ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ನಾಯಕತ್ವದಲ್ಲಿನ ಮೈನಸ್‌ಗಳ ವಿವರಿಸಿದ ಮೊಹಮ್ಮದ್ ಕೈಫ್

Virat Kohli should overcome from some hurdles: Mohammad Kaif

ನವದೆಹಲಿ, ಮೇ 20: ಭಾರತದ ಕ್ರಿಕೆಟ್ ಇತಿಹಾಸದಲ್ಲಿ ವಿರಾಟ್ ಕೊಹ್ಲಿ ಯಶಸ್ವಿ ನಾಯಕರಲ್ಲಿ ಗುರುತಿಸಿಕೊಂಡಿದ್ದಾರೆ. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರಬಲ ಹಕ್ಕು ಸಾಧಿಸುತ್ತಾ ಭಾರತವನ್ನು ಟೆಸ್ಟ್ ಶ್ರೇಯಾಂಕದ ಉತ್ತುಂಗಕ್ಕೆ ಕೊಂಡೊಯ್ದವರು ಕೊಹ್ಲಿ. ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಚೊಚ್ಚಲ ಬಾರಿಗೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು. ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಭಾರತ ವಿಶ್ವದ ಬಲಿಷ್ಠ ತಂಡವಾಗಿ ಗಮನ ಸೆಳೆದಿತ್ತು.

ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!

ಆದರೆ ವಿರಾಟ್ ಕೊಹ್ಲಿ ಬಗ್ಗೆ ಒಂದೆರಡು ಟೀಕೆಗಳೂ ಇವೆ. ಐಸಿಸಿ ಟೂರ್ನಿಗಳಲ್ಲಿ ಕೊಹ್ಲಿ ಯಶಸ್ಸು ಗಿಟ್ಟಿಸಿಕೊಳ್ಳುವುದರಲ್ಲಿ ಕೊರತೆ ಎದುರಿಸುತ್ತಿದ್ದಾರೆ. ಪ್ಲೇಯಿಂಗ್ XI ಅನ್ನು ಕೂಡ ಆಗಾಗ ಬದಲಾಯಿಸುತ್ತಿರುತ್ತಾರೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿದ್ದಿದೆ.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

ಭಾರತದ ಜಾಂಟಿ ರೋಡ್ಸ್ ಖ್ಯಾತಿಯ, ಮಾಜಿ ಆಟಗಾರ ಮೊಹಮ್ಮದ್ ಕೈಫ್, ವಿರಾಟ್ ಕೊಹ್ಲಿಯ ನಾಯಕತ್ವದಲ್ಲಿನ ಮೈನಸ್‌ಗಳ ಬಗ್ಗೆ ವಿವರಿಸಿ ಹೇಳಿದ್ದಾರೆ. ಕೊಹ್ಲಿ ಯಶಸ್ವಿ ನಾಯಕ ಅನ್ನಿಸಲು ಕೆಲ ಸಲಹೆಗಳನ್ನು ನೀಡಿದ್ದಾರೆ.

ಆಟಗಾರರ ಬದಲಾವಣೆಗೆ ವಿಷಾದ

ಆಟಗಾರರ ಬದಲಾವಣೆಗೆ ವಿಷಾದ

ಮೊಹಮ್ಮದ್ ಕೈಫ್ ಕೂಡ ತಂಡದಲ್ಲಿ ಆಗಾಗ ಆಟಗಾರರನ್ನು ಬದಲಾಯಿಸುತ್ತಿರುವ ವಿಚಾರವನ್ನು ಮುಂದಿಟ್ಟುಕೊಂಡು ಮಾತನಾಡಿದ್ದಾರೆ. ಕೊಹ್ಲಿ ಟೀಮ್ ಇಂಡಿಯಾದಲ್ಲಿ ಆಟಗಾರರನ್ನು ಬದಲಾಯಿಸುತ್ತಿರುತ್ತಾರೆ, ರಿಷಭ್ ಪಂತ್ ಅವರನ್ನು ನಿಯಮಿತವಾಗಿ ಆಡಿಸುವ ಬದಲು ಅವರನ್ನು ವಾಟರ್ ಬಾಟಲ್ ಸಾಗಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ಲೇಯರ್ಸ್ ಅನ್ನು ಕಡೆಗಣಿಸಬಾರದು

ಪ್ಲೇಯರ್ಸ್ ಅನ್ನು ಕಡೆಗಣಿಸಬಾರದು

'ಕೊಹ್ಲಿ ಗಮನ ಹರಿಸಬೇಕು, ತನ್ನ ತಂಡದ ಅಯ್ಕೆಗೆ ಬೆಂಬಲ ನೀಡಬೇಕು. ಕೆಲವು ಆಟಗಾರರು ಒಂದೆರಡು ಪಂದ್ಯಗಳಲ್ಲಿ ಫಾರ್ಮ್ ತೋರಿಸದಿದ್ದ ಮಾತ್ರಕೆ ಅವರನ್ನು ಕಡೆಗಣಿಸಬೇಕೆಂದಲ್ಲ. ಬದಲಿಗೆ ಅವರಿಗೆ ಇನ್ನೂ ಕೊಂಚ ಬೆಂಬಲ ನೀಡಬೇಕು. ಆಗ ಆ ಆಟಗಾರನಿಗೆ ಆತ್ಮಸ್ಥೈರ್ಯ ಬರುತ್ತದೆ. ಹೀಗಾದರೆ ಮಾತ್ರ ಒಂದು ಒಳ್ಳೆಯ ತಂಡ ಕಟ್ಟಲು ಸಾಧ್ಯ,' ಎಂದು ಕೈಫ್ ಹೇಳಿದ್ದಾರೆ.

ರಾಹುಲ್ ಬ್ಯಾಕ್‌ಅಪ್ ಕೀಪರ್‌ ಆಗಬಲ್ಲರು

ರಾಹುಲ್ ಬ್ಯಾಕ್‌ಅಪ್ ಕೀಪರ್‌ ಆಗಬಲ್ಲರು

'ವಿಕೆಟ್‌ ಕೀಪರ್‌ಗಳ ವಿಚಾರದಲ್ಲೂ ಹೀಗೆಯೇ. ಆಟಗಾರರನ್ನು ಪದೇ ಪದೇ ಬದಲಾಯಿಸುತ್ತಿರಲಾಗುತ್ತಿದೆ. ಭಾರತಕ್ಕೆ ಶಾಶ್ವತ ಪರಿಣಿತ ವಿಕೆಟ್‌ ಕೀಪರ್‌ ಒಬ್ಬ ಬೇಕಿದೆ. ಕೆಎಲ್ ರಾಹುಲ್ ಬ್ಯಾಕ್‌ಅಪ್ ಕೀಪರ್‌ ಆಗಬಲ್ಲರು. ಆದರೆ ಅವರು ಈಗಲೇ ಮೇನ್ ಕೀಪರ್‌ ಆಗುತ್ತಾರೆಂದು ನನಗನ್ನಿಸುತ್ತಿಲ್ಲ,' ಎಂದು ಕೈಫ್ ನುಡಿದರು.

ಈ ಅಡೆತಡೆಗಳನ್ನು ದಾಟಿಬರಬೇಕಿದೆ

ಈ ಅಡೆತಡೆಗಳನ್ನು ದಾಟಿಬರಬೇಕಿದೆ

'ಧೋನಿ ಬದಲಿಗೆ ನೀವು ರಿಷಭ್ ಪಂತ್‌ಗೆ ಬೆಂಬಲಿಸಬೇಕಾಗಿ ಬಂದರೆ, ಕೊಹ್ಲಿ ಪಂತ್‌ನನ್ನು ಬೆಂಬಲಿಸಬೇಕು. ಪಂತ್ ತಂಡದಲ್ಲಿ ವಾಟರ್ ಬಾಯ್ ಆಗಿರಬಾರದು. ಕೊಹ್ಲಿ ಮತ್ತು ತಂಡ ಇದನ್ನೆಲ್ಲಾ ಸರಿಪಡಿಸಿಕೊಳ್ಳಬೇಕು. ಅಡೆತಡೆಗಳನ್ನು ದಾಟಿಬರಬೇಕು,' ಎಂದು ಕೈಫ್ ವಿವರಿಸಿದರು.

Story first published: Wednesday, May 20, 2020, 11:56 [IST]
Other articles published on May 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X