ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಿರ್ಗಮನ ಭಾರತದ ಬ್ಯಾಟಿಂಗ್‌ಮೇಲೆ ದೊಡ್ಡ ಪರಿಣಾಮ: ಇಯಾನ್ ಚಾಪೆಲ್

Virat Kohlis departure will create a big hole in Indias batting order, feels Ian Chappell

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದಿಲ್ಲ. ಪಿತೃತ್ವದ ರಜೆಯನ್ನು ಪಡೆದು ವಿರಾಟ್ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ವಾಪಾಸಾಗಲಿದ್ದಾರೆ. ಈ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಟೀಮ್ ಇಂಡಿಯಾ ನಾಯಕನ ತಂಡಕ್ಕೆ ಅಲಭ್ಯರಾಗುತ್ತಿರುವುದು ತಂಡಕ್ಕೆ ಬಹುದೊಡ್ಡ ನಷ್ಟವಾಗಲಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಹೇಳಿಕೆಯನ್ನು ನೀಡಿದ್ದಾರೆ.

ಮೊದಲ ಟೆಸ್ಟ್‌ನ ನಂತರ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಿದ ನಂತರ ಟೀಮ್ ಇಂಡಿಯಾದಲ್ಲಿ ಆಯ್ಕೆಯ ಸಂದಿಗ್ಧತೆ ಉಂಟಾಗಲಿದೆ. ಈ ನಿರ್ಗಮನ ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕದಲ್ಲ ದೊಡ್ಡ ರಂಧ್ರವನ್ನುಂಟುಮಾಡಲಿದೆ ಎಂದು ಇಯಾನ್ ಚಾಪೆಲ್ ಇಎಸ್‌ಪಿಎಲ್ ಕ್ರಿಕ್ ಇನ್ಫೋಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐತಂದೆಯ ಅಗಲಿಕೆಯ ನೋವಿನಲ್ಲೂ ದೇಶ ಸೇವೆಗೆ ಸಿರಾಜ್ ಬಯಸಿದ್ದಾರೆ: ಬಿಸಿಸಿಐ

ವಿರಾಟ್ ಕೊಹ್ಲಿ ನಿರ್ಗಮನದ ಬಳಿಕ ಟೀಮ್ ಇಂಡಿಯಾ ವಿಚಾರವಾಗಿ ಸಾಕಷ್ಟು ಬಿರುಸಿನ ಚರ್ಚೆಗಳು ಈಗ ನಡೆಯುತ್ತಿದೆ. ಈ ಚರ್ಚೆ ಆಯ್ಕೆಯ ಸಂದರ್ಭದಲ್ಲಿ ನಿರ್ಣಾಯಕವಾಗಿರಲಿದೆ ಎಂದು ಇಯಾನ್ ಚಾಪೆಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 17ರಂದು ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅಡಿಲೇಡ್ ಓವಲ್‌ನಲ್ಲಿ ನಡೆಯುವ ಈ ಪಂದ್ಯ ಅಹರ್ನಿಶಿ ಪಂದ್ಯವಾಗಿರಲಿದೆ. ಈ ಪಂದ್ಯ ಅಂತ್ಯವಾಗುತ್ತಿದ್ದಂತೆಯೇ ವಿರಾಟ್ ಕೊಹ್ಲಿ ಭಾರತಕ್ಕೆ ವಾಪಾಸಾಗಲಿದ್ದಾರೆ.

ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್ಭಾರತ vs ಆಸೀಸ್: ಗಾಯ ಗುಣವಾಗುತ್ತಿದೆ, ಹೋರಾಟಕ್ಕೆ ಸಿದ್ಧ-ರೋಹಿತ್

ಇನ್ನು ಇದಕ್ಕೂ ಮುನ್ನ ಆಸ್ಟ್ರೇಲಿಯದ ಆಲ್‌ರೌಂಡರ್ ಮಾರ್ಕಸ್ ಸ್ಟೋಯ್ನಿಸ್ ಕೊನೆಯ ಮೂರು ಟೆಸ್ಟ್ ಪಂದ್ಯಗಳಿಗೆ ಕೊಹ್ಲಿ ಅಲಭ್ಯರಾಗುವ ಹಿನ್ನೆಲೆಯಲ್ಲಿ ಅವರ ಸ್ಪೂರ್ತಿ ಕಡೆಯಾಗಲಿದೆ ಎಂಬ ವಾದವನ್ನು ತಿರಸ್ಕರಿಸಿದ್ದಾರೆ. "ವಿರಾಟ್ ಕೊಹ್ಲಿ ತಾನು ಆಡುವ ಪ್ರತಿಯೊಂದು ಪಂದ್ಯಕ್ಕೂ ಅದ್ಭುತವಾದ ಶಕ್ತಿಯೊಂದಿಗೆ ಕಣಕ್ಕಿಳಿಯುತ್ತಾರೆ. ಅದರಲ್ಲೂ ತನ್ನ ಮಗುವಿನ ಆಗಮದ ನಿರೀಕ್ಷೆಯಲ್ಲಿರುವ ಅವರು ಮಹತ್ತಷ್ಟು ಹುರುಪನ್ನು ಹೊಂದಿರುತ್ತಾರೆ" ಎಂದಿದ್ದರು.

Story first published: Sunday, November 22, 2020, 12:28 [IST]
Other articles published on Nov 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X