ಯುವಕರಿದ್ದಾಗಿನ ಅನುಭವಗಳನ್ನು ಕೊಹ್ಲಿ ಹಂಚಿಕೊಳ್ಳುತ್ತಿರುತ್ತಾರೆ: ಗಿಲ್

Virat Kohliಯ ಬಳಿ ಎಲ್ಲಾ ಕಷ್ಟ ಹಂಚಿಕೊಳ್ಳುತ್ತೇನೆ ಎಂದ Gill | Oneindia Kannada

ನವದೆಹಲಿ: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಆಟ ತಂಡದ ಇತರ ಆಟಗಾರರಿಗೂ ಪಾಠವಾಗುತ್ತಿದೆ. ಕೊಹ್ಲಿ ತನ್ನಲ್ಲಿ ನಿರ್ಭಿತಿಯ ಆಟವಾಡಲು ಹೇಳಿದ್ದಾರೆ ಎಂದು ಭಾರತದ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಹೇಳಿಕೊಂಡಿದ್ದಾರೆ.

ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!ನ್ಯೂಜಿಲೆಂಡ್‌ನ ಕ್ರಿಕೆಟ್ ಪೇಜ್‌ನಲ್ಲಿ ಭಾರತಕ್ಕೆ ಅವಮಾನ, ಪೋಸ್ಟ್‌ಗೆ ಕಿವೀಸ್ ಕ್ರಿಕೆಟಿಗರಿಂದ ಲೈಕ್ಸ್!

'ವಿರಾಟ್ ಕೊಹ್ಲಿ ನಮ್ಮಲ್ಲಿ ನಮ್ಮದೇ ಶೈಲಿಯ ನಿರ್ಭೀತಿಯ ಆಟವಾಡಲು ಹೇಳುತ್ತಿರುತ್ತಾರೆ. ನಾವು ನಮ್ಮತನವನ್ನು ಉಳಿಸಿಕೊಂಡೇ ಆಟವಾಡಲು ಅವರು ಸಲಹೆ ನೀಡುತ್ತಿರುತ್ತಾರೆ. ಅವರು ಯಾವಾಗಲೂ ನಮಗೆ ಸ್ಫೂರ್ತಿ ತುಂಬುತ್ತಿರುತ್ತಾರೆ. ಮನಸ್ಥಿತಿಯ ಬಗ್ಗೆ ಕೊಹ್ಲಿ ನಮ್ಮಲ್ಲಿ ಮಾತನಾಡುತ್ತಿರುತ್ತಾರೆ,' ಎಂದು ಶುಬ್ಮನ್ ಗಿಲ್ ಹೇಳಿದ್ದಾರೆ.

'ನನ್ನ ಮನಸ್ಥಿತಿ ಯಾವಾಗೆಲ್ಲ ಸರಿಯಿಲ್ಲ ಎಂದು ನನಗೆ ಅನ್ನಿಸುತ್ತದೆಯೋ ಆಗೆಲ್ಲಾ ನಾನು ಕೊಹ್ಲಿ ಬಳಿಗೆ ಹೋಗಿ ಆತನೊಂದಿಗೆ ಮಾತನಾಡುತ್ತೇನೆ. ಆತ ನನಗೆ ಸ್ಫೂರ್ತಿ ತುಂಬುತ್ತಾರೆ. ಅವರು ಯುವಕರಿದ್ದಾಗಿನ ಅನುಭವಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ,' ಎಂದು ಇಂಡಿಯಾ ಟಿವಿ ಜೊತೆ ಮಾತನಾಡಿದ ಗಿಲ್ ಹೇಳಿದ್ದಾರೆ.

ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!ಪುರುಷ-ಮಹಿಳೆಯರ ಸೇರಿಸಿದ ಭಾರತದ ಅತ್ಯುತ್ತಮ ಟಿ20 XI ಹೇಗಿದೆ ನೋಡಿ!

ಮೈದಾನದಲ್ಲಿರುವಾಗ ಕೊಹ್ಲಿ ಹೆಚ್ಚಿನಸಾರಿ ಆಕ್ರಮಣಕಾರಿ ಮನೋಭಾವ ತೋರುತ್ತಾರೆ. ಹಿಂದೆ ವೇಗಿ ಮೊಹಮ್ಮದ್ ಶಮಿ ಕೂಡ ಮೈದಾನದಲ್ಲಿ ಕೊಹ್ಲಿಯ ಹಾವಭಾವ ವೇಗಿ ಬೌಲರ್‌ನಂತೆ ಇರುತ್ತದೆ ಎಂದಿದ್ದರು. ಇದೇ ಯುವಕರು ಮೈದಾನದಲ್ಲಿ ಸ್ಫೂರ್ತಿದಾಯಕವಾಗಿ, ನಿರ್ಭೀತರಾಗಿ ಇರಬೇಕು ಎಂದು ಕೊಹ್ಲಿ ಸಲಹೆ ನೀಡುತ್ತಾರೆ ಎಂಬರ್ಥದಲ್ಲಿ ಗಿಲ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, May 24, 2021, 23:59 [IST]
Other articles published on May 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X