ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

India vs Sri Lanka: ರಿಕಿ ಪಾಂಟಿಂಗ್ ವಿಶ್ವದಾಖಲೆ ಮುರಿದ ವಿರಾಟ್ ಕೊಹ್ಲಿ!

Virat Kohli shatters Ricky Ponting’s world record in 3rd T20I against Sri Lanka

ಪುಣೆ, ಜನವರಿ 11: ಮೈದಾನಕ್ಕಿಳಿದ ಪ್ರತೀ ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ನಿರ್ಮಿಸುತ್ತಿರುವ ಟೀಮ್ ಇಂಡಿಯಾ ನಾಯಕ, ರನ್ ಮೆಷೀನ್ ವಿರಾಟ್ ಕೊಹ್ಲಿ ಶುಕ್ರವಾರ (ಜನವರಿ 10) ನಡೆದ ಭಾರತ-ಶ್ರೀಲಂಕಾ 3ನೇ ಟಿ20 ಪಂದ್ಯದಲ್ಲೂ ಅಪರೂಪದ ದಾಖಲೆ ಬರೆದಿದ್ದಾರೆ.

'ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!''ದೇವರುಗಳು ಸೋತಾಗ ಗೋಡೆಯ ಹಿಂದೆ ಅಡಗಿ ಕುಳಿತುಕೊಳ್ಳುತ್ತಾರೆ!'

ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಕೊಹ್ಲಿ, ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದಿದ್ದಾರೆ.

ಮಾಜಿ ನಾಯಕ ಎಂಎಸ್ ಧೋನಿಯ ಏಕದಿನ ವೃತ್ತಿ ಬದುಕು ಕೊನೆ?!ಮಾಜಿ ನಾಯಕ ಎಂಎಸ್ ಧೋನಿಯ ಏಕದಿನ ವೃತ್ತಿ ಬದುಕು ಕೊನೆ?!

72ನೇ ಟಿ20ಐ ಇನ್ನಿಂಗ್ಸ್‌ಗಾಗಿ ಶುಕ್ರವಾರ ಮೈದಾನಕ್ಕಿಳಿದಿದ್ದ ಕೊಹ್ಲಿ ದಾಖಲೆಗೆ ಕಾರಣರಾದರಲ್ಲದೆ, ಪಂದ್ಯದ ಗೆಲುವಿನೊಂದಿಗೆ ಭಾರತ ಟಿ20 ಸರಣಿಯನ್ನೂ ಜಯಿಸಿತು.

11,000 ಅಂತಾರಾಷ್ಟ್ರೀಯ ರನ್

11,000 ಅಂತಾರಾಷ್ಟ್ರೀಯ ರನ್

ಪುಣೆ ಪಂದ್ಯದಲ್ಲಿ ಕೊಹ್ಲಿ 17 ಎಸೆತಗಳಿಗೆ 26 ರನ್ ಬಾರಿಸಿ ರನ್‌ ಔಟ್ ಆದರು. ಆದರೆ ಅಷ್ಟರಲ್ಲಾಗಲೇ ವಿರಾಟ್ ಹೆಸರಿನಲ್ಲಿ ದಾಖಲೆ ನಿರ್ಮಾಣವಾಗಿತ್ತು. ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ20) 11,000 ರನ್ ಮೈಲಿಗಲ್ಲು ಸ್ಥಾಪಿಸಿದ್ದರು.

ಭಾರತದ 2ನೇ ಕ್ಯಾಪ್ಟನ್

ಭಾರತದ 2ನೇ ಕ್ಯಾಪ್ಟನ್

ಇಂಟರ್ ನ್ಯಾಷನಲ್ ಕ್ರಿಕೆಟ್‌ನಲ್ಲಿ 11,000 ರನ್ ದಾಖಲೆ ಮೊದಲು ನಿರ್ಮಿಸಿದ ಕೀರ್ತಿ ಮಾಜಿ ನಾಯಕ ಎಂಎಸ್ ಧೋನಿಗೆ ಸಲ್ಲುತ್ತದೆ. ಧೋನಿ ಬಳಿಕ ಭಾರತ ಪರ ಈ ದಾಖಲೆ ಮಾಡಿದ ಎರಡನೇ ನಾಯಕ ವಿರಾಟ್ ಕೊಹ್ಲಿ. ಒಟ್ಟಾರೆ ವಿಶ್ವದಲ್ಲಿ ಈ ಸಾಧನೆ ಮಾಡಿದ 6ನೇ ಕ್ಯಾಪ್ಟನ್ ವಿರಾಟ್.

ವಿಶ್ವದ ಆರನೇ ನಾಯಕ

ವಿಶ್ವದ ಆರನೇ ನಾಯಕ

ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕನಾಗಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 11,000 ರನ್ ಪೂರೈಸಿದ ವಿಶ್ವದ ಆರನೇ ಆಟಗಾರನಾಗಿ ವಿರಾಟ್ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಇದೇ ದಾಖಲೆಗಾಗಿ ಕೊಹ್ಲಿ, ಆಸ್ಟ್ರೇಲಿಯಾ ನಾಯಕ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.

ಪಾಂಟಿಂಗ್ ದಾಖಲೆ ಬದಿಗೆ

ಪಾಂಟಿಂಗ್ ದಾಖಲೆ ಬದಿಗೆ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ವೇಗದಲ್ಲಿ 11,000 ರನ್ ಬಾರಿಸಿದ ನಾಯಕರ ಸಾಲಿನಲ್ಲಿ ಕೊಹ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಕೊಹ್ಲಿ 196 ಇನ್ನಿಂಗ್ಸ್‌ಗಳಲ್ಲಿ ಈ ದಾಖಲೆ ನಿರ್ಮಿಸಿದ್ದರೆ, ಆಸೀಸ್‌ನ ರಿಕಿ ಪಾಂಟಿಂಗ್ ಇದೇ ಸಾಧನೆಗಾಗಿ 252 ಇನ್ನಿಂಗ್ಸ್‌ ಬಳಸಿಕೊಂಡಿದ್ದರು. ಇನ್ನು ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ, 264 ಇನ್ನಿಂಗ್ಸ್‌), ಅಲನ್ ಬಾರ್ಡರ್ (ಆಸ್ಟ್ರೇಲಿಯಾ, 316 ಇನ್ನಿಂಗ್ಸ್‌), ಎಂಎಸ್ ಧೋನಿ (324 ಇನ್ನಿಂಗ್ಸ್) ಅನಂತರದ ಸ್ಥಾನಗಳಲ್ಲಿದ್ದಾರೆ.

Story first published: Saturday, January 11, 2020, 15:56 [IST]
Other articles published on Jan 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X