ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಓಪನಿಂಗ್ ಬಂದ್ರೆ, ಆರೆಂಜ್ ಕ್ಯಾಪ್‌ಗೆ ಕಂಟಕ ಗ್ಯಾರೆಂಟಿ: ರವಿಶಾಸ್ತ್ರಿ

Virat kohli

ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ವಿರಾಟ್ ಕೊಹ್ಲಿ ಕುರಿತಾಗಿ ತುಂಬಾ ಬೋಲ್ಡ್ ಕಮೆಂಟ್ ಮಾಡಿದ್ದಾರೆ. ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಓಪನಿಂಗ್ ಮಾಡಿದ್ರೆ, ಆರೆಂಜ್ ಕ್ಯಾಪ್‌ಗೆ ಕಂಟಕ ಎದುರಾಗಲಿದ್ದು, ಲೀಡಿಂಗ್‌ ರನ್‌ ಸ್ಕೋರರ್ ಆಗಲಿದ್ದಾರೆ ಎಂದಿದ್ದಾರೆ.

ಕೊಹ್ಲಿ ಆರ್‌ಸಿಬಿ ಪರ ಓಪನಿಂಗ್ ಇಳಿದ್ರೆ, ಆರ್‌ಸಿಬಿ ಸಮತೋಲನದಿಂದ ಕೂಡಿರುತ್ತದೆ. ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯಬೇಕು ಎಂದು ಅಂದುಕೊಳ್ಳುವವರು ಒಮ್ಮೆ 2016ರ ಐಪಿಎಲ್ ಸೀಸನ್ ಅನ್ನು ನೆನಪಿಸಿಕೊಳ್ಳಬೇಕಿದೆ ಎಂದು ಶಾಸ್ತ್ರಿ ಹೇಳಿದ್ದಾರೆ.

2016ರ ಸೀಸನ್‌ನಲ್ಲಿ 973ರನ್ ಸಿಡಿಸಿದ್ದ ಕೊಹ್ಲಿ

2016ರ ಸೀಸನ್‌ನಲ್ಲಿ 973ರನ್ ಸಿಡಿಸಿದ್ದ ಕೊಹ್ಲಿ

2016ರ ಐಪಿಎಲ್ ಸೀಸನ್ ವಿರಾಟ್ ಕೊಹ್ಲಿ ಪಾಲಿಗೆ ಗೋಲ್ಡನ್ ಇಯರ್ ಅಂದ್ರೆ ತಪ್ಪಾಗಲಾರದು. 152.03ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ವಿರಾಟ್‌ ಕೊಹ್ಲಿ 81.08ರ ಬ್ಯಾಟಿಂಗ್‌ ಸರಾಸರಿಯಲ್ಲಿ 973 ರನ್ ಕಲೆಹಾಕಿದ್ದರು. ಇದರಲ್ಲಿ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳು ಒಳಗೊಂಡಿದ್ದವು.

2021ರ ಐಪಿಎಲ್ ಸೀಸನ್‌ನಲ್ಲಿ ಎಡವಿದ ವಿರಾಟ್

2021ರ ಐಪಿಎಲ್ ಸೀಸನ್‌ನಲ್ಲಿ ಎಡವಿದ ವಿರಾಟ್

2021ರಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ದೃಷ್ಟಿಯಿಂದ ವಿರಾಟ್ ಕೊಹ್ಲಿ ಮತ್ತೊಮ್ಮೆ ಆರ್‌ಸಿಬಿ ಪರ ಓಪನಿಂಗ್ ಆಗಿ ಕಣಕ್ಕಿಳಿದರು. ಆದ್ರೆ 15 ಇನ್ನಿಂಗ್ಸ್‌ಗಳಲ್ಲಿ ವಿರಾಟ್ ಗಳಿಸಿದ್ದು ಕೇವಲ 339 ರನ್‌ಗಳು. 28.9ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಒಟ್ಟಾರೆ ಸೀಸನ್‌ನಲ್ಲಿ ಗಳಿಸಿದ್ದು ಕೇವಲ ಮೂರು ಅರ್ಧಶತಕಗಳು.

Dhoni ಆಟ ನೋಡಿ ಕುಣಿದು ಕುಪ್ಪಳಿಸಿದ ಅಭಿಮಾನಿಗಳು | Oneindia Kannada
ವಿರಾಟ್ ಕೊಹ್ಲಿ ಓಪನಿಂಗ್ ಮಾಡಲಿ: ರವಿಶಾಸ್ತ್ರಿ

ವಿರಾಟ್ ಕೊಹ್ಲಿ ಓಪನಿಂಗ್ ಮಾಡಲಿ: ರವಿಶಾಸ್ತ್ರಿ

ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ ಒಮ್ಮೆ ಮಾತ್ರ 2016ರಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದಾರೆ. ಹೀಗಿದ್ದರೂ ಸಹ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಓಪನಿಂಗ್ ಬ್ಯಾಟಿಂಗ್ ಮಾಡಬೇಕು. ಹಾಗೇನಾದ್ರು ಆಗಿದ್ದಲ್ಲಿ ಆರೆಂಜ್‌ ಕ್ಯಾಪ್ ಗೆಲ್ಲುವವರ ಪಟ್ಟಿಯಲ್ಲಿ ವಿರಾಟ್ ಅಗ್ರಸ್ಥಾನದಲ್ಲಿರುತ್ತಾರೆ ಎಂದು ಭಾರತದ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

"ಅವರ ಮಧ್ಯಮ ಕ್ರಮಾಂಕ ಹೇಗಿದೆ ಎಂದು ನನಗೆ ಖಚಿತವಿಲ್ಲ, ಆದರೆ ಅವರು ಉತ್ತಮ ಮಧ್ಯಮ ಕ್ರಮಾಂಕವನ್ನು ಹೊಂದಿದ್ದರೆ, ವಿರಾಟ್ ಓಪನಿಂಗ್‌ ಮಾಡಿದ್ರೆ ಯಾವುದೇ ತೊಂದರೆ ಇಲ್ಲ." ಇದು ತಂಡದ ಸಮತೋಲನವನ್ನು ಅವಲಂಬಿಸಿರುತ್ತದೆ ಎಂದು ಶಾಸ್ತ್ರಿ ಹೇಳಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 3 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದಿದ್ದಾರೆ. ನಾಯಕ ಫಾಫ್ ಡುಪ್ಲೆಸಿಸ್ ಮತ್ತು ಅನುಜ್ ರಾವತ್ ಓಪನಿಂಗ್ ಬ್ಯಾಟಿಂಗ್ ಇಳಿದಿದ್ದಾರೆ.

Story first published: Monday, March 28, 2022, 9:48 [IST]
Other articles published on Mar 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X