ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿಗೆ ವಿಶ್ರಾಂತಿ ನೀಡಿ ಎಂದ ಇಂಗ್ಲೆಂಡ್ ಮಾಜಿ ನಾಯಕ ಮೈಕೆಲ್ ವಾಘನ್

ಕೊಹ್ಲಿಯನ್ನ ಆಡಿಸದೇ ಇದ್ದರೆ ಒಳ್ಳೆಯದು..!
Virat Kohli should be given some time off, says Michael Vaughan

ಬೆಂಗಳೂರು, ಏಪ್ರಿಲ್ 7: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ ಸ್ವಲ್ಪ ಕಾಲ ವಿಶ್ರಾಂತಿ ನೀಡಿ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಹೇಳಿದ್ದಾರೆ. ಐಪಿಎಲ್‌ನಲ್ಲಿ ಆರ್‌ಸಿಬಿ ಸತತ 6 ಸೋಲು ಅನುಭವಿಸಿದ ಬಳಿಕ ವಾಘನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಆತ ಇನ್ನೂ ಕಲಿಯೋದು ಸಾಕಷ್ಟಿದೆ: ಕೊಹ್ಲಿ ಬಗ್ಗೆ ಮತ್ತೆ 'ಗಂಭೀರ' ಟೀಕೆ!ಆತ ಇನ್ನೂ ಕಲಿಯೋದು ಸಾಕಷ್ಟಿದೆ: ಕೊಹ್ಲಿ ಬಗ್ಗೆ ಮತ್ತೆ 'ಗಂಭೀರ' ಟೀಕೆ!

'ಭಾರತ ಒಂದುವೇಳೆ ಬುದ್ಧಿ ಉಪಯೋಗಿಸುವುದಾದರೆ ವಿಶ್ವಕಪ್ ಕಾರಣಕ್ಕಾಗಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಬೇಕು. ಪ್ರತಿಷ್ಠಿತ ಟೂರ್ನಿ ಆರಂಭಕ್ಕೂ ಮುನ್ನ ಆತನಿಗೆ (ಕೊಹ್ಲಿ) ಐಪಿಎಲ್‌ನಿಂದ ಕೊಂಚ ಬಿಡುವು ನೀಡುವುದೊಳಿತು' ಎಂದು ವಾಘನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಭಾನುವಾರ (ಏಪ್ರಿಲ್ 7) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 20ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 4 ವಿಕೆಟ್ ಸೋಲನುಭವಿಸಿತು. ಇದು ಆರ್‌ಸಿಬಿ ಟೂರ್ನಿಯಲ್ಲಿ ಅನುಭವಿಸಿದ ಸತತ 6ನೇ ಸೋಲು.

ಪಾಕಿಸ್ತಾನದ ಸಂಭಾವ್ಯ ತಂಡದಿಂದ ಉಮರ್, ವಹಾಬ್ ಔಟ್ಪಾಕಿಸ್ತಾನದ ಸಂಭಾವ್ಯ ತಂಡದಿಂದ ಉಮರ್, ವಹಾಬ್ ಔಟ್

ಐಪಿಎಲ್‌ನಲ್ಲಿ ಸತತ ಸೋಲಿನಿಂದಾಗಿ ಬೆಂಗಳೂರು ತಂಡದ ನಾಯಕ ಕೊಹ್ಲಿ ಸಹಜವಾಗಿಯೇ ಕುಗ್ಗಿದ್ದಾರೆ, ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನು ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವುದು ಕಷ್ಟ ಸಾಧ್ಯ ಎಂಬಂತಿದೆ. ಇನ್ನುಳಿದ ಪಂದ್ಯಗಳಲ್ಲೂ ಆಡಿದರೆ, ಕೊಹ್ಲಿ ತಂಡದ ಪರ ವ್ಯರ್ಥ ಶ್ರಮ ವಹಿಸಬೇಕಾಗಬಹುದು. ಇದು ಮುಂಬರಲಿರುವ ವಿಶ್ವಕಪ್‌ನಲ್ಲಿ ಭಾರತದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂಬ ಕಳಕಳಿ ವಾಘನ್ ಮಾತಿನಲ್ಲಿ ವ್ಯಕ್ತವಾಗಿದೆ.

Story first published: Sunday, April 7, 2019, 22:10 [IST]
Other articles published on Apr 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X