ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆಟ ಕಲಿಯುವ ಉತ್ಸಾಹವೇ ಕೊಹ್ಲಿಯನ್ನು 'ಶ್ರೇಷ್ಠ' ವ್ಯಕ್ತಿಯನ್ನಾಗಿಸಿದೆ'

Virat Kohlis eagerness to learn about his game makes him a great

ನವದೆಹಲಿ, ಮೇ 10: ಆಟವನ್ನು ಕಲಿಯಬೇಕೆನ್ನುವ ಕೊಹ್ಲಿಯ ಉತ್ಸಾಹವೇ ಅವರನ್ನು ಈ ದಿನಗಳಲ್ಲಿ ಕ್ರಿಕೆಟ್ ನ ಶ್ರೇಷ್ಠ ವ್ಯಕ್ತಿಯನ್ನಾಗಿಸಿದೆ ಎಂದು ವಿಶ್ವ ಕಪ್ ವಿಜೇತ ಭಾರತ ತಂಡದ ತರಬೇತುದಾರರಾಗಿದ್ದ ಗ್ಯಾರಿ ಕಸ್ಟರ್ನ್ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.

ಹೊಸದಿಲ್ಲಿಯಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಸೌತಾಫ್ರಿಕಾ ಮಾಜಿ ಕ್ರಿಕೆಟಿಗ ಕಸ್ಟರ್ನ್, 'ನನಗೆ ಕೊಹ್ಲಿ ಜೊತೆ ಕೆಲಸ ಮಾಡಲು ಖುಷಿಯೆನಿಸುತ್ತೆ. ಮುಂಬರಲಿರುವ ಇಂಗ್ಲೆಂಡ್ ಪ್ರವಾಸದ ವೇಳೆ ಇಂಗ್ಲೆಂಡ್-ಭಾರತ ತಂಡಗಳ ನಡುವಿನ ಕಾದಾಟ ಅತ್ಯಾಕರ್ಷಕವಾಗಲಿದೆ' ಎಂದರು.

'ಕೊಹ್ಲಿ ಒಬ್ಬರು ಶ್ರೇಷ್ಠ ಆಟಗಾರ. ಅವರು ಮುನ್ನಡೆಯುತ್ತಲೇ ಸುಧಾರಣೆ ಕಾಣುತ್ತಿದ್ದಾರೆ. ಸುಧಾರಣೆ ನಿಟ್ಟಿನಲ್ಲಿ ಉತ್ತಮ ಫಲಿತಾಂಶವನ್ನೂ ಪಡೆಯುತ್ತಿದ್ದಾರೆ. ಕೊಹ್ಲಿ ಜೊತೆಗೆ ಕೆಲಸ ಮಾಡಲು ಖುಷಿಯೆನಿಸುತ್ತೆ. ಯಾಕೆಂದರೆ ಅವರು ಕ್ರಿಕೆಟ್ ಆಟ ಕಲಿಯುವಲ್ಲಿ ಅತೀವ ಉತ್ಸಾಹ ತೋರುತ್ತಾರೆ. ಈ ಗುಣ ಶ್ರೇಷ್ಠ ವ್ಯಕ್ತಿಗಳಲ್ಲಷ್ಟೇ ಕಾಣಲು ಸಾಧ್ಯ' ಎಂದು ಕಸ್ಟರ್ನ್ ಕೊಹ್ಲಿಯನ್ನು ಕೊಂಡಾಡಿದ್ದಾರೆ.

'ಇಂಗ್ಲೆಂಡ್-ಭಾರತ ಸರಣಿ ನಿಜಕ್ಕೂ ಸ್ಪರ್ಧಾತ್ಮಕ ಸರಣಿಯಾಗಲಿದೆ. ಇತ್ತಂಡಗಳ ಕಾದಾಟ ನೋಡುವವರಿಗೂ ಆಕರ್ಷಕವೆನಿಸುವುದರ ಜೊತೆಗೆ ಸಂತೋಷವನ್ನುಂಟು ಮಾಡಲಿದೆ' ಎಂದೂ ಗ್ಯಾರಿ ತಿಳಿಸಿದರು.

Story first published: Thursday, May 10, 2018, 17:21 [IST]
Other articles published on May 10, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X