ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗರ್ಭಿಣಿ ಆನೆ ಸಾವಿಗೆ ಕೊಹ್ಲಿ, ಸೈನಾ, ಛೆಟ್ರಿ, ಯಾದವ್ ಭಾವನಾತ್ಮಕ ಪ್ರತಿಕ್ರಿಯೆ

Virat Kohli, Sunil Chhetri, Saina Nehwal reacted on death of pregnant elephant

ನವದೆಹಲಿ, ಜೂನ್ 4: ಅನಾನಾಸು ಹಣ್ಣಿನೊಳಗೆ ಸಿಡಿಮದ್ದು ತುಂಬಿಸಿ, ಗರ್ಭಿಣಿ ಆನೆಗೆ ತಿನ್ನಿಸಿ, ಆನೆ ಸಾವಿಗೆ ಕಾರಣವಾದ ಘಟನೆಗೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಕ್ರೀಡಾ ಲೋಕ ಮರುಕ ಪಟ್ಟಿದೆ. ಕೇರಳದಲ್ಲಿ ನಡೆದಿರುವ ಈ ಹೃದಯದ್ರಾವಕ ಘಟನೆ ಸಾಮಾಜಿಕ ಜಾಲತಾಣದಲ್ಲಿ ಪಸರಿಸಿ ಇಡೀ ದೇಶದ ಮಂದಿಗೆ ನೋವುಂಟು ಮಾಡಿದೆ. ಅಮಾನುಷವಾಗಿ ನಡೆದುಕೊಂಡವರ ವಿರುದ್ಧ ದೇಶದಾದ್ಯಂತ ಆಕ್ರೋಶವೂ ವ್ಯಕ್ತವಾಗಿದೆ.

ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್ಬೌಲರ್ ಆಗಿ ವೃತ್ತಿ ಆರಂಭಿಸಿ ಬ್ಯಾಟ್ಸ್‌ಮನ್‌ ಆಗಿ ಮಿಂಚಿದ ಫೇಮಸ್ ಕ್ರಿಕೆಟರ್ಸ್

ಕೇರಳ ರಾಜ್ಯದ ಪಲಕ್ಕಾಡ್‌ನಲ್ಲಿ ಈ ಘಟನೆ ನಡೆದಿತ್ತು. ಸಿಡಿಮದ್ದು ತುಂಬಿಸಿದ್ದ ಅನಾನಾಸು ತಿಂದ ಗರ್ಭಿಣಿ ಆನೆ ನೋವು ತಾಳಲಾರದೆ ನದಿಗಿಳಿದು ನರಳಾಡಿ ಕೊನೆಗೆ ಸಾವನ್ನಪ್ಪಿತ್ತು.

ಇಂಗ್ಲೆಂಡ್ ಸರಣಿಗೆ 25 ಸದಸ್ಯರ ವೆಸ್ಟ್ ಇಂಡೀಸ್ ತಂಡ ಪ್ರಕಟಇಂಗ್ಲೆಂಡ್ ಸರಣಿಗೆ 25 ಸದಸ್ಯರ ವೆಸ್ಟ್ ಇಂಡೀಸ್ ತಂಡ ಪ್ರಕಟ

ಗರ್ಭಿಣಿ ಆನೆ ಸಾವಿಗೆ ಮರುಕಪಟ್ಟು ಕ್ರೀಡಾಪಟುಗಳು ಮಾಡಿರುವ ಟ್ವೀಟ್‌ಗಳು ಇಲ್ಲಿವೆ.

ವಿರಾಟ್ ಕೊಹ್ಲಿ ಟ್ವೀಟ್

'ಕೇರಳದಲ್ಲಿ ನಡೆದಿರುವ ಘಟನೆ ಕೇಳಿ ದಿಗಿಲಾಗುತ್ತಿದೆ. ನಾವು ನಮ್ಮ ಪ್ರಾಣಿಗಳನ್ನು ಪ್ರೀತಿಯಿಂದ ನೋಡಿಕೊಳ್ಳೋಣ ಮತ್ತು ಈ ಹೇಡಿತನದ ಕೃತ್ಯಗಳನ್ನು ಕೊನೆಗೊಳಿಸೋಣ' ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟ್ವಿಟರ್ ಮತ್ತು ಫೆಸ್ಬುಕ್ಕಿನಲ್ಲಿ ಬರೆದುಕೊಂಡಿದ್ದಾರೆ.

ನಿರುಪದ್ರವಿ ಗರ್ಭಿಣಿ ಆನೆ

ನಿರುಪದ್ರವಿ ಗರ್ಭಿಣಿ ಆನೆ

'ಅದು ನಿರುಪದ್ರವಿ, ಗರ್ಭಿಣಿ ಆನೆಯಾಗಿತ್ತು. ಆನೆಯನ್ನು ಅಮಾನುಷವಾಗಿ ಕೊಂದವರು ರಾಕ್ಷಸರು. ಇಂಥ ದುರುಳರಿಗೆ ತಕ್ಕ ಶಿಕ್ಷೆಯಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಪ್ರಕೃತಿಯನ್ನು ಕಾಪಾಡುವ ವಿಚಾರದಲ್ಲಿ ನಾವು ಮತ್ತೆ ಮತ್ತೆ ಸೋಲುತ್ತಲೇ ಇದ್ದೇವೆ. ಈ ರೀತಿ ವರ್ತಿಸುತ್ತೇವಾದರೆ ನಾವು ಪ್ರಾಣಿಗಳಿಗಿಂತ ಭಿನ್ನ ಹೇಗೆ ಹೇಳಿ?' ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ ಟ್ವೀಟ್ ಮಾಡಿದ್ದಾರೆ.

ಸೈನಾ ನೆಹ್ವಾಲ್ ಸಂತಾಪ

ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಸೈನಾ ನೆಹ್ವಾಲ್ ಕೂಡ ಹೆಣ್ಣಾನೆ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದಾರೆ. 'ಈ ಘಟನೆ ನೋಡಲು ಬೇಸರವಾಗುತ್ತದೆ ಎಂದು ಸೈನಾ ತಮ್ಮ ಅಧಿಕೃತ ಟ್ವೀಟರ್ ಅಕೌಂಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಕ್ಕಸರು ಮಾತ್ರ ಇದನ್ನು ಮಾಡಬಲ್ಲರು

ರಕ್ಕಸರು ಮಾತ್ರ ಇದನ್ನು ಮಾಡಬಲ್ಲರು

ಘಟನೆಗೆ ಸಂಬಂಧಿಸಿ ಆಕ್ರೋಶ ವ್ಯಕ್ತಪಡಿಸಿರುವ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್, 'ಗರ್ಭಿಣಿ ಆನೆಗೆ ಸಿಡಿಮದ್ದು ತುಂಬಿಸಿದ್ದ ಪೈನಾಪಲ್ ತಿನ್ನಿಸುವುದೆಂದರೆ? ಇದನ್ನು ರಾಕ್ಷಸರು ಮಾತ್ರ ಮಾಡಬಲ್ಲರು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು' ಎಂದು ಟ್ವೀಟ್ ಮಾಡಿದ್ದಾರೆ.

Story first published: Thursday, June 4, 2020, 12:01 [IST]
Other articles published on Jun 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X