್ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ನಡುವೆ ನಡೆದಿರುವ ಈ ಸಣ್ಣ ಚರ್ಚೆಯನ್ನು ಗಮನಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳು ಹಾಗೂ ವಿರಾಟ್ ಕೊಹ್ಲಿ ಫ್ಯಾನ್ಸ್ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವುದು ಪಕ್ಕಾ, ವಾರ್ನರ್ ನೀವು ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಂದುಬಿಡಿ ಎಂದೆಲ್ಲಾ ಕಾಮೆಂಟ್ ಹಾಕುತ್ತಿದ್ದಾರೆ. ಹಾಗೂ ಇದುವರೆಗೂ ಡೇವಿಡ್ ವಾರ್ನರ್ ಪೋಸ್ಟ್ ಕುರಿತಾಗಿ ಹೆಚ್ಚಾಗಿ ಪ್ರತಿಕ್ರಿಯಿಸದೇ ಇದ್ದ ವಿರಾಟ್ ಕೊಹ್ಲಿ ಈ ಬಾರಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಎಲ್ಲರಲ್ಲಿಯೂ ವಾರ್ನರ್ ಮುಂಬರುವ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿದ್ದಾರಾ ಎಂಬ ಅನುಮಾನ ಬರದೇ ಇರದು.

ಇತ್ತೀಚೆಗಷ್ಟೇ ಇದೇ ರೀತಿಯ ವಿಡಿಯೋ ಮೂಲಕ ಪುನೀತ್ ಅವರಿಗೂ ಗೌರವವನ್ನು ಸಲ್ಲಿಸಿದ್ದರು ವಾರ್ನರ್

ಇತ್ತೀಚೆಗಷ್ಟೇ ಇದೇ ರೀತಿಯ ವಿಡಿಯೋ ಮೂಲಕ ಪುನೀತ್ ಅವರಿಗೂ ಗೌರವವನ್ನು ಸಲ್ಲಿಸಿದ್ದರು ವಾರ್ನರ್

ಇದೇ ರೀತಿಯ ವಿಡಿಯೋ ಎಡಿಟ್ ಒಂದನ್ನು ಮಾಡುವುದರ ಮೂಲಕ ರಾಜರತ್ನ ಪುನೀತ್ ರಾಜ್ ಕುಮಾರ್ ಅವರಿಗೆ ಡೇವಿಡ್ ವಾರ್ನರ್ ಗೌರವವನ್ನು ಸೂಚಿಸಿದ್ದರು. ಹೌದು, ಪುನೀತ್ ಅಭಿನಯದ ಜನಪ್ರಿಯ ಗೀತೆ ಬೊಂಬೆ ಹೇಳುತೈತೆ ದೃಶ್ಯವೊಂದನ್ನು ಎಡಿಟ್ ಮಾಡಿ ಪೋಸ್ಟ್ ಮಾಡಿದ್ದ ವಾರ್ನರ್ ಪುನೀತ್ ಅವರಿಗೆ ಗೌರವ ಸಲ್ಲಿಸಿ ಕನ್ನಡಿಗರ ಪ್ರೀತಿಗೆ ಪಾತ್ರರಾಗಿದ್ದರು. ಆಗಲೂ ಸಹ ಡೇವಿಡ್ ವಾರ್ನರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಲಿದ್ದಾರೆ ಎಂಬ ಊಹೆಗಳು ಹೆಚ್ಚಾಗತೊಡಗಿದವು.

Story first published: Saturday, December 11, 2021, 19:20 [IST]
Other articles published on Dec 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X