ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC T20I ranking: ನಂ.1 ಸ್ಥಾನಿ ಅಝಮ್ ಬೆನ್ನಲ್ಲೇ ಕನ್ನಡಿಗ ಕೆಎಲ್ ರಾಹುಲ್!

ICC Ranking : KL Rahul rises up high whereas virat kohli drops | K L Rahul | Virat Kohli
Virat Kohli slips to 10th; KL Rahul, Rohit Sharma static in ICC T20I rankings

ಬೆಂಗಳೂರು, ಫೆಬ್ರವರಿ 17: ಇಂಟರ್ ನ್ಯಾಷನಲ್ ಕ್ರಿಕೆಟ್‌ ಕೌನ್ಸಿಲ್ (ಐಸಿಸಿ) ಸೋಮವಾರ (ಫೆಬ್ರವರಿ 17) ಪ್ರಕಟಿಸಿರುವ ನೂತನ ಟಿ20ಐ ರ್ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕುಸಿತ ಕಂಡಿದ್ದಾರೆ. ಆದರೆ ಕನ್ನಡಿಗ ಕೆಎಲ್ ರಾಹುಲ್ ಭರ್ಜರಿ ಭಾರೀ ಎತ್ತರಕ್ಕೇರಿದ್ದಾರೆ. ರಾಹುಲ್ ಸದ್ಯ ಟಿ20 ರ್ಯಾಂಕ್‌ನಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್‌ಮನ್ ಬಾಬರ್ ಅಝಮ್ ಬೆನ್ನಲ್ಲೇ ಇದ್ದಾರೆ ಅನ್ನೋದು ವಿಶೇಷ.

ಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆಆರ್‌ಸಿಬಿ ತಂಡದ ಪಂದ್ಯಗಳು ಎಲ್ಲೆಲ್ಲಿ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ20 ಸರಣಿಯಲ್ಲಿ ಐದಕ್ಕೆ ಐದೂ ಪಂದ್ಯಗಳನ್ನು ಗೆದ್ದಿತ್ತು. ಈ ಸರಣಿಯಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ್ದರು. ಇದೇ ಕಾರಣಕ್ಕಾಗಿ ರಾಹುಲ್ ರ್ಯಾಂಕಿಂಗ್‌ನಲ್ಲಿ ಮೇಲೇರಿದ್ದಾರೆ. ಜೊತೆಗೆ ರೋಹಿತ್ ಶರ್ಮಾ ಕೂಡ ಜಿಗಿತ ಕಂಡಿದ್ದಾರೆ.

ಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆಭಾರತ ವಿರುದ್ಧ ಟೆಸ್ಟ್ ಸರಣಿಗೆ ಕಿವೀಸ್ ತಂಡ ಪ್ರಕಟ, ಬೌಲ್ಟ್ ಸೇರ್ಪಡೆ

ಪ್ರಸ್ತುತ ಐಸಿಸಿ ಟಿ20ಐ ರ್ಯಾಂಕಿಂಗ್‌ನಲ್ಲಿ ಪ್ರಮುಖ ತಂಡಗಳ ಸ್ಥಿತಿಗತಿ, ಆಟಗಾರರ ರ್ಯಾಂಕ್ ಏರಿಳಿತಗಳ ಚಿತ್ರಣ ಇಲ್ಲಿದೆ.

ರಾಹುಲ್ ಮೇಲೇರಲು ಕಾರಣ

ರಾಹುಲ್ ಮೇಲೇರಲು ಕಾರಣ

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಐದು ಪಂದ್ಯಗಳಲ್ಲಿ ಕೆಎಲ್ ರಾಹುಲ್ ಕ್ರಮವಾಗಿ 56, 57, 27, 39, 45 ರನ್‌ ಕಲೆ ಹಾಕಿದ್ದರು. ಈ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದಲೇ ರಾಹುಲ್ ಟಿ20 ರ್ಯಾಂಕಿಂಗ್‌ನಲ್ಲಿ ಸದ್ಯ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಪಾಕ್ ಆಟಗಾರ ಬಾಬರ್ ಅಝಮ್ 879 ರೇಟಿಂಗ್ ಪಾಯಿಂಟ್‌ ಹೊಂದಿದ್ದರೆ, ರಾಹುಲ್ 823 ಪಾಯಿಂಟ್‌ನಿಂದ ದ್ವಿತೀಯ ಸ್ಥಾನದಲ್ಲಿದ್ದಾರೆ.

10ಕ್ಕೆ ಕುಸಿದ ವಿರಾಟ್ ಕೊಹ್ಲಿ

10ಕ್ಕೆ ಕುಸಿದ ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ಟಿ20 ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಗಣನೀಯ ಪ್ರದರ್ಶನವೇನೂ ನೀಡಿರಲಿಲ್ಲ. ಹೀಗಾಗಿ ವಿರಾಟ್ ಸದ್ಯ 10ನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಕೊಹ್ಲಿ ಬೆನ್ನಲ್ಲೇ ರೋಹಿತ್ ಶರ್ಮಾ (11ನೇ ರ್ಯಾಂಕ್) ಇದ್ದಾರೆ. ಬಾಬರ್ ಅಝಮ್ (1ನೇ ರ್ಯಾಂಕ್, ಪಾಕ್), ಕೆಎಲ್ ರಾಹುಲ್ (2, ಭಾರತ), ಆ್ಯರನ್ ಫಿಂಚ್ (3, ಆಸ್ಟ್ರೇಲಿಯಾ), ಕಾಲಿನ್ ಮುನ್ರೋ (4, ನ್ಯೂಜಿಲೆಂಡ್), ಗ್ಲೆನ್ ಮ್ಯಾಕ್ಸ್‌ವೆಲ್ (5, ಆಸೀಸ್), ಡೇವಿಡ್ ಮಲಾನ್ (6, ಇಂಗ್ಲೆಂಡ್), ಎವಿನ್ ಲೆವಿಸ್ (7, ವೆಸ್ಟ್ ಇಂಡೀಸ್), ಅಝರತುಲ್ಲ ಝಝಾಯ್ (8, ಅಫ್ಘಾನಿಸ್ಥಾನ), ಇಯಾನ್ ಮಾರ್ಗನ್ (9, ಇಂಗ್ಲೆಂಡ್), ವಿರಾಟ್ ಕೊಹ್ಲಿ (10, ಭಾರತ), ರೋಹಿತ್ ಶರ್ಮಾ (11, ಭಾರತ) ಮೊದಲ 11ರಲ್ಲಿ ಸ್ಥಾನ ಪಡೆದುಕೊಂಡವರು.

ಬೌಲರ್‌ಗಳಲ್ಲಿ ಭಾರತೀಯರಿಲ್ಲ

ಬೌಲರ್‌ಗಳಲ್ಲಿ ಭಾರತೀಯರಿಲ್ಲ

ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಅಫ್ಘಾನಿಸ್ಥಾನ ಆಲ್ ರೌಂಡರ್ ಅಶೀದ್ ಖಾನ್ (749 ಪಾಯಿಂಟ್ಸ್‌) ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಅಫ್ಘಾನ್‌ನ ಮುಜೀಬ್ ಉರ್ ರಹ್ಮಾನ್ (742 ಪಾಯಿಂಟ್ಸ್‌), ನ್ಯೂಜಿಲೆಂಡ್‌ನ ಮಿಚೆಲ್ ಸ್ಯಾಂಟ್ನರ್, ಆಸ್ಟ್ರೇಲಿಯಾದ ಆ್ಯಡಮ್ ಝಂಪಾ, ಪಾಕಿಸ್ತಾನದ ಇಮಾದ್ ವಾಸಿಮ್, ದಕ್ಷಿಣ ಆಫ್ರಿಕಾದ ಆಂಡಿಲೆ ಫೆಹ್ಲುಕ್ವಾಯೊ, ಇಂಗ್ಲೆಂಡ್‌ನ ಆದಿಲ್ ರಶೀದ್, ದಕ್ಷಿಣ ಆಫ್ರಿಕಾದ ತಬ್ರೈಜ್ ಶಂಸಿ, ಪಾಕಿಸ್ತಾನ ಶದಾಬ್ ಖಾನ್, ಆಸ್ಟ್ರೇಲಿಯಾದ ಆ್ಯಷ್ಟನ್ ಅಗರ್ ಅನಂತರದ ಸ್ಥಾನಗಳಲ್ಲಿದ್ದಾರೆ.

ಆಲ್‌ರೌಂಡರ್, ತಂಡಗಳ ಶ್ರೇಯಾಂಕ

ಆಲ್‌ರೌಂಡರ್, ತಂಡಗಳ ಶ್ರೇಯಾಂಕ

ಆಲ್ ರೌಂಡರ್‌ಗಳ ಸಾಲಿನಲ್ಲೂ ಮೊದಲ 10ರಲ್ಲಿ ಒಬ್ಬರೇ ಒಬ್ಬರು ಭಾರತೀಯರಿಲ್ಲ. ಈ ಶ್ರೇಯಾಂಕದಲ್ಲಿ 1. ಮೊಹಮ್ಮದ್ ನಬಿ (ಅಫ್ಘಾನಿಸ್ತಾನ), 2. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), 3. ಸೀನ್ ಲಿವಿಯಮ್ಸ್ (ಜಿಂಬಾಂಬ್ವೆ), 4. ರಿಚರ್ಡ್ ಬೆರಿಂಗ್ಟನ್ (ಸ್ಕಾಟ್ಲೆಂಡ್), 5. ರೋಹನ್ ಮುಸ್ತಫಾ (ಯುಎಇ) ಆರಂಭಿಕ ಐದರಲ್ಲಿದ್ದಾರೆ. ತಂಡಗಳ ಶ್ರೇಯಾಂಕದಲ್ಲಿ ಪಾಕಿಸ್ತಾನ 1, ಆಸ್ಟ್ರೇಲಿಯಾ 2, ಇಂಗ್ಲೆಂಡ್ 3, ಭಾರತ 4, ದಕ್ಷಿಣ ಆಫ್ರಿಕಾ 5ನೇ ಸ್ಥಾನ ಪಡೆದುಕೊಂಡಿವೆ.

Story first published: Monday, February 17, 2020, 17:55 [IST]
Other articles published on Feb 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X