ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಆಸ್ಟ್ರೇಲಿಯಾ: ಸಚಿನ್ ದಾಖಲೆ ಮುರಿಯುತ್ತಾರಾ ಕೊಹ್ಲಿ!

IND vs AUS 1st ODI : Can Virat break Sachin's record this week ? | VIRAT KOHLI | SACHIN | ODI

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟನ್ನು ಆಳುತ್ತಿರುವ ದಾಖಲೆವೀರ. ಪ್ರತೀ ಪಂದ್ಯದಲ್ಲೂ ಒಂದಲ್ಲಾ ಒಂದು ದಾಖಲೆಯನ್ನು ತನ್ನ ಹೆಸರಿನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಮಿಂಚು ಹರಿಸಿರುವ ಕೊಹ್ಲಿಯತ್ತ ಕ್ರಿಕೆಟ್ ಜಗತ್ತು ಯಾವಾಗಲೂ ಕಣ್ಣಿಟ್ಟಿದೆ.

ಟೀಮ್ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ಇದೀಗ ಮತ್ತೊಂದು ದಾಖಲೆಯನ್ನು ತನ್ನ ಹೆಸರಿಗೆ ಬರೆಯಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈ ದಾಖಲೆಯನ್ನು ಸರಿಗಟ್ಟುವ ದೊಡ್ಡ ಅವಕಾಶವೊಂದು ಕೊಹ್ಲಿ ಮುಂದಿದೆ.

ಕೆಕೆಆರ್‌ನ ಅತೀ ಹಿರಿಯ ಆಟಗಾರನಿಗೆ ಐಪಿಎಲ್ ಆಡಲು ಅವಕಾಶವೇ ಇಲ್ಲ!ಕೆಕೆಆರ್‌ನ ಅತೀ ಹಿರಿಯ ಆಟಗಾರನಿಗೆ ಐಪಿಎಲ್ ಆಡಲು ಅವಕಾಶವೇ ಇಲ್ಲ!

ಈ ದಾಖಲೆ ಮತ್ಯಾರದ್ದೂ ಅಲ್ಲ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆ. ಏಕದಿನ ಕ್ರಿಕೆಟ್‌ನಲ್ಲಿ ಭಾರತದ ನೆಲದಲ್ಲಿ ಅತಿ ಹೆಚ್ಚಿನ ಶತಕ ಸಿಡಿಸಿದ ದಾಖಲೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಈ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿಗೆ ಒಂದು ಶತಕದ ಅವಶ್ಯಕತೆಯಿದೆ.

ದಾಖಲೆ ಸರಿಗಟ್ಟಲು ಬೇಕು ಒಂದೇ ಶತಕ:

ದಾಖಲೆ ಸರಿಗಟ್ಟಲು ಬೇಕು ಒಂದೇ ಶತಕ:

ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 51 ಶತಕ ದಾಖಲಿಸಿದ್ದಾರೆ. ಇದರಲ್ಲಿ ದಾಖಲೆಯ 20 ಶತಕ ತವರು ನೆಲ ಭಾರತದಲ್ಲಿ ಮೂಡಿಬಂದಿದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ದಾಖಲೆಗಿಂತ ಒಂದೇ ಹೆಜ್ಜೆ ಹಿಂದಿದ್ದಾರೆ. 19 ಶತಕ ದಾಖಲಿಸಿರುವ ವಿರಾಟ್ ಕೊಹ್ಲಿ ಒಂದು ಶತಕ ದಾಖಲಿಸಿದರೆ ಸಚಿಮ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಬಿಸಿಸಿಐ ಅವಾರ್ಡ್ಸ್ 2018-19: ವಿಜೇತ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿ

ವಿರಾಟ್ ಕೊಹ್ಲಿಗಿದೆ ಮೂರು ಅವಕಾಶ:

ವಿರಾಟ್ ಕೊಹ್ಲಿಗಿದೆ ಮೂರು ಅವಕಾಶ:

ಸಚಿನ್ ತೆಂಡೂಲ್ಕರ್ ನಿರ್ಮಿಸಿದ ಈ ದಾಖಲೆಯನ್ನು ಸರಿಗಟ್ಟಲು ಮತ್ತು ಮುರಿಯಲು ಕೊಹ್ಲಿಗೆ ಮೂರು ಅವಕಾಶಗಳಿದೆ. ಸರಣಿಯಲ್ಲಿ ಮೂರು ಪಂದ್ಯಗಳು ಇರುವುದರಿಂದ ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟುವುದು ಬಹುತೇಕ ಖಚಿತ. ಎರಡು ಶತಕ ಕೊಹ್ಲಿ ಬ್ಯಾಟ್‌ನಿಂದ ಬಂದರೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮೀರಿ ನಿಲ್ಲಲಿದ್ದಾರೆ.

ಸಚಿನ್ ಸಾರ್ವಕಾಲಿಕ ದಾಖಲೆಗೆ ಹತ್ತಿರವಾಗುತ್ತಿದ್ದಾರೆ ಕೊಹ್ಲಿ

ಸಚಿನ್ ಸಾರ್ವಕಾಲಿಕ ದಾಖಲೆಗೆ ಹತ್ತಿರವಾಗುತ್ತಿದ್ದಾರೆ ಕೊಹ್ಲಿ

ಸಚಿನ್ ತೆಂಡೂಲ್ಕರ್ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನದೇ ಮೈಲುಗಲ್ಲನ್ನು ನೆಟ್ಟಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 51 ಶತಕ ಸಿಡಿಸಿದ್ದಾರೆ. ಸದ್ಯ ಈ ಶತಕದ ದಾಖಲೆಯ ಹಾದಿಯಲ್ಲಿ ವಿರಾಟ್ ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ. ಸದ್ಯ 43 ಶತಕ ಸಿಡಿಸಿರುವ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯ ಸನಿಹಕ್ಕೆ ಬಂದಿದ್ದಾರೆ. ತೆಂಡೂಲ್ಕರ್ ದಾಖಲೆ ಮುರಿಯಲು 9 ಶತಕದ ಅಗತ್ಯವಿದೆ.

ಟಿ20 ಸರಣಿಯಲ್ಲಿ ದಾಖಲೆ ಮಾಡಿದ್ದ ಕೊಹ್ಲಿ;

ಟಿ20 ಸರಣಿಯಲ್ಲಿ ದಾಖಲೆ ಮಾಡಿದ್ದ ಕೊಹ್ಲಿ;

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇತ್ತೀಚೆಗೆ ನಡೆದ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮಹತ್ವದ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದರು. ನಾಯಕನಾಗಿ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 11,000 ರನ್‌ಗಳಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದರು.

Story first published: Monday, January 13, 2020, 19:32 [IST]
Other articles published on Jan 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X