ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಹಿಂದಿಕ್ಕಿ ವಿಶ್ವದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ!

Virat Kohli surpasses Rohit Sharma in elite list of T20I run-scorers

ಇಂದೋರ್, ಜನವರಿ 7: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೆಸರಿನಲ್ಲಿದ್ದ ವಿಶ್ವದಾಖಲೆಯೊಂದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುರಿದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್‌ ದಾಖಲೆ ಶರ್ಮಾ ಮತ್ತು ಕೊಹ್ಲಿ ಹೆಸರಿನಲ್ಲಿತ್ತು. ಅದೀಗ ಆ ದಾಖಲೆ ಸಂಪೂರ್ಣ ಕೊಹ್ಲಿ ಪಾಲಾಗಿದೆ.

ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!ಐಪಿಎಲ್ 2020ರ ಫೈನಲ್ ಪಂದ್ಯದ ದಿನಾಂಕ, ಸಮಯ ಪ್ರಕಟ!

ಇಂದೋರ್‌ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 7) ನಡೆದ ಭಾರತ-ಶ್ರೀಲಂಕಾ ದ್ವಿತೀಯ ಟಿ20ಐ ಪಂದ್ಯದಲ್ಲಿ ಕೊಹ್ಲಿ ವಿಶ್ವದಾಖಲೆ ಪೂರೈಸಿಕೊಂಡರು. ಶ್ರೀಲಂಕಾ ವಿರುದ್ಧ ಭಾರತಕ್ಕೆ ಇನ್ನೊಂದು ಪಂದ್ಯವಿದ್ದು, ಕೊಹ್ಲಿ ಈ ದಾಖಲೆ ಯಾದಿಯಲ್ಲಿ ಮತ್ತಷ್ಟು ರನ್ ಹೆಚ್ಚಿಸಿಕೊಳ್ಳಲಿದ್ದಾರೆ.

ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!ಸಾರ್ವಕಾಲಿಕ ದಾಖಲೆ ಬರೆದ ರಾಸ್‌ ಟೇಯ್ಲರ್: ಮಾಧ್ಯಮದ ಮುಂದೆ ಕಣ್ಣೀರು!

ಕೊಹ್ಲಿ ಬ್ಯಾಟಿಂಗ್, ಶಾರ್ದೂಲ್ ಠಾಕೂರ್, ನವದೀಪ್ ಸೈನಿ, ಕುಲದೀಪ್ ಯಾದವ್ ಬೌಲಿಂಗ್‌ ನೆರವಿನೊಂದಿಗೆ ಇಂದೋರ್ ಪಂದ್ಯದಲ್ಲಿ ಭಾರತ 7 ವಿಕೆಟ್ ಸುಲಭ ಗೆಲುವನ್ನಾಚರಿಸಿತ್ತು.

ಕೊಹ್ಲಿ-ರೋಹಿತ್ ಅಗ್ರಸ್ಥಾನದಲ್ಲಿದ್ದರು

ಕೊಹ್ಲಿ-ರೋಹಿತ್ ಅಗ್ರಸ್ಥಾನದಲ್ಲಿದ್ದರು

ಇಂದೋರ್ ಪಂದ್ಯಕ್ಕೂ ಮುನ್ನ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ರನ್‌ ವಿಶ್ವದಾಖಲೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಗಮ್ಮತ್ತೆಂದರೆ ಇಬ್ಬರೂ 2,633 ರನ್‌ ಗಳಿಸಿದ್ದರು. ಲಂಕಾ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಕೊಹ್ಲಿ 30 ರನ್‌ ಗಳಿಸಿರುವುದರಿಂದ ಸದ್ಯ ಟಿ20ಐ ಅತ್ಯಧಿಕ ರನ್‌ ಪಟ್ಟಿಯಲ್ಲಿ ಕೊಹ್ಲಿ, ರೋಹಿತ್‌ಗಿಂತ 30 ರನ್‌ ಹೆಚ್ಚಿದ್ದಾರೆ (ಚಿತ್ರಕೃಪೆ: ಗೆಟ್ಟಿ ಇಮೇಜಸ್).

ವಿಶ್ರಾಂತಿಯಲ್ಲಿ ಹಿಟ್‌ಮ್ಯಾನ್

ವಿಶ್ರಾಂತಿಯಲ್ಲಿ ಹಿಟ್‌ಮ್ಯಾನ್

ರೋಹಿತ್ ಶರ್ಮಾ ಅವರು ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿಲ್ಲ. 3 ಪಂದ್ಯಗಳ ಈ ಸರಣಿಯ ವೇಳೆ ಶರ್ಮಾ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಕೊಹ್ಲಿಗೆ ರೋಹಿತ್ ಹಿಂದಿಕ್ಕಲು ಉತ್ತಮ ಅವಕಾಶ ಒದಗಿತ್ತು. ಅದೇ ರೋಹಿತ್ ಕೂಡ ಸರಣಿಯಲ್ಲಿ ಆಡುತ್ತಿದ್ದರೆ ಇಬ್ಬರ ನಡುವಿನ ರನ್‌ ಪೈಪೋಟಿ ಇನ್ನೂ ಕುತೂಹಲಕಾರಿ ಎನಿಸುತ್ತಿತ್ತು.

ಅರ್ಧಶತಕದ ಅಂಚಿನಲ್ಲಿ ಎಡವಿದ ರಾಹುಲ್

ಅರ್ಧಶತಕದ ಅಂಚಿನಲ್ಲಿ ಎಡವಿದ ರಾಹುಲ್

ಇಂದೋರ್‌ ಕದನದಲ್ಲಿ ಭಾರತದ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಉತ್ತಮ ಆರಂಭ ನೀಡಿದ್ದರು. ಧವನ್ 32 ರನ್‌ ಕೊಡುಗೆಯಿತ್ತರೆ, ರಾಹುಲ್ 45 ರನ್‌ ಬಾರಿಸಿ ವನಿಂದು ಹಸರಂಗಗೆ ವಿಕೆಟ್ ಒಪ್ಪಿಸುವುದರೊಂದಿಗೆ ಅರ್ಧ ಶತಕದ ಅವಕಾಶ ಕೈ ಚೆಲ್ಲಿದರು. ಇನ್ನು ಟೀಮ್ ಇಂಡಿಯಾಕ್ಕೆ ಶ್ರೇಯಸ್ ಐಯ್ಯರ್ 34, ವಿರಾಟ್ ಕೊಹ್ಲಿ 30 (17 ಎಸೆತ) ರನ್‌ ಸೇರ್ಪಡೆಗೊಳಿಸಿದರು.

ಪಂದ್ಯದ ಸಾರಾಂಶ (ಸಂಕ್ಷಿಪ್ತ ಸ್ಕೋರ್‌)

ಪಂದ್ಯದ ಸಾರಾಂಶ (ಸಂಕ್ಷಿಪ್ತ ಸ್ಕೋರ್‌)

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಶ್ರೀಲಂಕಾ 20 ಓವರ್‌ಗೆ 9 ವಿಕೆಟ್ ಕಳೆದು 142 ರನ್ ಮಾಡಿತ್ತು. ಭಾರತ 17.3 ಓವರ್‌ಗೆ 3 ವಿಕೆಟ್ ನಷ್ಟದಲ್ಲಿ 144 ರನ್ ಪೇರಿಸಿ ಗೆಲುವನ್ನಾಚರಿಸಿತು. ಭಾರತದ ಶಾರ್ದೂಲ್ ಠಾಕೂರ್ 3, ನವದೀಪ್ ಸೈನಿ 2, ಕುಲದೀಪ್ ಯಾದವ್ 2, ಜಸ್‌ಪ್ರೀತ್‌ ಬೂಮ್ರಾ ಮತ್ತು ವಾಷಿಂಗ್ಟ್‌ನ್ ಸುಂದರ್ ತಲಾ 1 ವಿಕೆಟ್ ಪಡೆದರು. ನವದೀಪ್ ಸೈನಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

Story first published: Tuesday, January 7, 2020, 23:44 [IST]
Other articles published on Jan 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X