ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಯಲ್ಲೂ ಟಾಪ್10ರೊಳಗೆ ಸ್ಥಾನ ಪಡೆದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

 Virat Kohli storms into top 10 after heroics vs West Indies

ವಿಂಡೀಸ್ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ತನ್ನದಾಗಿಸಿಕೊಂಡಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ 183 ರನ್ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ನೀಡಿದ ಈ ಪ್ರದರ್ಶನ ಶ್ರೇಯಾಂಕ ಪಟ್ಟಿಯಲ್ಲಿ ನೇರ ಪರಿಣಾಮ ಬೀರುವಂತೆ ಮಾಡಿದೆ. ಐಸಿಸಿ ಬಿಡುಗಡೆ ಮಾಡಿರುವ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಟಾಪ್ 10ರೊಳಗಿನ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸರಣಿಗೂ ಮುನ್ನ ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ 15ನೇ ಸ್ಥಾನದಲ್ಲಿದ್ದರು. 5 ಸ್ಥಾನಗಳ ಏರಿಕೆಯನ್ನು ಕೊಹ್ಲಿ ಕಂಡಿದ್ದಾರೆ.

ರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ಟೀಮ್ ಇಂಡಿಯಾ ಮಡಿಲಿಗೆ ಟಿ20 ಸರಣಿರೋಹಿತ್, ರಾಹುಲ್, ಕೊಹ್ಲಿ ಅಬ್ಬರ: ಟೀಮ್ ಇಂಡಿಯಾ ಮಡಿಲಿಗೆ ಟಿ20 ಸರಣಿ

ಟಿ20 ಟಾಪ್‌ 10ರಲ್ಲಿ ಈಗಾಗಲೇ ರಾಹುಲ್ ಮತ್ತು ರೋಹಿತ್ ಶರ್ಮಾ ಸ್ಥಾನವನ್ನು ಪಡೆದಿದ್ದು ರಾಹುಲ್ ಮೂರು ಸ್ಥಾನಗಳ ಏರಿಕೆ ಕಂಡಿದ್ದು 6ನೇ ಸ್ಥಾನದಲ್ಲಿದ್ದಾರೆ. ಆದರೆ ಉಪನಾಯಕ ರೋಹಿತ್ ಶರ್ಮಾ ಒಂದು ಸ್ಥಾನದ ಹಿನ್ನೆಡೆ ಕಂಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮುವರು ಟಾಪ್ ಹತ್ತರಲ್ಲಿ ಸ್ಥಾನ ಪಡೆದಿದ್ದಾರೆ. ಮೊದಲನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಅಜಮ್ ಮುಂದುವರಿದಿದ್ದು ಆರೋನ್ ಫಿಂಚ್ ಎರಡನೇ ಸ್ಥಾನದಲ್ಲಿದ್ದಾರೆ.

ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!ಐಪಿಎಲ್ 2020:ಉತ್ತಮ ಮೊತ್ತಕ್ಕೆ ಹರಾಜಾಗುವ ವೆಸ್ಟ್‌ ಇಂಡೀಸ್‌ನ 4 ಆಟಗಾರರು ಇವರು!

ಮೂರು ಫಾರ್ಮೆಟ್‌ನಲ್ಲಿ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿರುವ ಏಕೈಕ ಕ್ರಿಕೆಟಿಗ ವಿರಾಟ್ ಕೊಹ್ಲಿಯಾಗಿದ್ದಾರೆ. 84 ಟೆಸ್ಟ್‌ ಪಂದ್ಯಗಳನ್ನಾಡಿರುವ ಕೊಹ್ಲಿ 7202 ರನ್‌ಗಳಿಸಿದ್ದು 54.97 ಸರಾಸರಿ ಹೊಂದಿದ್ದಾರೆ. 239 ಏಕದಿನ ಪಂದ್ಯಗಳನ್ನಾಡಿರುವ ಕೊಹ್ಲಿ 11520 ರನ್ ಗಳಿಸಿದ್ದು ಸರಾಸರಿ 60.30 ಇದೆ. 75 ಅಂತರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 52.66 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ.

Story first published: Thursday, December 12, 2019, 18:16 [IST]
Other articles published on Dec 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X