ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಜನ್ಮ ದಿನದಂದು ಮುದ್ದಾದ ಅಕ್ಷರಗಳ ಸ್ಫೂರ್ತಿಯ ಸಂದೇಶ ಬರೆದ ಕೊಹ್ಲಿ

Virat Kohli shares inspirational tweet on his 31st birthday

ನವದೆಹಲಿ, ನವೆಂಬರ್ 5: ಕೌಲಾಲಂಪುರ್‌ನಲ್ಲಿ ನಡೆದಿದ್ದ 2008ರ ಅಂಡರ್ 19 ವಿಶ್ವಕಪ್‌ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ರೋಚಕ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ಗಳಿಸಿತ್ತು. ಕೊಹ್ಲಿ ಆ ಹೊತ್ತಿಗಾಗಲೇ ಜನ ಮೆಚ್ಚುಗೆ ಗಳಿಸಲಾರಂಭಿಸಿದ್ದರು.

ರಾಷ್ಟ್ರೀಯ ತಂಡಕ್ಕೆ ಉತ್ತಮ ಆಯ್ಕೆದಾರರ ಅಗತ್ಯ ಖಂಡಿತಾ ಇದೆ: ಯುವರಾಜ್ರಾಷ್ಟ್ರೀಯ ತಂಡಕ್ಕೆ ಉತ್ತಮ ಆಯ್ಕೆದಾರರ ಅಗತ್ಯ ಖಂಡಿತಾ ಇದೆ: ಯುವರಾಜ್

ಆವತ್ತು ವಿರಾಟ್ ಕೊಹ್ಲಿ ತಂಡದಲ್ಲಿದ್ದವರಲ್ಲಿ ದೇಸಿ ತಂಡಕ್ಕೆ ಶಕ್ತಿ ತುಂಬುವ ಭರವಸೆ ನೀಡಿ, ಆ ಭರವಸೆ ಉಳಿಸಿಕೊಟ್ಟವರು ಕೆಲವೇ ಕೆಲವು ಮಂದಿ. ಆಗ ತಂಡದ ಮುಂದಾಳತ್ವ ವಹಿಸಿದ್ದ ಕೊಹ್ಲಿ ಈಗ ಭಾರತ ರಾಷ್ಟ್ರೀಯ ತಂಡದ ನಾಯಕರಾಗಿದ್ದಾರೆ. ಅದ್ಭುತ ಪ್ರತಿಭೆಯಿಂದ ವಿಶ್ವದ ಗಮನವೂ ಸೆಳೆಯುತ್ತಿದ್ದಾರೆ, ಬೆಳೆಯುತ್ತಲೇಯಿದ್ದಾರೆ.

ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್

ನವೆಂಬರ್ 5ರ ಈ ದಿನ ಕಿಂಗ್ ಕೊಹ್ಲಿ 31ನೇ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ. ಈ ವಿಶೇಷ ದಿನವನ್ನು ಕೊಹ್ಲಿ ಸ್ಫೂರ್ತಿಯ ಪತ್ರವೊಂದರ ಮೂಲಕ ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ತಾನು 15ರ ಹರೆಯದವರಾಗಿದ್ದಿದ್ದನ್ನು ಸ್ಮರಿಸಿಕೊಂಡು ಕೊಹ್ಲಿ ತನಗೆ ಅಥವಾ ತನ್ನಂತ ಎಳೆಯರಿಗಾಗಿ ಸ್ಫೂರ್ತಿಯ ಪತ್ರ ಬರೆದಿದ್ದಾರೆ.

ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!ಶಾಹೀನ್ ಅಫ್ರಿದಿ ವಿರುದ್ಧ ವಿಡಿಯೋ ಕಾಲ್‌ನಲ್ಲಿ ಹಸ್ತಮೈಥುನ ಮಾಡಿದ ಆರೋಪ!

ಕೊಹ್ಲಿಯ ಮುದ್ದಾದ ಅಕ್ಷಗಳಿರುವ ಈ ಪತ್ರದಲ್ಲಿ ವಿರಾಟ್ ತನ್ನ ಬದುಕಿನ ಪಯಣದಲ್ಲಿ ಕಲಿತ ಚಂದ ಪಾಠಗಳನ್ನು ನೆನಪಿಸಿಕೊಂಡಿದ್ದಾರೆ. ಪಾಸಿಟಿವ್ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಬದುಕಿನ ಯಶಸ್ವಿ ಪಯಣದ ಕೆಲ ಚಂದದ ಗುಟ್ಟುಗಳನ್ನು ಬಿಚ್ಚಿಟ್ಟಿದ್ದಾರೆ. ಅಂದ್ಹಾಗೆ ಸೂಪರ್ 'ವಿ' ಅನಿಮೇಟೆಡ್ ಸರಣಿಯಲ್ಲಿ ಬರುವ ತನ್ನದೇ ಪಾತ್ರಧಾರಿ, ಎಳೆಯ ಕೊಹ್ಲಿಯನ್ನು ಊಹಿಸಿ ಕೊಹ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಭಾರತ vs ಬಾಂಗ್ಲಾ: ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!ಭಾರತ vs ಬಾಂಗ್ಲಾ: ವಿರಾಟ್ ಕೊಹ್ಲಿ ವಿಶ್ವದಾಖಲೆ ಮುರಿದ ರೋಹಿತ್ ಶರ್ಮಾ!

'ನನ್ನ ಪ್ರಯಾಣ ಮತ್ತು ಜೀವನದ ಪಾಠಗಳನ್ನು 15 ವರ್ಷದ ನನಗೇ ವಿವರಿಸಿದ್ದೇನೆ. ನನಗೆ ತಿಳಿದಮಟ್ಟಿಗೆ ಇದನ್ನು ಬರೆದಿದ್ದೇನೆ, ಸಾಧ್ಯವಾದರೆ ಓದಿ,' ಎಂದು ಕೊಹ್ಲಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪತ್ರದ ಚಿತ್ರದೊಂದಿಗೆ ಬರೆದುಕೊಂಡಿದ್ದಾರೆ. ಅವಕಾಶಗಳನ್ನು ಬಳಸಿಕೊಳ್ಳೋದು, ಅಹಂ ಹತ್ತಿಕ್ಕಿಕೊಳ್ಳೋದು, ಬದುಕಿನ ಸವಾಲುಗಳು ಹೀಗೆಲ್ಲ ಚಂದದ ವಿಚಾರಗಳನ್ನು ಮುಂದಿಟ್ಟು ಕೊಹ್ಲಿ ಬರೆದಿರುವ ಪತ್ರ ಬದುಕಿಗೆ ಎಂಥದ್ದೋ ಸ್ಫೂರ್ತಿಯ ಪಿಸುಗುಟ್ಟುವಂತಿದೆ.

Story first published: Tuesday, November 5, 2019, 11:43 [IST]
Other articles published on Nov 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X