ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದೆಂಥ ನಾಯಕತ್ವ, ಆ ಇಬ್ಬರಿಲ್ಲದೇ ಟೀಮ್ ಇಂಡಿಯಾ ಸೋತಿದೆ ಎಂದು ಬೇಸರಗೊಂಡ ಮಾಜಿ ಕ್ರಿಕೆಟಿಗ

Virat Kohlis energy was missing during the first ODI against SA says Pakistans ex cricketer

ಸದ್ಯ ದಕ್ಷಿಣ ಆಫ್ರಿಕಾ ನೆಲದಲ್ಲಿ ನಡೆಯುತ್ತಿರುವ ಹರಿಣಗಳ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿರುವ ಟೀಮ್ ಇಂಡಿಯಾ ಈ ಏಕದಿನ ಸರಣಿಯ ಚೊಚ್ಚಲ ಪಂದ್ಯದಲ್ಲಿಯೇ ದಕ್ಷಿಣ ಆಫ್ರಿಕಾ ವಿರುದ್ಧ 31 ರನ್‌ಗಳ ಹೀನಾಯ ಸೋಲನ್ನು ಅನುಭವಿಸುವುದರ ಮೂಲಕ ಸರಣಿಯಲ್ಲಿ ಕಳಪೆ ಆರಂಭವನ್ನು ಪಡೆದುಕೊಂಡಿದೆ.

2021ರ ವಾರ್ಷಿಕ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತದ ಆಟಗಾರರನ್ನು ಹುಡುಕಿದವರಿಗೆ ಆಶ್ಚರ್ಯ!2021ರ ವಾರ್ಷಿಕ ಏಕದಿನ ತಂಡ ಪ್ರಕಟಿಸಿದ ಐಸಿಸಿ: ಭಾರತದ ಆಟಗಾರರನ್ನು ಹುಡುಕಿದವರಿಗೆ ಆಶ್ಚರ್ಯ!

ಸದ್ಯ ಸರಣಿಯ ಮೊದಲನೇ ಪಂದ್ಯದಲ್ಲಿಯೇ ಸೋತು 0-1 ಅಂತರದಲ್ಲಿ ಹಿನ್ನಡೆಯನ್ನು ಅನುಭವಿಸಿರುವ ಟೀಮ್ ಇಂಡಿಯಾ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಟೆಸ್ಟ್ ಸರಣಿಯ ರೀತಿಯೇ ಏಕದಿನ ಸರಣಿಯಲ್ಲಿಯೂ ಕೂಡ ಸೋತು ಮುಖಭಂಗಕ್ಕೆ ಒಳಗಾಗಲಿದೆಯಾ ಎಂಬ ಪ್ರಶ್ನೆ ಇದೀಗ ಎಲ್ಲರಲ್ಲಿಯೂ ಮೂಡಿದೆ. ಸರಣಿಯಲ್ಲಿ ಇನ್ನೆರಡು ಪಂದ್ಯಗಳು ಉಳಿದಿದ್ದು ಟೀಮ್ ಇಂಡಿಯಾ ಈ ಅವಮಾನದಿಂದ ಪಾರಾಗಬೇಕೆಂದರೆ ಆ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿಭಾರತ vs ದ.ಆಫ್ರಿಕಾ ಪ್ರಥಮ ಏಕದಿನ: ಸಚಿನ್ ಬೃಹತ್ ದಾಖಲೆ ಮುರಿದು ಹಾಕಿದ ವಿರಾಟ್ ಕೊಹ್ಲಿ

ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯಲ್ಲಿ 1-2 ಅಂತರದಲ್ಲಿ ಹೀನಾಯ ಸೋಲನ್ನು ಕಂಡಿರುವ ಟೀಮ್ ಇಂಡಿಯಾ ಇದೀಗ ಏಕದಿನ ಸರಣಿಯಲ್ಲಿ ಗೆಲುವು ಸಾಧಿಸುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಆದರೆ ಟೀಮ್ ಇಂಡಿಯಾ ಚೊಚ್ಚಲ ಏಕದಿನ ಪಂದ್ಯದಲ್ಲಿ ನೀಡಿರುವ ಪ್ರದರ್ಶನವನ್ನು ಕಂಡ ನಂತರ ಹಲವಾರು ಕ್ರಿಕೆಟ್ ಅಭಿಮಾನಿಗಳಿಗೆ ಹಾಗೂ ಮಾಜಿ ಕ್ರಿಕೆಟಿಗರಿಗೆ ಟೀಮ್ ಇಂಡಿಯಾ ಉಳಿದೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಕುರಿತು ಅನುಮಾನ ಶುರುವಾಗಿದೆ. ಅದರಲ್ಲಿಯೂ ಕೆಎಲ್ ರಾಹುಲ್ ನಾಯಕತ್ವದ ಕುರಿತು ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದ್ದು, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಕೂಡ ಈ ಕುರಿತು ಮಾತನಾಡಿ ಕೆಳಕಂಡಂತೆ ಹೇಳಿಕೆಗಳನ್ನು ನೀಡಿದ್ದಾರೆ.

ಆ ಇಬ್ಬರಿಲ್ಲದ ಟೀಮ್ ಇಂಡಿಯಾ ಸೋತಿದೆ ಎಂದ ಸಲ್ಮಾನ್ ಬಟ್

ಆ ಇಬ್ಬರಿಲ್ಲದ ಟೀಮ್ ಇಂಡಿಯಾ ಸೋತಿದೆ ಎಂದ ಸಲ್ಮಾನ್ ಬಟ್

ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿಗೆ ರೋಹಿತ್ ಶರ್ಮಾ ಹಾಗೂ 'ನಾಯಕ ವಿರಾಟ್ ಕೊಹ್ಲಿ'ಯ ಅಲಭ್ಯತೆ ಕಾರಣ ಎಂದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಹೊರಗುಳಿದಿರುವ ರೋಹಿತ್ ಶರ್ಮಾ ಇಲ್ಲದೇ ಇರುವುದು ಟೀಮ್ ಇಂಡಿಯಾ ಸೋಲಿಗೆ ಒಂದು ಕಾರಣವಾದರೆ, ಮತ್ತೊಂದು ಕಾರಣ ತಂಡದಲ್ಲಿ ವಿರಾಟ್ ಕೊಹ್ಲಿ ಇದ್ದರೂ ಕೂಡ ಅವರು ನಾಯಕತ್ವ ನಿರ್ವಹಿಸದೇ ಇರುವುದು ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ. ಒಂದುವೇಳೆ ಇಂತಹ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವ ಇದ್ದಿದ್ದರೆ ಟೀಮ್ ಇಂಡಿಯಾ ಜಯ ಸಾಧಿಸುತ್ತಿತ್ತು ಎಂದು ಸಲ್ಮಾನ್ ಬಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಹುಲ್ ನಾಯಕತ್ವದ ವಿಧಾನದ ಬಗ್ಗೆ ಸಲ್ಮಾನ್ ಬಟ್ ಬೇಸರ

ರಾಹುಲ್ ನಾಯಕತ್ವದ ವಿಧಾನದ ಬಗ್ಗೆ ಸಲ್ಮಾನ್ ಬಟ್ ಬೇಸರ

ಇನ್ನೂ ಮುಂದುವರಿದು ಮಾತನಾಡಿರುವ ಸಲ್ಮಾನ್ ಬಟ್ ದಕ್ಷಿಣ ಆಫ್ರಿಕಾ ವಿರುದ್ಧದ ಚೊಚ್ಚಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಗ್ರೆಸ್ಸಿವ್ ನಾಯಕತ್ವ ಕಾಣ ಸಿಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಕೊಹ್ಲಿ ನಾಯಕನಾಗಿ ಮೈದಾನದಲ್ಲಿ ಸೃಷ್ಟಿಸುತ್ತಿದ್ದ ಎನರ್ಜಿ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕಾಣಸಿಗಲಿಲ್ಲ ಹಾಗೂ ಕೊಹ್ಲಿಯಂತಹ ಅಗ್ರೆಸಿವ್ ನಾಯಕನಿಂದ ನಾಯಕತ್ವವನ್ನು ಇತರೆ ಆಟಗಾರನ ಹೆಗಲಿಗೆ ಹಾಕಿದರೆ ಮೈದಾನದಲ್ಲಿ ತಂಡದ ಉತ್ಸಾಹವೇ ಬದಲಾಗಿಬಿಡುತ್ತದೆ ಎಂದಿರುವ ಸಲ್ಮಾನ್ ಬಟ್ ವಿರಾಟ್ ಕೊಹ್ಲಿಯ ಅಗ್ರೆಸಿವ್ ನಾಯಕತ್ವ ಇಲ್ಲದೇ ಇರುವುದು ಸೋಲಿಗೆ ಕಾರಣವಾಯಿತು ಎಂದು ಹೇಳಿದ್ದಾರೆ.

ಏಕದಿನ ಸರಣಿಯನ್ನು ಸೋತರೆ ಗತಿಯೇನು?

ಏಕದಿನ ಸರಣಿಯನ್ನು ಸೋತರೆ ಗತಿಯೇನು?

ಇನ್ನು ಭಾರತ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನೂ ಕೂಡ ಸೋತರೆ ಭಾರೀ ಮುಖಭಂಗಕ್ಕೆ ಒಳಗಾಗಲಿದೆ ಎಂದಿರುವ ಸಲ್ಮಾನ್ ಬಟ್ ಈ ರೀತಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಏಕದಿನ ಹಾಗೂ ಟೆಸ್ಟ್ ಎರಡೂ ಸರಣಿಗಳನ್ನು ಸೋತು ಎಷ್ಟು ವರ್ಷಗಳಾಗಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Story first published: Thursday, January 20, 2022, 19:20 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X