ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸೀಸ್ ಟೆಸ್ಟ್: ವಿರಾಟ್ ಕೊಹ್ಲಿ ಔಟಾ, ನಾಟೌಟಾ? ಭಾರೀ ಚರ್ಚೆ!

ವಿರಾಟ್ ಕೊಹ್ಲಿ ಔಟಾ, ನಾಟೌಟಾ? ಭಾರೀ ಚರ್ಚೆ! | Oneindia Kannada
Virat Kohlis controversial dismissal triggers debate on Twitter

ಪರ್ತ್, ಡಿಸೆಂಬರ್ 16: ಪರ್ತ್ ನಲ್ಲಿ ನಡೆಯುತ್ತಿರುವ ಭಾರತ vs ಆಸ್ಟ್ರೇಲಿಯಾ ದ್ವಿತೀಯ ಟೆಸ್ಟ್ ನಲ್ಲಿ ಭಾರತ ಆರಂಭಿಕ ಆಘಾತ ಅನುಭವಿಸಿದರೂ ಅನಂತರ ಗಣನೀಯ ಚೇತರಿಕೆ ಕಂಡಿದ್ದು ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ಹೋರಾಟದಿಂದ. ಕೊಹ್ಲಿ ಶತಕ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ವಿರಾಟ್ ಔಟ್ ನಿರ್ಧಾರವೀಗ ಚರ್ಚೆಗೀಡಾಗಿದೆ.

ತ್ವರಿತಗತಿಯಲ್ಲಿ 25ನೇ ಶತಕ, ಬ್ರಾಡ್ಮನ್ ನಂತರ ಕೊಹ್ಲಿಯೇ ಕಿಂಗ್ತ್ವರಿತಗತಿಯಲ್ಲಿ 25ನೇ ಶತಕ, ಬ್ರಾಡ್ಮನ್ ನಂತರ ಕೊಹ್ಲಿಯೇ ಕಿಂಗ್

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 326 ರನ್ ಉತ್ತಮ ಮೊತ್ತ ಪೇರಿಸಿತ್ತು. ಇನ್ನಿಂಗ್ಸ್‌ಗೆ ಇಳಿದ ಭಾರತದ ಆರಂಭಿಕ ಆಟಗಾರರಾದ ಕೆಎಲ್ ರಾಹುಲ್ (2 ರನ್), ಮುರಳಿ ವಿಜಯ್ (0) ರನ್‌ ಗಳಿಸಿ ಔಟಾದರು. ಆಗ ಕೊಹ್ಲಿ 123, ರಹಾನೆ 51 ರನ್ ಸೇರಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು.

ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿ ಗ್ಯಾರಿ ಕರ್ಸ್ಟನ್!ಭಾರತದ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ರೇಸ್‌ನಲ್ಲಿ ಗ್ಯಾರಿ ಕರ್ಸ್ಟನ್!

ಭಾರತ 105.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 283 ರನ್ ಕಲೆ ಹಾಕುವುದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ 43 ರನ್ ಹಿನ್ನಡೆ ಅನುಭವಿಸಿತ್ತು. ಹೀಗಾಗಿಯೇ ತಂಡದ ಪರ ಏಕಾಂಗಿ ಹೋರಾಟ ನಡೆಸಿದ್ದ ಕೊಹ್ಲಿ ವಿಕೆಟ್ ಪತನ ಈಗ ವಿವಾದಕ್ಕೀಡಾಗಿದೆ. ಕೊಹ್ಲಿ ಔಟೇ ಅಲ್ಲದಿದ್ದರೂ ಔಟ್ ತೀರ್ಮಾನ ನೀಡಲಾಗಿದೆ ಎಂಬ ಆಕ್ರೋಶವೂ ಕ್ರೀಡಾಭಿಮಾನಿಗಳಿಂದ ವ್ಯಕ್ತವಾಗಿವೆ.

ಬಹುಶಃ ಔಟ್!?

'ಕೊಹ್ಲಿ ವಿಕೆಟ್ ಒಪ್ಪಿಸಿದ ಈ ಕ್ಯಾಚ್ ಸ್ಪಷ್ಟವಾದುದೆ? ಕೊಹ್ಲಿ ನಿಜಕ್ಕೂ ಔಟೇ? ಬಹುಶಃ ಹೌದು' ಎಂದು ವಿಶ್ಲೇಷಕರಾಗಿರುವ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ, ಪತ್ರಿಕೋದ್ಯಮಿ ಸೈಮನ್ ಹ್ಯೂಸ್ ಟ್ವೀಟ್ ಮಾಡಿದ್ದಾರೆ. ಅವರ ಅಭಿಪ್ರಾಯದ ಪ್ರಕಾರ ಕೊಹ್ಲಿ ಔಟ್ ಆಗಿದ್ದು ಸರಿಯಾದ ತೀರ್ಪು.

ಆಗಿದ್ದೇನು?

93ನೇ ಓವರ್‌ (92.6) ಎಸೆಯೋಕೆ ಪ್ಯಾಟ್‌ ಕಮಿನ್ಸ್ ಬಂದಾಗ ವಿರಾಟ್ ಕೊಹ್ಲಿ ಕ್ರೀಸ್ ನಲ್ಲಿದ್ದರು. ಕೊಹ್ಲಿ ಬ್ಯಾಟ್ ತಾಗಿದ ಚೆಂಡನ್ನು ಹ್ಯಾಂಡ್ಸ್ ಕಾಂಬ್ ಕ್ಯಾಚ್ ಮಾಡಿದ್ದರು. ಈ ವಿಡಿಯೋ ಗಮನಿಸುವಾಗ ಕೊಹ್ಲಿ ನಿಜಕ್ಕೂ ಔಟೋ ಅಥವಾ ನಾಟೌಟೋ ಎಂಬ ಗೊಂದಲ ಮೂಡುವಂತಿದೆ. ಯಾಕೆಂದರೆ ಕಾಂಬ್ ಕ್ಯಾಚ್‌ಗೂ ಮುನ್ನ ಚೆಂಡು ನೆಲಕ್ಕೆ ತಾಗಿದೆ ಎಂಬತೆ ಕಾಣುತ್ತದೆ. ಕೊಹ್ಲಿ ಔಟ್ ಚರ್ಚೆ ಶುರುವಾಗಿದ್ದು ಇಲ್ಲಿಂದಲೇ.

ತಾಂತ್ರಿಕ ಜಗತ್ತಿಗೂ ಸವಾಲಿದು

ತಾಂತ್ರಜ್ಞಾನ ಮತ್ತು ಅಂಪೈರ್ ಡಿಸಿಶನ್ ರಿವ್ಯೂ ಸಿಸ್ಟಮ್ (ಡಿಆರ್‌ಎಸ್) ಮನೆ ಮಾತಾಗಿರುವ ಈಗಿನ ಕ್ರಿಕೆಟ್‌ನಲ್ಲಿ ಈ ಔಟ್ ನಿರ್ಧಾರ ಸರಿಯೇ? ಕೊಹ್ಲಿಯನ್ನು ಔಟ್‌ಗೊಳಿಸಿದ ಈ ನಿರ್ಧಾರ ಅವರ ಅದ್ಭುತ ಇನ್ನಿಂಗ್ಸ್ ಒಂದನ್ನು ಅಂತ್ಯಗೊಳಿಸಿತು ಎಂದು ಆಲ್‌ ರೌಂಡರ್ ಜಡೇಜಾ ಟ್ವೀಟ್ ಮಾಡಿದ್ದಾರೆ.

ಇದು ಔಟಾ?

ಇಎಸ್‌ಪಿಎನ್ ಕ್ರಿಕ್ ಇನ್ಫೋ ಕೂಡ ಟ್ವಿಟರ್‌ನಲ್ಲಿ ಇದೇ ಗೊಂಡಲದ ಬಗ್ಗೆ ಟ್ವೀಟ್ ಮಾಡಿದೆ. ವಿರಾಟ್ ಕೊಹ್ಲಿ ಔಟಾ ನಾಟೌಟಾ? ಇದು ಔಟಾ ಅಥವಾ ಚೆಂಡು ಗ್ರೌಂಡಿಗೆ ತಾಗಿದ್ಯಾ? ಎಂದು ಗಿಫ್ (ಗ್ರಾಫಿಕ್ ಇಂಟರ್ ಚೇಂಜ್ ಫಾರ್ಮ್ಯಾಟ್) ಮೂಲಕ ಅದು ಪ್ರಶ್ನಿಸಿದೆ.

25ನೇ ಟೆಸ್ಟ್ ಶತಕ

ದ್ವಿತೀಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 275 ಎಸೆತಗಳಲ್ಲಿ ಕೊಹ್ಲಿ 123 ರನ್ ಗಳಿಸಿದ್ದರು. ಇದರಲ್ಲಿ 13 ಬೌಂಡರಿಗಳು ಮತ್ತು ಒಂದು ಸಿಕ್ಸ್ ಸೇರಿತ್ತು. ಈ ಮೂಲಕ ಕೊಹ್ಲಿ ತನ್ನ 25ನೇ ಟೆಸ್ಟ್ ಶತಕವನ್ನು ಪೂರೈಸಿಕೊಂಡರು. ಟೆಸ್ಟ್ ನಲ್ಲಿ ಕೊಹ್ಲಿ 6,491 ರನ್ ಸಾಧನೆ ಹೊಂದಿದ್ದಾರೆ.

Story first published: Tuesday, December 18, 2018, 11:51 [IST]
Other articles published on Dec 18, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X