ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದ ನಾಯಕ ವಿರಾಟ್ ಕೊಹ್ಲಿ

Virat Kohli shares emotional post after completing 11 years in international cricket

ಆ್ಯಂಟಿಗುವಾ, ಆಗಸ್ಟ್ 19: ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿ ಆಗಸ್ಟ್ 18ರ ಭಾನುವಾರಕ್ಕೆ 11 ವರ್ಷಗಳಾಗಿವೆ. ತನ್ನ ವೃತ್ತಿ ಬದುಕಿನ ಈ ವಿಶೇಷ ದಿನವನ್ನು ಸ್ಮರಿಸಿಕೊಂಡಿರುವ ಕೊಹ್ಲಿ, ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶ ಬರೆದುಕೊಂಡಿದ್ದಾರೆ.

ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!ಭಾರತ vs ವಿಂಡೀಸ್: ಭಾರತ ತಂಡಕ್ಕೆ ಭದ್ರತಾ ಬೆದರಿಕೆ, ಪಿಸಿಬಿ ಎಚ್ಚರಿಕೆ!

ಗುಂಡು-ಗುಂಡಗಿನ ಚಿರ ಯುವಕ ಕೊಹ್ಲಿ 20೦8ರ ಆಗಸ್ಟ್ 18ರಂದು ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಬೆಳೆಯುತ್ತಾ ಸಾಗಿದ ಕೊಹ್ಲಿ ಸದ್ಯ ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವುದಲ್ಲದೆ, ಟೆಸ್ಟ್ ಮತ್ತು ಏಕದಿನದಲ್ಲಿ ವಿಶ್ವ ನಂ.1 ಸ್ಥಾನದಲ್ಲೂ ಇದ್ದಾರೆ.

ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!ಸ್ಫೋಟಕ ಬ್ಯಾಟ್ಸ್ಮನ್ ಶಹಝಾದ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅಮಾನತು!

ಆಗಸ್ಟ್ 19ರಂದು ಟ್ವೀಟ್‌ ಮಾಡಿರುವ ಕೊಹ್ಲಿ, '11 ವರ್ಷಗಳ ಹಿಂದೆ ಇದೇ ದಿನ ನಾನು ಹದಿಹರೆಯದ ಹುಡುಗನಾಗಿ ಕ್ರಿಕೆಟ್ ಪಯಣ ಆರಂಭಿಸಿದೆ. ದೇವರು ನನ್ನನ್ನು ಈ ಮಟ್ಟಿಗೆ ಆಶೀರ್ವಾದಿಸುತ್ತಾನೆ ಅಂತ ಕನಸು ಕಂಡಿರಲಿಲ್ಲ. ನಿಮಗೂ ನಿಮ್ಮ ಕನಸನ್ನು ಹಿಂಬಾಲಿಸುವ ಶಕ್ತಿ ಲಭಿಸಲಿ. ಯಾವಾಗಲೂ ಒಳ್ಳೆಯ ಹಾದಿಯಲ್ಲೇ ಸಾಗಿ' ಎಂದು ಸಾಲುಗಳನ್ನು ಬರೆದುಕೊಂಡಿದ್ದಾರೆ.

ಅಂಡರ್ 19 ಕ್ರಿಕೆಟ್‌ ಬಳಿಕ, ಕೊಹ್ಲಿ ಶ್ರೀಲಂಕಾ ವಿರುದ್ಧ ಏಕದಿನಕ್ಕೆ ಪಾದಾರ್ಪಣೆ ಮಾಡಿದರು ಅಂದೆವಲ್ಲ?, ಆರಂಭದಲ್ಲಿ ಕೊಹ್ಲಿ ಭರ್ಜರಿ ಪ್ರದರ್ಶನ ತೋರಿರಲಿಲ್ಲ. ಆ ಪಂದ್ಯದಲ್ಲಿ ವಿರಾಟ್ ಕೇವಲ 12 ರನ್ ಬಾರಿಸಿದ್ದರು. ಕೊಹ್ಲಿ ಮೊದಲ ಶತಕ ಗಳಿಸಿದ್ದು 2009ರಲ್ಲಿ. ಆದರೆ ಈಗ ಕೊಹ್ಲಿ ಏಕದಿನದಿನದಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ 2ನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಪಾಂಡ್ಯ ಬ್ರದರ್ಸ್‌ ಖರೀದಿಸಿರುವ ಹೊಸ ಕಾರಿನ ಬೆಲೆಯೆಷ್ಟೂ ಗೊತ್ತಾ?ಪಾಂಡ್ಯ ಬ್ರದರ್ಸ್‌ ಖರೀದಿಸಿರುವ ಹೊಸ ಕಾರಿನ ಬೆಲೆಯೆಷ್ಟೂ ಗೊತ್ತಾ?

ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸಿದರು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದರೆ, ಕೊಹ್ಲಿ 43 ಶತಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ಪ್ರಸಾದಲ್ಲಿರುವ ಭಾರತ, 3 ದಿನಗಳ ಅಭ್ಯಾಸ ಪಂದ್ಯವನ್ನಾಡುತ್ತಿದೆ. ಮೊದಲ ಟೆಸ್ಟ್ ಪಂದ್ಯ ಆಗಸ್ಟ್ 22ರಂದು ಆರಂಭಗೊಳ್ಳಲಿದೆ.

Story first published: Monday, August 19, 2019, 13:19 [IST]
Other articles published on Aug 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X