'ಎಲ್ಲದಕ್ಕಿಂತ ಮೇಲು ನಿಷ್ಠೆ' ಎನ್ನುತ್ತಾ ಆರ್‌ಸಿಬಿ ಜೊತೆಗಿನ ಪಯಣ ಮೆಲುಕು ಹಾಕಿದ ಕೊಹ್ಲಿ

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ಗೆ ಉತ್ಸಾಹದಿಂದ ಕಾಯುತ್ತಿರುವುದು ಅವರ ಟ್ವೀಟ್ ಮೂಲಕ ಬಹಿರಂಗವಾಗಿದೆ. 59 ಸೆಕೆಂಡ್‌ಗಳಿರುವ ವಿಡಿಯೋ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ಆರ್‌ಸಿಬಿ ಜೊತೆಗಿನ ತನ್ನ 12 ವರ್ಷಗಳ ಪಯಣದ ಕೆಲ ವಿಡಿಯೋ ತುಣುಕುಗಳ ಮೂಲಕ ಸ್ಮರಿಸಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ಕೆಲ ಆಫ್‌ ಫೀಲ್ಡ್ ಕ್ಷಣಗಳ ತುಣುಕುಗಳನ್ನು ಸೇರಿಸಿದ್ದಾರೆ. ಈ ಮೂಲಕ ತಾನು ಆರ್‌ಸಿಬಿ ತಂಡದಲ್ಲಿ ನಡೆದುಬಂದ ಹಾದಿ, ತಂಡದ ಸಹ ಆಟಗಾರು ಫ್ರಾಂಚೈಸಿ ಹಾಗೂ ಅಭಿಮಾನಿಗಳ ಜೊತೆಗಿನ ಭಾವನಾತ್ಮಕ ಸಂಬಂಧವನ್ನು ಚುಟುಕಾಗಿ ಹಂಚಿಕೊಂಡಿದ್ದಾರೆ.

ಐಪಿಎಲ್ 2020: ಕಪ್‌ ಗೆಲ್ಲೋದಕ್ಕೆ ಯುಎಇಗೆ ಹಾರಲು ಸಜ್ಜಾಗಿದೆ ಆರ್‌ಸಿಬಿ

ನಿಷ್ಠೆ ಎಲ್ಲದಕ್ಕಿಂತ ಮಿಗಿಲು

ನಿಷ್ಠೆ ಎಲ್ಲದಕ್ಕಿಂತ ಮಿಗಿಲು

ಈ ಪುಟ್ಟ ವಿಡೀಯೋಗೆ ಬರೆದ ಭಾವನಾತ್ಮಕ ಬರದ ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಪ್ತವೆನಿಸಿದೆ. "ನಿಷ್ಠೆ ಎಲ್ಲದಕ್ಕಿಂತ ಮಿಗಿಲು, ಬರುವ ಯಾವುದೇ ಕ್ಷಣಗಳಿಗೂ ಕಾಯಲು ಸಾಧ್ಯವಿಲ್ಲ" ಎಂದು ಬರೆದುಕೊಂಡಿದ್ದಾರೆ ವಿರಾಟ್ ಕೊಹ್ಲಿ. ಈ ಮೂಲಕ ತಂಡದಿಂದಿಗಿನ ಭಾವನಾತ್ಮಕ ನಂಟು ಹಾಗೂ ಮುಂದಿನ ಟೂರ್ನಿಯ ಬಗೆಗಿನ ಕಾತುರತೆಯನ್ನು ಎರಡೇ ವಾಕ್ಯಗಳಲ್ಲಿ ವ್ಯಕ್ತಪಡಿಸಿದ್ದಾರೆ.

ಕಳೆದ 3 ಆವೃತ್ತಿಯಲ್ಲಿ ಕಳಪೆ

ಕಳೆದ 3 ಆವೃತ್ತಿಯಲ್ಲಿ ಕಳಪೆ

2016ರಲ್ಲಿ ಫೈನಲ್ ಪ್ರವೇಶ ಪಡೆದುಕೊಂಡಿದ್ದ ಆರ್‌ಸಿಬಿ ಬಳಿಕ ತನ್ನ ಅದ್ಭುತ ಪ್ರದರ್ಶನ ನೀಡಲು ವಿಫಲವಾಗಿತ್ತು. ಮುಂದಿನ ಮೂರು ಆವೃತ್ತಿಗಳಲ್ಲಿ ವಿರಾಟ್ ಪಡೆ 8, 6 ಹಾಗೂ ಕಳೆದ ವರ್ಷದ ಆವೃತ್ತಿಯಲ್ಲಿ 8ನೇ ಸ್ಥಾನದೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದೊಂದಿಗೆ ಮತ್ತೊಮ್ಮೆ ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

ಆರ್‌ಸಿಬಿ ತಂಡ ತೊರೆಯಲ್ಲ

ಆರ್‌ಸಿಬಿ ತಂಡ ತೊರೆಯಲ್ಲ

ಕೆಲವೇ ವಾರಗಳ ಹಿಂದೆ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡ ತೊರೆಯುವ ಬಗ್ಗೆ ತಾನು ಯಾವತ್ತೂ ಚಿಂತನೆಯನ್ನೇ ನಡೆಸಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ಜೊತೆಗೆ ತಂಡಕ್ಕಾಗಿ ಟ್ರೋಫಿಯನ್ನು ಗೆಲ್ಲಿಸಿಕೊಡುವ ಬಗ್ಗೆ ತನ್ನ ಆಶಯವನ್ನೂ ತಿಳಿಸಿದ್ದರು. ಸಹ ಆಟಗಾರ ಎಬಿ ಡಿವಿಯರ್ಸ್ ಜೊತೆಗಿನ ಸಂವಾದದಲ್ಲಿ ಕೊಹ್ಲಿ ಅವರೊಂದಿನ 9 ವರ್ಷಗಳ ನಂಟನ್ನು ಹಂಚಿಕೊಂಡಿದ್ದರು.

ಅತಿವಾಸ್ತವದ ಪಯಣ

ಅತಿವಾಸ್ತವದ ಪಯಣ

ನಾನು ಆರ್‌ಸಿಬಿ ತಂಡಗೊಂದಿಗೆ 12 ವರ್ಷಗಳನ್ನು ಕಳೆದಿದ್ದೇನೆ. ಇದೊಂದು ಅದ್ಭುತವಾದ ಹಾಗೂ ಅತಿವಾಸ್ತವದ ಪಯಣ.ನಾವೆಲ್ಲ ಜೊತೆಯಾಗಿ ಆರ್‌ಸಿಬಿಯೊಂದಿಗೆ ಅಂತಿಮ ಗುರಿಯನ್ನು ತಲುಪಬೇಕಿದೆ. ಆ ಅಂತಿಮ ಗುರಿಗಾಗಿ ನಾವು ಮೂರು ಬಾರಿ ಅತ್ಯಂತ ಸಮೀಪಕ್ಕೆ ಬಂದಿದ್ದೆವು. ಆದರೆ ಅದು ಸಾಧ್ಯವಾಗಿರಲಿಲ್ಲ. ಆದರೆ ಫ್ರಾಂಚೈಸಿ ನನಗೆ ತೊರಿದ ಪ್ರೀತಿ ಹಾಗೂ ಕಾಳಜಿಯಿಂದಾಗಿ ನಾನು ಯಾವುದೇ ಕಾರಣಕ್ಕೂ ಆರ್‌ಸಿಬಿ ತೊರೆಯುವ ಬಗ್ಗೆ ಚಿಂತನೆಯನ್ನೇ ನಡೆಸಿಲ್ಲ ಎಂದು ವಿರಾಟ್ ಹೇಳಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 10, 2020, 14:36 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X