ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್ ಬದಿಗಿಟ್ಟು ಸುಂದರ್, ನದೀಮ್ ಆಯ್ಕೆ ಮಾಡಿದ ಬಗ್ಗೆ ನೆಟ್ಟಿಗರಿಂದ ಪ್ರಶ್ನೆ

vVirat Kohlis decision to prefer Sundar, Nadeem over Kuldeep Yadav baffles Twitterati

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಮೂವರು ಸ್ಪಿನ್ನರ್‌ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದಿದೆ. ಸ್ಪಿನ್ ಬೌಲರ್‌ಗಳಿಗೆ ಹೆಚ್ಚು ಅನುಕೂಲವಿರುವ ಪಿಚ್ ಆಗಿರುವ ಕಾರಣ ಈ ನಿರ್ಧಾರವೇನು ಅಚ್ಚರಿಯಲ್ಲ. ಆದರೆ ಮೂವರು ಸ್ಪಿನ್ನರ್‌ಗಳಿಗೆ ಅವಕಾಶ ನೀಡುವ ಸಂದರ್ಭದಲ್ಲೂ ಕುಲ್‌ದೀಪ್ ಯಾದವ್ ಕಡೆಗಣನೆಗೆ ಒಳಗಾಗಿದ್ದು ಬಹುತೇಕ ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ಅಚ್ಚರಿಯಾಗಿದೆ.

ಅದರಲ್ಲೂ ತಂಡದ ಸ್ಕ್ವಾಡ್‌ನಲ್ಲಿದ್ದ ಅಕ್ಷರ್ ಪಟೇಲ್ ಗಾಯಗೊಂಡು ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ. ಹಾಗಾಗಿ ಮೀಸಲು ಆಟಗಾರನಾಗಿದ್ದ ಶಹ್ಬಾಜ್ ನದೀಮ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು ಆಡುವ ಬಳಗದಲ್ಲೂ ಅವರಿಗೆ ಅವಕಾಶ ನೀಡಲಾಗಿದೆ. ಇದು ಸಹಜವಾಗಿಯೇ ಮತ್ತಷ್ಟು ಆಶ್ಚರ್ಯವನ್ನು ಮೂಡಿಸಿದೆ.

ಚೆನ್ನೈ ಟೆಸ್ಟ್: ಗಾಯಾಳು ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ನದೀಂ ಕಣಕ್ಕೆಚೆನ್ನೈ ಟೆಸ್ಟ್: ಗಾಯಾಳು ಸ್ಪಿನ್ನರ್ ಅಕ್ಷರ್ ಪಟೇಲ್ ಬದಲಿಗೆ ನದೀಂ ಕಣಕ್ಕೆ

ಟೀಮ್ ಇಂಡಿಯಾ ನಾಯಕ ಹಾಗೂ ಮ್ಯಾನೇಜ್‌ಮೆಂಟ್‌ನ ಈ ನಿರ್ಧಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳು ವ್ಯಕ್ತವಾಗುತ್ತಿದ್ದು ಟ್ವಿಟ್ಟರ್‌ನಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದೆ. ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಕೂಡ ಈ ಬಗ್ಗೆ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಯಾವಾಗ ಕುಲ್‌ದೀಪ್ ಆಡುತ್ತಾರೆ?

ಮಾಜಿ ಕ್ರಿಕೆಟಿಗ ಕಾಮೆಂಟೇಟರ್ ಆಕಾಶ್ ಚೋಪ್ರ ಟ್ವಿಟ್ಟರ್‌ನಲ್ಲಿ "ಜಡೇಜಾ, ಅಶ್ವಿನ್ ಇದ್ದಾಗ ಸಾಡಲು ಅವಕಾಶ ದೊರೆಯುವುದಿಲ್ಲ. ಜಡೇಜಾ ತಂಡದಲ್ಲಿ ಇಲ್ಲದಾಗಲೂ ಅವಕಾಶವಿಲ್ಲ. ಅದು ಕೂಡ ತವರಿನಲ್ಲಿ ಆಡುವಾಗ. ಯಾವಾಗ ಈತ ಆಡುತ್ತಾನೆ?" ಎಂದು ಪ್ರಶ್ನಿಸಿದ್ದಾರೆ.

ಬಲಿಷ್ಠವಾಗಿರಿ ಕುಲ್‌ದೀಪ್

ಮೊಹಮ್ಮದ್ ಕೈಫ್ ಪ್ರತಿಕ್ರಿಯಿಸಿ "ಎರಡು ವರ್ಷಗಳ ಹಿಂದೆ ಕುಲ್ದೀಪ್ ಯಾದವ್ ತವರು ನೆಲದಲ್ಲಿ ಸ್ಪಿನ್ನರ್ ಆಗಿ ಮೊದಲ ಆಯ್ಕೆ ಎಂದು ಬಣ್ಣಿಸಲಾಗಿತ್ತು. ಆದರೆ ಈಗ ಅವರು ಸ್ಥಾನಕ್ಕಾಗಿ ಹೋರಾಡುತ್ತಿದ್ದಾರೆ. ಆದರೆ ಅವರು ಸ್ಪೂರ್ತಿಗಾಗಿ ಬೇರೆಲ್ಲೂ ನೋಡಬೇಕಿಲ್ಲ. ಅಶ್ವಿನ್ ಹಾಗೂ ಪಂತ್ ಕೂಡ ಇಂತಾ ಪರಿಸ್ಥಿತಿಯನ್ನು ಎದುರಿಸಿಕೊಂಡೇ ಬಂದಿದ್ದಾರೆ. ಬಲಿಷ್ಠವಾಗಿರಿ ಕುಲ್‌ದೀಪ್" ಎಂದಿದ್ದಾರೆ.

ಕುಲ್‌ದೀಪ್ ಬಗ್ಗೆ ನಂಬಿಕೆಯಿಲ್ಲ!

ಕನ್ನಡಿಗ ದೊಡ್ಡ ಗಣೇಶ್ ಕೂಡ ಈ ಬಗ್ಗೆ ಟೀಕೆಯನ್ನು ವ್ಯಕ್ತಪಡಿಸಿದ್ದಾರೆ. "ಗಾಬಾದಲ್ಲಿ ನೆಟ್ ಬೌಲರ್‌ಗಳನ್ನು ತಂಡಕ್ಕೆ ಸೇರಿಸಿ ಕುಲ್‌ದೀಪ್ ಬದಲಿಗೆ ಆಡಿಸಲಾಯಿತು. ಚೆಪಾಕ್‌ನಲ್ಲಿ ಮೀಸಲು ಆಟಗಾರರನ್ನು ಕುಲ್ದೀಪ್‌ ಬದಲಿಗೆ ಕಣಕ್ಕಿಳಿಸಲಾಗಿದೆ. ಇದನ್ನು ನೋಡಿದಾಗ ತಂಡದ ಮ್ಯಾನೇಜ್‌ಮೆಂಟ್‌ಗೆ ಕುಲ್‌ದೀಪ್ ಮೇಲೆ ಭರವಸೆ ಇಲ್ಲದಂತೆ ಕಾಣಿಸುತ್ತಿದೆ. ಹೀಗಿದ್ದಾಹ ಅವರನ್ನು ತಂಡದಿಂದ ಕೈಬಿಟ್ಟರೆ ಅವರಿಗೆ ದೇಶೀಯ ಕ್ರಿಕೆಟ್‌ನಲ್ಲಿಯಾದರೂ ಆಡುವ ಅವಕಾಶ ದೊರೆಯುತ್ತದೆ" ಎಂದಿದ್ದಾರೆ.

Story first published: Friday, February 5, 2021, 14:08 [IST]
Other articles published on Feb 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X