ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 1st ODI: ಭರ್ಜರಿ ಅರ್ಧ ಶತಕ ಸಿಡಿಸಿ 2 ಪ್ರಮುಖ ದಾಖಲೆ ಬರೆದ ಕೊಹ್ಲಿ

Virat Kohli surpass Jacques Kallis with 61st ODI fifty, becomes fastest to 10000 international runs at home

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಶಿಖರ್ ಧವನ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ ಅವರ ಅರ್ಧ ಶತಕದ ಸಾಧನೆಯ ಕಾರಣದಿಂದಾಗಿ ಭಾರತ ನಿಗದಿತ 50 ಓವರ್‌ಗಳಲ್ಲಿ 317 ರನ್‌ ಬಾರಿಸಲು ಶಕ್ತವಾಗಿದೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಟಿ20 ಸರಣಿಯಲ್ಲಿ ಫಾರ್ಮ್‌ಅನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದು ವಿರಾಟ್ ಕೊಹ್ಲಿ ಸಿಡಿಸಿದ 61 ಅರ್ಧ ಶತಕವಾಗಿದೆ. ಈ ಮೂಲಕ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 104ನೇ ಬಾರಿಗೆ 50ಕ್ಕೂ ಅಧಿಕ ರನ್‌ಗಳಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಕ್ರಿಕೆಟಿಗ ಜಾಕ್ ಜ್ಯಾಲಿಸ್ ಸಾಧನೆಯನ್ನು ಮೀರಿ ನಿಂತಿದ್ದಾರೆ.

ಭಾರತ vs ಇಂಗ್ಲೆಂಡ್ 1st ODI: ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಪದಾರ್ಪಣೆಭಾರತ vs ಇಂಗ್ಲೆಂಡ್ 1st ODI: ಕನ್ನಡಿಗ ಪ್ರಸಿದ್ಧ್ ಕೃಷ್ಣ ಹಾಗೂ ಕೃನಾಲ್ ಪಾಂಡ್ಯ ಪದಾರ್ಪಣೆ

ಜಾಕ್‌ ಕ್ಯಾಲೀಸ್ ಹಿಂದಿಕ್ಕಿದ ಕೊಹ್ಲಿ

ಜಾಕ್‌ ಕ್ಯಾಲೀಸ್ ಹಿಂದಿಕ್ಕಿದ ಕೊಹ್ಲಿ

ಜಾಕ್ ಕ್ಯಾಲೀಸ್ 328 ಪಂದ್ಯಗಳಲ್ಲಿ 103 ಬಾರಿ 50+ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟಾರೆಉಆಗಿ ವಿರಾಟ್ ಕೊಹ್ಲಿ ಈಗ ನಾಲ್ಕನೇ ಸ್ಥಾನದಲ್ಲಿ ನಿಂತಿದ್ದಾರೆ. ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು 145 ಬಾರಿ 50+ ಸಾಧನೆ ಮಾಡಿದ್ದಾರೆ. ಶ್ರೀಲಂಕಾ ದಿಗ್ಗಜ ಆಟಗಾರ ಕುಮಾರ್ ಸಂಗಕ್ಕರ 118 ಹಾಗೂ ಆಸಿಸ್ ಮಾಜಿ ನಾಯಕ ರಿಕಿ ಪಾಂಟಿಂಗ್ 112 ಬಾರಿ ಈ ಸಾಧನೆ ಮಾಡಿದ್ದು ಎರಡು ಹಾಗೂ ಮೂರನೇ ಸ್ಥಾನದಲ್ಲಿದ್ದಾರೆ.

ತವರಿವಲ್ಲಿ ಹತ್ತು ಸಾವಿರ ರನ್

ತವರಿವಲ್ಲಿ ಹತ್ತು ಸಾವಿರ ರನ್

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತವರಿನ ನೆಲದಲ್ಲಿ 10,000 ರನ್‌ಗಳಿಸಿದ ಸಾಧನೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಸಾಧನೆ ಮಾಡಿದ ಭಾರತದ ಕೇವಲ ಎರಡನೇ ಆಟಗಾರ ಎನಿಸಿದ್ದಾರೆ ವಿರಾಟ್ ಕೊಹ್ಲಿ.

ತವರಿನಲ್ಲಿ ಅತ್ಯಂತ ವೇಗವಾಗಿ 10,000 ರನ್

ತವರಿನಲ್ಲಿ ಅತ್ಯಂತ ವೇಗವಾಗಿ 10,000 ರನ್

ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ 6ನೇ ಆಟಗಾರ ಎನಿಸಿದ್ದಾರೆ. ಆದರೆ ಈ ಎಲ್ಲಾ ಆಟಗಾರರ ಪೈಕಿ ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ತಲುಪಿದ ಆಟಗಾರ ಎಂಬ ದಾಖಲೆ ಟೀಮ್ ಇಂಡಿಯಾ ಹಾಲಿ ನಾಯಕನ ಪಾಲಾಗಿದೆ. ಈ ಮೂಲಕ ತವರು ನೆಲದಲ್ಲಿ ಅತ್ಯಂತ ವೇಗವಾಗಿ ಹತ್ತು ಸಾವಿರ ಅಂತಾರಾಷ್ಟ್ರೀಯ ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ ವಿರಾಟ್ ಕೊಹ್ಲಿ.

ಭಾರತದ ಬೃಹತ್ ಮೊತ್ತ

ಭಾರತದ ಬೃಹತ್ ಮೊತ್ತ

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದು 317 ರನ್‌ ದಾಖಲಿಸಿದೆ. ಆರಂಭಿಕ ಆಟಗಾರ ಶಿಖರ್ ಧವನ್ 98 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ವಿರಾಟ್ ಕೊಹ್ಲಿ 56 ರನ್‌ ಸಿಡಿಸಿದರು. ಬಳಿಕ ಬಂದ ಕೆಎಲ್ ರಾಹುಲ್ ಹಾಗೂ ಕೃನಾಲ್ ಪಾಂಡ್ಯ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಕೆಎಲ್ ರಾಹುಲ್ 43 ಎಸೆತಗಳಲ್ಲಿ 62 ರನ್‌ ಬಾರಿಸಿ ಫಾರ್ಮ್‌ಗೆ ಮರಳಿದರೆ ಕೃನಾಲ್ ಪಾಂಡ್ಯ ಚೊಚ್ಚಲ ಪಂದ್ಯದಲ್ಲಿಯೇ 58 ರನ್‌ಗಳಿಸಿ ದಾಖಲೆ ಬರೆದರು.

Story first published: Tuesday, March 23, 2021, 18:34 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X