ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ ಸಂದೇಶ ನನಗೆ ಸ್ಫೂರ್ತಿ ನೀಡಿತು: ಹರ್ಷಲ್ ಪಟೇಲ್

Virat Kohlis message made me realise I can perform at RCB, says Harshal Patel
ತಂಡದ ನಾಯಕನ ಪರವಾಗಿ ಮಾತಾಡಿದ ಹರ್ಷಲ್ | Oneindia Kannada

ನವದೆಹಲಿ: ಟೀಮ್ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ವಿರಾಟ್ ಕೊಹ್ಲಿಯ ಸಂದೇಶ ನಾನು ಕೂಡ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಉತ್ತಮ ಪ್ರದರ್ಶನ ನೀಡಬಲ್ಲೆ ಎಂಬ ಅರಿವು ಮೂಡಿಸಿತು ಎಂದು ಆರ್‌ಸಿಬಿ ವೇಗಿ ಹರ್ಷಲ್ ಪಟೇಲ್ ಹೇಳಿದ್ದಾರೆ.

ಐಪಿಎಲ್‌ಗಾಗಿ ನಾನು ಮತ್ತೆ ಭಾರತಕ್ಕೆ ಬರಲು ಸಿದ್ಧನಿದ್ದೇನೆ: ನೀಶಮ್ಐಪಿಎಲ್‌ಗಾಗಿ ನಾನು ಮತ್ತೆ ಭಾರತಕ್ಕೆ ಬರಲು ಸಿದ್ಧನಿದ್ದೇನೆ: ನೀಶಮ್

ಈ ಬಾರಿಯ ಐಪಿಎಲ್ ಹರಾಜಿನ ವೇಳೆ ಹರ್ಷಲ್ ಪಟೇಲ್ ಅವರು ಡೆಲ್ಲಿ ಕ್ಯಾಪಿಟಲ್ಸ್‌ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಬಂದಿದ್ದರು. ಆರ್‌ಸಿಬಿಗೆ ಬಂದಿದ್ದ ಪಟೇಲ್ ಅದ್ಭುತ ಪ್ರದರ್ಶನವೂ ನೀಡಿದ್ದರು. 7 ಪಂದ್ಯಗಳನ್ನಾಡಿದ್ದ ಪಟೇಲ್ 17 ವಿಕೆಟ್‌ಗಳೊಂದಿಗೆ ಅತ್ಯಧಿಕ ವಿಕೆಟ್ ಸರದಾರರಲ್ಲಿ ಮೊದಲ ಸ್ಥಾನದಲ್ಲಿದ್ದರು.

'ನಾನು ಆರ್‌ಸಿಬಿಗೆ ಖರೀದಿಸಲ್ಪಟ್ಟಾಗ ಕೊಹ್ಲಿ ನನಗೆ ಒಂದು ಮೆಸೇಜ್ ಕಳುಹಿಸಿದರು. 'ನಿನಗೆ ಮತ್ತೆ ಸ್ವಾಗತ. ನೀನಿಲ್ಲಿ ಆಡ್ತೀಯ' ಎಂದು ಕೊಹ್ಲಿ ಕಳುಹಿಸಿದ ಮೆಸೇಜ್ ನನ್ನಲ್ಲಿ ಆತ್ಮವಿಶ್ವಾಸ ತುಂಬಿತು. ಆ ಮೆಸೇಜ್ ನಾನು ನನ್ನ ಪ್ರದರ್ಶನ ನೀಡುವುದಿದ್ದರೆ ಇದೇ ತಂಡದಲ್ಲಿ ಅಂದುಕೊಂಡೆ,' ಎಂದು ಹಿಂದುಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಪಟೇಲ್ ಹೇಳಿದ್ದಾರೆ.

ಐಸಿಸಿ ಏಪ್ರಿಲ್ ತಿಂಗಳ ಆಟಗಾರ ಪ್ರಶಸ್ತಿ ಪ್ರಕಟ ; ಮೊದಲ ಬಾರಿಗೆ ಭಾರತೀಯರ ಕೈತಪ್ಪಿದ ಪ್ರಶಸ್ತಿಐಸಿಸಿ ಏಪ್ರಿಲ್ ತಿಂಗಳ ಆಟಗಾರ ಪ್ರಶಸ್ತಿ ಪ್ರಕಟ ; ಮೊದಲ ಬಾರಿಗೆ ಭಾರತೀಯರ ಕೈತಪ್ಪಿದ ಪ್ರಶಸ್ತಿ

30ರ ಹರೆಯದ ಗುಜರಾತ್ ಆಟಗಾರ ಹರ್ಷಲ್ 53 ಐಪಿಎಲ್ ಪಂದ್ಯಗಳಲ್ಲಿ 63 ವಿಕೆಟ್ ದಾಖಲೆ ಹೊಂದಿದ್ದಾರೆ. ಅಂದ್ಹಾಗೆ ಪಟೇಲ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದು ಆರ್‌ಸಿಬಿಯಲ್ಲೆ 2012ರಲ್ಲಿ. ಆ ಬಳಿಕ ಡೆಲ್ಲಿ ತಂಡಕ್ಕೆ ಹೋಗಿದ್ದ ಪಟೇಲ್ ಮತ್ತೆ ಆರ್‌ಸಿಬಿಗೆ ವಾಪಸ್ಸಾಗಿದ್ದರು.

Story first published: Monday, May 10, 2021, 21:06 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X