ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

9, 2, 19, 3, 14 : ಏನಾಯ್ತು 'ರನ್ ಮಷಿನ್' ವಿರಾಟ್ ಕೊಹ್ಲಿ!

Virat Kohlis Stats In New Zealand Reveal How Bad India Captain Has Been

9, 2, 19, 3, 14 ಇದು ವಿರಾಟ್ ಕೊಹ್ಲಿ ಕಳೆದ ಐದು ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಗಳಿಸಿದ ರನ್. ವೃತ್ತಿ ಜೀವನದ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮುಗ್ಗರಿಸಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಿಂದೆಂದೂ ಎದುರಿಸದ ಪರಿಸ್ಥಿತಿಯಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್‌ಗಳಿಸಲು ಅಕ್ಷರಶಃ ವಿರಾಟ್ ಪರದಾಡುತ್ತಿದ್ದಾರೆ. ಅದು ಎಷ್ಟಮಟ್ಟಿಗೆಂದರೆ ಒಂದೊಂದು ರನ್‌ಗೂ ವಿರಾಟ್ ತಿಣುಕಾಡುತ್ತಿರುವುದು ಸ್ಪಷ್ಟವಾಗುತ್ತಿದೆ.

ಮೈದಾನದಾಚೆ ಯಾವ ಭಾರತೀಯನಿಂದಲೂ ಸಾಧ್ಯವಾಗದ ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿಮೈದಾನದಾಚೆ ಯಾವ ಭಾರತೀಯನಿಂದಲೂ ಸಾಧ್ಯವಾಗದ ಮೈಲಿಗಲ್ಲು ತಲುಪಿದ ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಟಿ20 ಸರಣಿಯನ್ನು ವೈಟ್‌ ವಾಶ್ ಮಾಡಿದ ಬಳಿಕ ಒಂದೇ ಒಂದು ಸರಣಿಯನ್ನು ಗೆದ್ದುಕೊಂಡಿಲ್ಲ. ಇಡೀ ಬ್ಯಾಟಿಂಗ್ ವಿಭಾಗವೇ ವೈಫಲ್ಯವನ್ನು ಅನುಭವಿಸುತ್ತಿದೆ. ಈ ಮಧ್ಯೆ ವಿರಾಟ್ ಕೊಹ್ಲಿ ಕೂಡ ಬ್ಯಾಟಿಂಗ್‌ನಲ್ಲಿ ಕೈಕೊಡುತ್ತಿರುವುದು ಟೀಮ್ ಇಂಡಿಯಾಗೆ ದೊಡ್ಡ ಹಿನ್ನೆಡೆಯಾಗಿದೆ.

ಟೆಸ್ಟ್‌ನಲ್ಲಿ ಸಂಪೂರ್ಣ ವೈಫಲ್ಯ

ಟೆಸ್ಟ್‌ನಲ್ಲಿ ಸಂಪೂರ್ಣ ವೈಫಲ್ಯ

ವಿರಾಟ್ ಕೊಹ್ಲಿ ಎರಡು ಟೆಸ್ಟ್‌ನ ನಾಲ್ಕು ಇನ್ನಿಂಗ್ಸ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ಮೊದಲ ಟೆಸ್ಟ್‌ನಲ್ಲಿ 23 ಮತ್ತು 2 ರನ್‌ಗಳಿಸಿದ ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ 19 ಮತ್ತು 3 ರನ್‌ಗಳಿಸಿದ್ದಾರೆ. ಕಳೆದ ಐದು ಇನ್ನಿಂಗ್ಸ್‌ನಲ್ಲಿ ಕೊಹ್ಲಿ 10 ರನ್‌ಗಿಂತ ಕಡಿಮೆ ಸರಾಸರಿಯನ್ನು ಹೊಂದಿದ್ದಾರೆ. ಇದು ಕೊಹ್ಲಿ ಕೆರಿಯರ್‌ನಲ್ಲೇ ಕಳಪೆ.

ನ್ಯೂಜಿಲೆಂಡ್ ಸರಣಿಯಲ್ಲಿ ಒಂದೇ ಅರ್ಧ ಶತಕ:

ನ್ಯೂಜಿಲೆಂಡ್ ಸರಣಿಯಲ್ಲಿ ಒಂದೇ ಅರ್ಧ ಶತಕ:

ಪ್ರತಿ ಸರಣಿಯಲ್ಲಿ ಶತಕ ಬಾರಿಸಿ ಮಿಂಚುತ್ತಿದ್ದ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ನೆಲದಲ್ಲಿ ಅರ್ಧ ಶತಕವನ್ನು ಬಾರಿಸಲು ಸಾಧ್ಯವಾಗಿಲ್ಲ. ಐದು ಟಿ20, 3 ಏಕದಿನ ಮತ್ತು 2 ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ ಒಂದು ಅರ್ಧ ಶತಕವನ್ನು ಬಾರಿಸುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದಾರೆ.

9 ಇನ್ನಿಂಗ್ಸ್‌ಗಳಲ್ಲಿ 218 ರನ್

9 ಇನ್ನಿಂಗ್ಸ್‌ಗಳಲ್ಲಿ 218 ರನ್

ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎಲ್ಲಾ ಮಾದರಿಯ ಸರಣಿಯಲ್ಲಿ ಒಂದು ಪಂದ್ಯವನ್ನು ಮಾತ್ರ ತಪ್ಪಿಸಿಕೊಂಡಿದ್ದಾರೆ. ಅಂತಿಮ ಟಿ20 ಪಂದ್ಯದಲ್ಲಿ ಕೊಹ್ಲಿ ಕಣಕ್ಕಿಳಿದಿರಲಿಲ್ಲ. ಈ. ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೂರ್ನಿಯ ಏಕಮಾತ್ರ ಅರ್ಧಶತಕವನ್ನು ಗಳಿಸಿದ್ದಾರೆ. ಟಿ20 ಸರಣಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಕ್ರಮವಾಗಿ 45, 11, 38, 11 ರನ್ ಗಳಿಸಿದ್ದರು. ಏಕದಿನದಲ್ಲಿ 51, 15, 9 ರನ್‌ಗಳಿಸಿದರೆ, ಟೆಸ್ಟ್‌ನಲ್ಲಿ ನಾಲ್ಕು ಇನ್ನಿಂಗ್ಸ್‌ನಲ್ಲಿ 2, 19, 3, 14 ರನ್‌ಗಳಿಸಿದ್ದಾರೆ.

ಒಂದು ಶತಕಗಳಿಸದೆ ಆರು ತಿಂಗಳು:

ಒಂದು ಶತಕಗಳಿಸದೆ ಆರು ತಿಂಗಳು:

ವಿರಾಟ್ ಕೊಹ್ಲಿ ಅಂತಿಮವಾಗಿ ಶತಕವನ್ನು ಬಾರಿಸಿದ್ದು ಕಳೆದ ಆಗಸ್ಟ್‌ನಲ್ಲಿ. ವೆಸ್ಟ್‌ ಇಂಡೀಸ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಸತತ ಎರಡು ಪಂದ್ಯಗಳಲ್ಲಿ ಶತಕವನ್ನು ಬಾರಿಸಿದ್ದರು. ಅದೇ ಕೊನೆ ಅಲ್ಲಿಂದ ನಂತರ ಆಡಿದ ಸರಣಿಯಲ್ಲಿ ಕೊಹ್ಲಿ ಶತಕವನ್ನು ಬಾರಿಸಿಲ್ಲ.

ವಿಶ್ವಕಪ್‌ನಲ್ಲೇ ಕಳೆಗುಂದಿದ ಕೊಹ್ಲಿ:

ವಿಶ್ವಕಪ್‌ನಲ್ಲೇ ಕಳೆಗುಂದಿದ ಕೊಹ್ಲಿ:

ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಮೇಲೆ ತುಂಬಾ ನಿರೀಕ್ಷೆಗಳು ಇತ್ತು. ವಿರಾಟ್ ಕೊಹ್ಲಿ ಅದಾಗಲೆ 41 ಶತಕವನ್ನು ಬಾರಿಸಿದ್ದರು. ವಿಶ್ವಕಪ್‌ನಲ್ಲಿ ಶತಕಗಳ ಸುರಿಮಳೆಯನ್ನು ಸುರಿಸುವ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ರೋಹಿತ್ ಶರ್ಮಾ 5 ಶತಕ ಬಾರಿಸಿ ಮಿಂಚಿದರೆ ವಿರಾಟ್ ಕೊಹ್ಲಿ ಒಂದು ಶತಕವನ್ನು ಬಾರಿಸಲೂ ಸಾಧ್ಯವಾಗಲಿಲ್ಲ. ಕನಿಷ್ಟ ಒಂದು ಅರ್ಧ ಶತಕವೂ ಕೊಹ್ಲಿ ಬ್ಯಾಟ್‌ನಿಂದ ಬರಲಿಲ್ಲ.

ಇಂಗ್ಲೆಂಡ್‌ಗಿಂತಲೂ ಕೆಟ್ಟ ಸರಣಿ:

ಇಂಗ್ಲೆಂಡ್‌ಗಿಂತಲೂ ಕೆಟ್ಟ ಸರಣಿ:

ವಿರಾಟ್ ಕೊಹ್ಲಿ ಪಾಲಿಗೆ ಈವರೆಗೆ 2014ರಲ್ಲಿ ಇಂಗ್ಲೆಂಡ್‌ ವಿರುದ್ಧದ ಸರಣಿಯೇ ಅತ್ಯಂತ ಕಳಪೆ ಸರಣಿಯಾಗಿತ್ತು. ಎಲ್ಲಾ ಮಾದರಿಯಲ್ಲಿ ವಿರಾಟ್ ಆ ಸರಣಿಯಲ್ಲಿ 254 ರನ್‌ಗಳಿಸಲಷ್ಟೇ ಶಕ್ತರಾಗಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ವಿರಾಟ್ ಅದಕ್ಕಿಂತಲೂ ಕಳಪೆಯನ್ನಾಗಿಸಿದರು.

ಫಾರ್ಮ್‌ಗೆ ಮರಳಲೇ ಬೇಕಿದೆ ಕೊಹ್ಲಿ

ಫಾರ್ಮ್‌ಗೆ ಮರಳಲೇ ಬೇಕಿದೆ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ನೀಡಲು ಇನ್ನು ಯಾವುದೇ ಅವಕಾಶ ಇಲ್ಲ. ಇನ್ನು ಮುಂದಿರುವುದು ದ.ಆಫ್ರಿಕಾ ವಿರುದ್ಧದ ಸರಣಿ. ಆ ಸರಣಿಯಲ್ಲಿ ಟೀಮ್ ಇಂಡಿಯಾ ಪರವಾಗಿ ವಿರಾಟ್ ಕೊಹ್ಲಿ ಮಿಂಚಲೇ ಬೇಕಿದೆ.

Story first published: Sunday, March 1, 2020, 13:21 [IST]
Other articles published on Mar 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X