ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಯದ್ದು ವೈಯಕ್ತಿಕ ನಿರ್ಧಾರ: ನಾಯಕತ್ವ ತೊರೆದ ವಿರಾಟ್ ಬಗ್ಗೆ ಗಂಗೂಲಿ ಮೊದಲ ಪ್ರತಿಕ್ರಿಯೆ

Virat Kohlis decision was personal: BCCI president Sourav Ganguly on Kohli step down India Test captaincy

ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ತೊರೆದ ಬಳಿಕ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ವಿರಾಟ್ ಕೊಹ್ಲಿಯ ಈ ನಿರ್ಧಾರಕ್ಕೆ ಬಹುತೇಕರು ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ. ಇನ್ನಿ ಬಿಸಿಸಿಐ ಕೂಡ ಈ ಬಗ್ಗೆ ತಮ್ಮ ಅಧಿಕೃತ ಹೇಳಿಕೆಯನ್ನು ಪ್ರಕಟಿಸಿದೆ. ಇನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರ ಅವರ ವೈಯಕ್ತಿಕವಾದ ನಿರ್ಧಾರವಾಗಿದೆ ಎಂದು ಗಂಗೂಲಿ ಹೇಳಿಕೆ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾದ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವವನ್ನು ತೊರೆಯುವ ಮೂಲಕ ವಿರಾಟ್ ಕೊಹ್ಲಿ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನ ನಾಯಕತ್ವದಿಂದಲೂ ಕೆಳಕ್ಕಿಳಿದಂತಾಗಿದೆ. ಟಿ20 ವಿಶ್ವಕಪ್‌ ಅಂತ್ಯವಾಗುತ್ತಿದ್ದಂತೆಯೇ ಟಿ20 ನಾಯಕತ್ವವನ್ನು ತೊರೆದಿದ್ದರು ವಿರಾಟ್ ಕೊಹ್ಲಿ. ಅದಾದ ಬಳಿಕ ಏಕದಿನ ನಾಯಕನನ್ನು ಆಯ್ಕೆ ಮಂಡಳಿಯೇ ಬದಲಾಯಿಸಿತ್ತು. ಈ ವಿಚಾರ ಸಾಮಷ್ಟಯ ವಿವಾದಕ್ಕೂ ಕಾರಣವಾಯಿತು. ಇದೀಗ ಟೆಸ್ಟ್ ಕ್ರಿಕೆಟ್‌ನ ನಾಯಕತ್ವದಿಂದ ಸ್ವತಃ ವಿರಾಟ್ ಕೊಹ್ಲಿ ಕೆಳಕ್ಕಿಳಿದಿದ್ದಾರೆ.

ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!

ವಿರಾಟ್ ಕೊಹ್ಲಿ ನಾಯಕತ್ವ ತೊರೆದ ಬಳಿಕ ಕೊಹ್ಲಿಯ ನಾಯಕತ್ವದ ಸಾಧನೆಯನ್ನು ಪ್ರಶಂಸಿಸಿ ಸೌರವ್ ಗಂಗೂಲಿ ಟ್ವೀಟ್ ಮಾಡಿದ್ದಾರೆ. "ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಎಲ್ಲಾ ಮಾದರಿಯಲ್ಲಿಯೂ ಅದ್ಭುತವಾದ ಪ್ರಗತಿ ಸಾಧಿಸಿದೆ. ಆತನ ನಿರ್ಧಾರ ವೈಯಕ್ತಿಕವಾದದ್ದು ಹಾಗೂ ಬಿಸಿಸಿಐ ಆ ನಿರ್ಧಾರವನ್ನು ಬಿಸಿಸಿಐ ಅಪಾರ ಗೌರವಿಸುತ್ತದೆ. ಭವಿಷ್ಯದಲ್ಲಿ ಭಾರತೀಯ ತಂಡವನ್ನು ಮತ್ತಷ್ಟು ಉತ್ತುಂಗ ಸ್ಥಾನಕ್ಕೇರಿಸಲು ಕೊಹ್ಲಿ ತಂಡದ ಪ್ರಮುಖ ಸದಸ್ಯನಾಗಿ ಬೆಂಬಲಿಸಲಿದ್ದಾರೆ. ಶ್ರೇಷ್ಠವಾದ ಆಟಗಾರ. ವೆಲ್ ಡನ್" ಎಂದು ಸೌರವ್ ಗಂಗೂಲಿ ಟ್ವಿಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ.

ಟಿ20 ವಿಶ್ವಕಪ್‌ಗೆ ಮುನ್ನ ವಿರಾಟ್ ಕೊಹ್ಲಿ ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ತಾನು ಟಿ20 ನಾಯಕತ್ವದಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ್ದರು. ಅದರಂತೆಯೇ ವಿಶ್ವಕಪ್‌ನಲ್ಲಿ ಭಾರತದ ಹೋರಾಟ ಅಂತ್ಯವಾಗುತ್ತಿದ್ದಂತೆಯೇ ನಾಯಕತ್ವವನ್ನು ಕೊಹ್ಲಿ ತೊರೆದಿದ್ದರು. ಆದರೆ ಈ ಸಂದರ್ಭದಲ್ಲಿ ಕೊಹ್ಲಿ ಏಕದಿನ ಹಾಗೂ ಟೆಸ್ಟ್ ತಮಡದ ನಾಯಕನಾಗಿ ನಾನು ಮುಂದುವರಿಯಲು ಬಯಸುವುದಾಗಿಯೂ ಸ್ಪಷ್ಟವಾಗಿ ಹೇಲಿದ್ದರು.

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?

ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಮುನ್ನ ಏಕದಿನ ನಾಯಕತ್ವದಿಂದ ಆಯ್ಕೆ ಸಮಿತಿ ಕೊಹ್ಲಿಯನ್ನು ಕೆಳಕ್ಕಿಳಿಸಿತ್ತು. ಸೀಮಿತ ಓವರ್‌ಗಳ ಮಾದರಿಗೆ ಪ್ರತ್ಯೇಕ ನಾಯಕರಿರುವುದು ಸರಿಯಲ್ಲ ಎಂಬ ಅಭಿಪ್ರಾಯವನ್ನು ಆಯ್ಕೆ ಮಂಡಳಿ ವ್ಯಕ್ತಪಡಿಸಿ ರೋಹಿತ್ ಶರ್ಮಾ ಸೀಮಿತ ಓವರ್‌ಗಳ ಮಾದರಿಗೆ ನಾಯಕ ಎಂದು ಘೋಷಿಸಿತು.

Virat Kohli ಕ್ಯಾಪ್ಟೆನ್ಸಿ ನಿರ್ಗಮನದ ಹಿಂದೆಯೇ ಟೀಮ್ ಇಂಡಿಯಾಗೆ ಬಿಗ್ ಶಾಕ್ ಕೊಟ್ಟ ICC | Oneindia Kannada

ಆದರೆ ಈ ಸಂದರ್ಭದಲ್ಲಿ ಏಕದಿನ ನಾಯಕತ್ವದಿಂದ ಕೆಳಕ್ಕಿಳಿಸುವ ವಿಚಾರವಾಗಿ ಬಿಸಿಸಿಐ ಸೂಕ್ತವಾದ ಸಂವಹನವನ್ನು ತನ್ನೊಂದಿಗೆ ನಡೆಸಿಲ್ಲ ಎಂಬ ವಿಚಾರವನ್ನು ವಿರಾಟ್ ಕೊಹ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಲ್ಲದೆ ಈ ಸಂದರ್ಭದಲ್ಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟಿ20 ನಾಯಕತ್ವವನ್ನು ತೊರೆಯದಂತೆ ವಿರಾಟ್ ಕೊಹ್ಲಿಗೆ ಒತ್ತಾಯಿಸಲಾಗಿತ್ತು ಎಂಬ ಹೇಳಿಕೆಯನ್ನು ವಿರಾಟ್ ಕೊಹ್ಲಿ ತಿರಸ್ಕರಿಸಿದ್ದರು. ಇದು ಸಾಕಷ್ಟು ವಿವಾದವಾಗಿತ್ತು. ಈಗ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವವನ್ನು ಕೂಡ ತೊರೆದಿದ್ದಾರೆ.

Story first published: Monday, January 17, 2022, 10:01 [IST]
Other articles published on Jan 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X