ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಪಯಣವನ್ನು ಸುಂದರಗೊಳಿಸಿದ್ದೀರಿ: ಇನ್ಸ್ಟಾಗ್ರಾಂ ಮೈಲಿಗಲ್ಲಿಗೆ ಕೊಹ್ಲಿ ಸಂತಸ

Virat Kohli Thanks Fans After Instagram Milestone

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೈದಾನದಾಚೆ ಶತಕವನ್ನು ಬಾರಿಸಿ ಈಗ ಸುದ್ದಿಯಾಗಿದ್ದಾರೆ. ವಿರಾಟ್ ಕೊಹ್ಲಿ ಪ್ರಸಿದ್ಧ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಅಭಿಮಾನಿಗಳನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿನ ಮಹತ್ವದ ಮೈಲಿಗಲ್ಲಿಗೆ ವಿರಾಟ್ ಕೊಹ್ಲಿ ಸಂತಸದಿಂದ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿನ ಕೆಲ ವಿಶೇಷ ಸಂದರ್ಭಗಳ ಫೋಟೋಗಳ ವಿಡಿಯೋ ಹೈಲೈಟ್‌ಅನ್ನು ವಿರಾಟ್ ಕೊಹ್ಲಿ ಹಂಚಿಕೊಂಡಿದ್ದಾರೆ. ಕೊಹ್ಲಿ ಜೀವನದ ಕೆಲ ಪ್ರಮುಖ ಕ್ಷಣಗಳು ಈ ವಿಡಿಯೋದಲ್ಲಿದೆ. ಈ ಸುಂದರ ವಿಡಿಯೋ ಜೊತೆಗೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಧನ್ಯವಾದವನ್ನು ಸಲ್ಲಿಸಿದ್ದಾರೆ.

ಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆಪಿಚ್ ಬಗ್ಗೆ ಟೀಕಿಸುವವರಿಗೆ ಕಠಿಣ ಮಾತುಗಳ ಪ್ರತ್ಯುತ್ತರ ನೀಡಿದ ಅಜಿಂಕ್ಯ ರಹಾನೆ

"ನೀವು ಈ ಪಯಣವನ್ನು ಸುಂದರಗೊಳಿಸಿದ್ದೀರಿ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶಿರ್ವಾದಕ್ಕೆ ಆಭಾರಿಯಾಗಿದ್ದೇನೆ. ಧನ್ಯವಾದಗಳು" ಎಂದು ವಿರಾಟ್ ಕೊಹ್ಲಿ ಈ ವಿಡಿಯೋಗೆ ನೀಡಿರುವ ಬರಹದಲ್ಲಿ ಹೇಳಿಕೊಂಡಿದ್ದಾರೆ. ಜೊತೆಗೆ '100 ಮಿಲಿಯನ್' ಹಾಗೂ #instafam ಎಂದು ಸೇರಿಸಿದ್ದಾರೆ.

ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿಯ ಬಾಲ್ಯದಿಂದ ಹಿಡಿದು ಮದುವೆಯವರೆಗಿನ ಹಾಗೂ ಮೈದಾನದಲ್ಲಿನ ಕೆಲ ಸ್ಮರಣೀಯ ಕ್ಷಣಗಳು ಇದೆ. ಜೊತೆಗೆ ತಾಯಿಯ ಜೊತೆಗಿನ ಫೋಟೋ, ಜಿಮ್‌ನಲ್ಲಿ ಕೊಹ್ಲಿಯ ತಾಲೀಮಿನ ಫೋಟೋ ಹಾಗೂ 2019ರ ವಿಶ್ವಕಪ್‌ನಲ್ಲಿ 87ರ ಹರೆಯದ ಹಿರಿಯ ಅಭಿಮಾನಿಗನ್ನು ಭೇಟಿ ಮಾಡಿದ ಫೋಟೋ ಹಾಗೂ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರಿಂದ ಖೇಲ್‌ರತ್ನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಫೋಟೋ ಕೂಡ ಇದೆ.

ಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋಶಸ್ತ್ರ ಚಿಕಿತ್ಸೆಯ ಬಳಿಕ ಮೈದಾನಕ್ಕಿಳಿದ ರವೀಂದ್ರ ಜಡೇಜಾ: ವಿಡಿಯೋ

ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ 100 ಕೋಟಿ ಬೆಂಬಲಿಗರನ್ನು ಹೊಂದಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸಾಧನೆಯನ್ನು ಮಾಡಿದ ಮೊದಲ ಕ್ರಿಕೆಟರ್‌ ಕೂಡ ಕೊಹ್ಲಿ ಆಗಿದ್ದಾರೆ. ಫಿಟ್ಬಾಲ್ ಸೂಪರ್ ಸ್ಟಾರ್‌ಗಳಾದ ಲಿಯೋನೆಲ್ ಮೆಸ್ಸಿ, ಕ್ರಿಶ್ಚಿಯಾನೋ ರೊನಾಲ್ಡೋ ಹಾಗೂ ನೇಯ್ಮಾರ್ ಅವರು ಇರುವ ಎಲೈಟ್ ಕ್ಲಬ್‌ಗೆ ವಿರಾಟ್ ಕೊಹ್ಲಿ ಸೇರಿಕೊಂಡಿದ್ದಾರೆ.

Story first published: Wednesday, March 3, 2021, 17:27 [IST]
Other articles published on Mar 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X