ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ನಾಯಕತ್ವವನ್ನೂ ತೊರೆದ ಕೊಹ್ಲಿ: ವಿರಾಟ್ ನಿರ್ಧಾರಕ್ಕೆ ಕ್ರಿಕೆಟ್ ತಾರೆಯರ ಅಚ್ಚರಿ, ಬಿಸಿಸಿಐ ಪ್ರತಿಕ್ರಿಯೆ

Virat Kohli step down India Test captaincy: Former cricketers reaction, BCCI react in surprise

ಟಿ20 ಹಾಗೂ ಏಕದಿನ ನಾಯಕತ್ವದಿಂದ ಕೆಳಕ್ಕಿಳಿದ ಬಳಿಕ ವಿರಾಟ್ ಕೊಹ್ಲಿ ಅಚ್ಚರಿಯೆಂಬಂತೆ ಟೆಸ್ಟ್ ತಂಡದ ನಾಯಕತ್ವವನ್ನು ಕೂಡ ತೊರೆದಿದ್ದಾರೆ. ವಿರಾಟ್ ಕೊಹ್ಲಿಯ ಈ ನಿರ್ಧಾರ ಅಭಿಮಾನಿಗಳನ್ನು ಮಾತ್ರವಲ್ಲ ಹಾಲಿ ಹಾಗೂ ಮಾಜಿ ಕ್ರಿಕೆಟಿಗರುಗೂ ಅಚ್ಚರಿ ಮೂಡಿಸಿದೆ. ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆ ಬಗ್ಗೆ ಅನೇಕ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡಿದ್ದಾರೆ.

7 ವರ್ಷಗಳ ಕಾಲ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕನಾಗಿ ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಯಶಸ್ವೀ ಟೆಸ್ಟ್ ನಾಯಕ ಎನಿಸಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿರುವುದು ವಿರಾಟ್ ನಾಯಕತ್ವದ ಅತ್ಯಂತ ಸ್ಮರಣೀಯ ಸಾಧನೆಯಾಗಿದೆ.

ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಕ್ಕೆ ಈ ಅಂಶಗಳೇ ಕಾರಣ!

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಕ್ಕಿಳಿಯುವ ಬಗ್ಗೆ ಅನೇಕ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಅದರಲ್ಲೂ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಕೊಹ್ಲಿಯ ಈ ನಿರ್ಧಾರದಿಂದ ಆಘಾತಗೊಂಡಿದ್ದೇನೆ ಎಂದಿದ್ದಾರೆ. "ವಿರಾಟ್ ಕೊಹ್ಲಿ ಇದ್ದಕ್ಕಿದ್ದಂತೆ ತೆಗೆದುಕೊಂಡಿರುವ ಈ ನಿರ್ಧಾರದಿಂದ ನಾನಯ ಅಚ್ಚರಿಗೊಂಡಿದ್ದೇನೆ. ಆದರೆ ಆತ ನಿರ್ಧಾರವನ್ನು ನಾಬು ಗೌರವಿಸುತ್ತೇನೆ. ಈಗ ನಾನು ಆತ ಭಾರತೀಯ ಕ್ರಿಕೆಟ್ ತಂಡಕ್ಕೆ ಹಾಗೂ ವಿಶ್ವ ಕ್ರಿಕೆಟ್‌ಗೆ ನೀಡಿದ ಕೊಡುಗೆಗೆ ಚಪ್ಪಾಳೆಯನ್ನು ಮಾತ್ರವೇ ನೀಡಬಹುದು. ಭಾರತ ಕಂಡ ಅತ್ಯಂತ ಸಮರ್ಥ ಹಾಗೂ ಅತ್ಯಂತ ಆಕ್ರಮಣಕಾರಿ ಆಟಗಾರ ಕೊಹ್ಲಿ. ಆಟಗಾರನಾಗಿ ಆ ಭಾರತ ತಂಡದ ಪರವಾಗಿ ಮತ್ತಷ್ಟು ಮಿಂಚುವ ವಿಶ್ವಾಸ ನನಗಿದೆ" ಎಂದು ಸುರೇಶ್ ರೈನಾ ತಮ್ಮ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಸಾಧನೆಯ ಬಗ್ಗೆ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಿರಾಟ್ ಕೊಹ್ಲಿ ಟೆಸ್ಟ್ ತಮಡದ ನಾಯಕನಾಗುವ ಮುನ್ನ ವಿದೇಶದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲುವುದು ವಿಶೇಷ ಸಾಧನೆಯಾಗಿತ್ತು. ಆದರೆ ಈಗ ವಿದೇಶಿ ನೆಲದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಸೋತರೆ ಅದು ನಿರಾಸೆಯಾಗುತ್ತದೆ. ವಿರಾಟ್ ಕೊಹ್ಲಿ ಭಾರತೀಯ ತಂಡವನ್ನು ಮುನ್ನಡೆಸಿದ ರೀತಿ ಹೀಗಿದೆ. ಅದು ಆತನ ವಿಶೇಷ ಸಾಧನೆಯಾಗಿದೆ. ಈ ಯಶಸ್ವೀ ಪಯಣಕ್ಕೆ ಅಭಿನಂದನೆಗಳು" ಎಂದು ವಾಸಿಂ ಜಾಫರ್ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ನಿವೃತ್ತಿ ಹೇಳಿದ ಬಳಿಕ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23: ದ. ಆಫ್ರಿಕಾ ವಿರುದ್ಧ ಸೋಲಿನ ಬಳಿಕ ಭಾರತದ ಪಾಯಿಂಟ್ಸ್ ಎಷ್ಟು?

ಇನ್ನು ಮಾಜಿ ಕ್ರಿಕೆಟಿಗ ವಿರೇಂದರ ಸೆಹ್ವಾಗ್ ಕೂಡ ಟ್ವಿಟ್ಟರ್‌ನಲ್ಲಿ ನಾಯಕನಾಗಿ ಕೊಹ್ಲಿಯ ಸಾಧನೆಯನ್ನು ಸ್ಮರಿಸಿದ್ದಾರೆ. " ಭಾರತೀಯ ತಂಡದ ಟೆಸ್ಟ್ ನಾಯಕನಾಗಿ ವಿರಾಟ್ ಕೊಹ್ಲಿಯ ಅಭೂತವೂರ್ವ ಸಾಧನೆಗೆ ಅಭಿನಂದನೆಗಳು ವಿರಾಟ್ ಕೊಹ್ಲಿ" ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

"ಅಂಕಿಅಂಶಗಳು ಸುಳ್ಳು ಹೇಳಲಾರವು. ಆತ ಕೇವಲ ಭಾರತೀಯ ತಂಡದ ಯಶಸ್ವಿ ನಾಯಕ ಮಾತ್ರವಲ್ಲ. ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವೀ ನಾಯಕನೂ ಹೌದು. ನೀವು ಹೆಮ್ಮೆಯನ್ನು ಪಡೆಬಹುದು ವಿರಾಟ್ ಕೊಹ್ಲಿ. ನಿಮ್ಮ ಬ್ಯಾಟ್‌ನಿಂದ ಮತ್ತಷ್ಟು ಅದ್ಭುತವಾದ ಇನ್ನಿಂಗ್ಸ್‌ಗಳು ಬರುವುದನ್ನು ನೋಡಲು ಕಾಯುತ್ತಿದ್ದೇನೆ. ಭಾರತೀಯ ತಂಡವನ್ನು ಮು್ನನಡೆಸುವುದು ಯಾವಾಗಲೂ ವಿಶೇಷವಾದ ಗೌರವ. ಆದರೆ ಈ ತಂಡದ ನಾಯಕತ್ವದಿಂದ ಕೆಳಕ್ಕಿಳಿಯುವುದು ಅತ್ಯಂತ ಭಾವುಕ ಕ್ಷಣ. ಈ ಪಯಣ ಅತ್ಯಂತ ಅದ್ಭುತವಾಗಿತ್ತು ವಿರಾಟ್ ಕೊಹ್ಲಿ" ಎಂದು ಭಾರತೀಯ ಕ್ರಿಕೆಟ್ ತಮಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಟ್ವೀಟ್ ಮಾಡಿದ್ದಾರೆ.

ಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರುಆತ ಇದ್ದಿದ್ದರೆ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆಲ್ಲುತ್ತಿತ್ತು ಎಂದ ನೆಟ್ಟಿಗರು

ಬಿಸಿಸಿಐನ ಕಾರ್ಯದರ್ಶಿ ಜಯ್ ಶಾ ಕೂಡ ವಿರಾಟ್ ಕೊಹ್ಲಿಯ ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ತೋರಿದ ಅಮೋಘ ಪ್ರದರ್ಶನಕ್ಕೆ ವಿರಾಟ್ ಕೊಹ್ಲಿಗೆ ಅಭಿನಂದನೆಗಳು. ವಿರಾಟ್ ತಂಡವನ್ನು ಅತ್ಯಂತ ಸಮರ್ಥ ತಂಡವಾಗಿ ಪರಿವರ್ತಿಸಿದರು. ಈ ತಂಡ ಭಾರತ ಮಾತ್ರವಲ್ಲದೆ ವಿದೇಶದಲ್ಲಿಯೂ ಅದ್ಭುತ ಪ್ರದರ್ಶನ ನೀಡಿದೆ. ಅದರಲ್ಲೂ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಗೆಲುವುಗಳು ಬಹಳ ವಿಶೇಷವಾದವು" ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡಿದ್ದಾರೆ.

ಇನ್ನು ಬಿಸಿಸಿಐನ ಕೂಡ ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದ ಬಳಿಕ ಪ್ರತಿಕ್ರಿಯೆ ನೀಡಿದೆ. "ಟೆಸ್ಟ್ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದ ಕೊಹ್ಲಿ ಅವರಲ್ಲಿನ ಅದ್ಭುತ ನಾಯಕತ್ವದ ಗುಣಗಳಿಗಾಗಿ ವಿರಾಟ್ ಕೊಹ್ಲಿ ಅವರನ್ನು ಬಿಸಿಸಿಐ ಅಭಿನಂದಿಸುತ್ತದೆ. ಅವರು 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ" ಎಂದು ಬಿಸಿಸಿಐ ಈ ಟ್ವೀಟ್‌ನಲ್ಲಿ ವಿರಾಟ್ ಕೊಹ್ಲಿಗೆ ಧನ್ಯವಾದಗಳನ್ನು ತಿಳಿಸಿದೆ.

Story first published: Sunday, January 16, 2022, 10:10 [IST]
Other articles published on Jan 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X