ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದಪ್ಪಾ ಕ್ರೇಜ್ ಅಂದ್ರೆ; 2022ರ ಟಿ20 ವಿಶ್ವಕಪ್‌ಗೂ ಮುನ್ನ ಸಿಡ್ನಿಯಲ್ಲಿ ಘರ್ಜಿಸಿದ ಕೊಹ್ಲಿ!

Virat Kohlis picture at Sydney ahead of the schedule announcement of T20 World Cup 2022

ಕಳೆದ ವರ್ಷದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯವರೆಗೂ ಭಾರತ ಟಿ ಟ್ವೆಂಟಿ, ಏಕದಿನ ಹಾಗೂ ಟೆಸ್ಟ್ ಈ ಮೂರೂ ತಂಡಗಳಿಗೂ ನಾಯಕನಾಗಿದ್ದ ವಿರಾಟ್ ಕೊಹ್ಲಿ ಸದ್ಯ ಇದೀಗ ಕೇವಲ ಓರ್ವ ಆಟಗಾರನಾಗಿ ಮಾತ್ರ ಭಾರತ ತಂಡದಲ್ಲಿ ಉಳಿದುಕೊಂಡಿದ್ದಾರೆ. ಹೌದು, ಕಳೆದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಕೊಹ್ಲಿ ತದನಂತರ ಏಕದಿನ ತಂಡದ ನಾಯಕತ್ವವನ್ನು ಕೂಡ ಕಳೆದುಕೊಂಡರು ಹಾಗೂ ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ನಂತರ ಭಾರತ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ವಿರಾಟ್ ಕೊಹ್ಲಿ ರಾಜಿನಾಮೆ ಘೋಷಿಸುವ ಮೂಲಕ ತ್ಯಜಿಸಿದರು.

ನಾನೀಗ ನಾಯಕನಲ್ಲ, ಯಾರಿಗೂ ಹೆದರುವುದೂ ಇಲ್ಲ: ಆ ಆಟಗಾರನ ವಿರುದ್ಧ ಮೈದಾನದಲ್ಲೇ ಕೊಹ್ಲಿ ಕಿಡಿ!ನಾನೀಗ ನಾಯಕನಲ್ಲ, ಯಾರಿಗೂ ಹೆದರುವುದೂ ಇಲ್ಲ: ಆ ಆಟಗಾರನ ವಿರುದ್ಧ ಮೈದಾನದಲ್ಲೇ ಕೊಹ್ಲಿ ಕಿಡಿ!

ಹೀಗೆ ಸಾಲುಸಾಲಾಗಿ ನಾಯಕತ್ವಗಳನ್ನು ತ್ಯಜಿಸುತ್ತಾ ಭಾರೀ ಸುದ್ದಿಗೀಡಾಗಿರುವ ವಿರಾಟ್ ಕೊಹ್ಲಿ ಸದ್ಯ ಕ್ರಿಕೆಟ್ ಜಗತ್ತಿನಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದ್ದಾರೆ. ಇನ್ನು ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಪಂದ್ಯ ಪ್ರಸಾರಕರ ವಿರುದ್ಧ ಮೈದಾನದಲ್ಲಿಯೇ ಸ್ಟಂಪ್ ಮೈಕ್ ಮೂಲಕ ಕಿಡಿಕಾರುತ್ತಾ ಆಕ್ರೋಶ ಹೊರಹಾಕಿ ವಿವಾದಕ್ಕೀಡಾಗಿದ್ದರು.

ಭಾರತ vs ದ.ಆಫ್ರಿಕಾ: ಇವರಿಂದಾಗಿ ವೆಂಕಟೇಶ್ ಐಯ್ಯರ್‌ಗೆ ರಾಹುಲ್ ಬೌಲಿಂಗ್ ನೀಡಲಿಲ್ಲ ಎಂದ ಧವನ್!ಭಾರತ vs ದ.ಆಫ್ರಿಕಾ: ಇವರಿಂದಾಗಿ ವೆಂಕಟೇಶ್ ಐಯ್ಯರ್‌ಗೆ ರಾಹುಲ್ ಬೌಲಿಂಗ್ ನೀಡಲಿಲ್ಲ ಎಂದ ಧವನ್!

ಅದೇ ರೀತಿ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿಯೂ ಕೂಡ ಟೆಂಬಾ ಬವುಮಾ ಜೊತೆ ಮೈದಾನದಲ್ಲಿಯೇ ಮಾತಿನ ಚಕಮಕಿ ನಡೆಸಿದ ವಿರಾಟ್ ಕೊಹ್ಲಿ 'ಏನು? ನೀನು ಸ್ಟಂಪ್ ಗೆರೆ ಬಿಟ್ಟು ಮುಂದೆ ಬಂದಿದ್ದೆ, ಹಾಗಾಗಿ ನಾನು ಚೆಂಡನ್ನು ಎಸೆದೆ. ನಾನು ಇನ್ನು ಮುಂದೆ ನಾಯಕನಲ್ಲ, ಹೀಗಾಗಿ ನಾನು ಪಂದ್ಯ ಮುಗಿದ ನಂತರ ಯಾರಿಗೂ ಉತ್ತರವನ್ನು ನೀಡಬೇಕಾಗಿಲ್ಲ. ಆದ್ದರಿಂದ ನೀನು ನಿನ್ನ ಮಿತಿಯಲ್ಲಿರುವುದು ಒಳ್ಳೆಯದು ಇಲ್ಲವಾದರೆ ಬ್ಯಾಟಿಂಗ್ ಮರೆಯಬೇಕಾಗುತ್ತದೆ' ಎಂದು ಹೇಳುವುದರ ಮೂಲಕ ಮತ್ತೊಮ್ಮೆ ವಿವಾದಕ್ಕೆ ಒಳಗಾಗಿದ್ದರು.

ಹೀಗೆ ಮೈದಾನದಲ್ಲಿ ವರ್ತಿಸಿದ ವಿರಾಟ್ ಕೊಹ್ಲಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೀ ದೊಡ್ಡ ಮಟ್ಟದಲ್ಲಿಯೇ ಟೀಕೆಗಳು ವ್ಯಕ್ತವಾಗಿದ್ದವು. ಓರ್ವ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಕೊಹ್ಲಿ ಈ ರೀತಿ ವರ್ತಿಸುವುದರಿಂದ ತನ್ನ ಘನತೆ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ವಿರಾಟ್ ಕೊಹ್ಲಿ ಅವರ ಕಾಲೆಳೆದಿದ್ದರು. ಆದರೆ ಇದೀಗ ಈ ಘಟನೆಗಳ ಬೆನ್ನಲ್ಲೇ ಸಿಡ್ನಿ ನಗರದ ಬೀದಿಗಳಲ್ಲಿ ವಿರಾಟ್ ಕೊಹ್ಲಿ ಚಿತ್ರಗಳು ರಾರಾಜಿಸುತ್ತಿದ್ದು, ಕೊಹ್ಲಿ ವಿರುದ್ಧ ಎದ್ದಿದ್ದ ಟೀಕೆಗಳಿಗೆ ಉತ್ತರ ಸಿಕ್ಕಂತಾಗಿದೆ.

ಹೌದು, ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದ್ದು, ಟೂರ್ನಿಯ ವೇಳಾಪಟ್ಟಿ ಪ್ರಕಟಿಸುವ ಸಲುವಾಗಿ ಸಿಡ್ನಿಯ ಬೀದಿಗಳಲ್ಲಿ ವಿರಾಟ್ ಕೊಹ್ಲಿ ಚಿತ್ರಗಳನ್ನು ಪ್ರದರ್ಶಿಸುವುದರ ಮೂಲಕ ಜಾಹೀರಾತನ್ನು ಮಾಡಲಾಗುತ್ತಿದೆ. ಸದ್ಯ ಸಿಡ್ನಿ ನಗರದಲ್ಲಿ ಕೊಹ್ಲಿ ಚಿತ್ರಗಳು ರಾರಾಜಿಸುತ್ತಿರುವುದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುವ ಕೊಹ್ಲಿ ಅಭಿಮಾನಿಗಳು ಇದಪ್ಪಾ ವಿರಾಟ್ ಕೊಹ್ಲಿ ಕ್ರೇಜ್ ಅಂದ್ರೆ ಎಂದು ಸಂತಸ ಹೊರಹಾಕುತ್ತಿದ್ದಾರೆ.

Story first published: Thursday, January 20, 2022, 22:58 [IST]
Other articles published on Jan 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X