ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್‌ಗೆ ಮತ್ತೆ ಆರ್‌ಸಿಬಿ ನಾಯಕತ್ವ ಪಟ್ಟ? ಕೊಹ್ಲಿ ಉತ್ತರಕ್ಕೆ ಕಾದಿದೆ ಫ್ರಾಂಚೈಸಿ!

Virat kohli rcb

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಫ್ರಾಂಚೈಸಿಯ ಅವಿಭಾಜ್ಯ ಅಂಗವಾಗಿರುವ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೆ ಆರ್‌ಸಿಬಿ ನಾಯಕನಾಗಲಿದ್ದಾರೆ ಎಂಬ ಸುದ್ದಿ ಹರಿದಾಡತೊಡಗಿದ್ದು, ಫ್ರಾಂಚೈಸಿ ಕೊಹ್ಲಿಯ ಉತ್ತರವನ್ನ ಕೇಳಲು ತುದಿಗಾಲಲ್ಲಿ ನಿಂತಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಹಲವು ವರ್ಷಗಳ ಮುನ್ನೆಡೆದಿದ್ದ ಆರ್‌ಸಿಬಿ ತಂಡಕ್ಕೆ ಮುಂದಿನ ಸಾರಥಿ ಯಾರು ಎಂಬ ಪ್ರಶ್ನೆ ತುಂಬಾ ದಿನಗಳಿಂದ ಕಾಡುತ್ತಿತ್ತು. ಹೀಗಿರುವಾಗ ಆರ್‌ಸಿಬಿ ಫ್ರಾಂಚೈಸಿ ಐಪಿಎಲ್ ಹರಾಜು ಪ್ರಕ್ರಿಯೆಯ ಬಳಿಕ ಈ ಕುರಿತಾಗಿ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಹೊಸ ನಾಯಕನನ್ನ ಹುಡುಕುವ ಬದಲು ಕೊಹ್ಲಿಯನ್ನೇ ಮತ್ತೆ ನಾಯಕನಾಗುವಂತೆ ಮನವೊಲಿಸಲು ಆರ್‌ಸಿಬಿ ಫ್ರಾಂಚೈಸಿ ಮನಸ್ಸು ಮಾಡಿದೆ.

15 ಕೋಟಿ ರೂಪಾಯಿಗೆ ಕೊಹ್ಲಿ ರೀಟೈನ್

15 ಕೋಟಿ ರೂಪಾಯಿಗೆ ಕೊಹ್ಲಿ ರೀಟೈನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಐಪಿಎಲ್ 15ನೇ ಸೀಸನ್‌ ಹರಾಜಿಗೂ ಮುನ್ನ ಮೂವರು ಆಟಗಾರರನ್ನ ರೀಟೈನ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿಗೆ 15 ಕೋಟಿ ರೂಪಾಯಿ, ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ 11 ಕೋಟಿ ರೂಪಾಯಿ, ಮೊಹಮ್ಮದ್ ಸಿರಾಜ್‌ಗೆ 6 ಕೋಟಿ ರೂಪಾಯಿಯಂತೆ ರೀಟೈನ್ ಮಾಡಿಕೊಂಡಿದೆ.

ಇನ್ನು ಉಳಿದಂತೆ 57 ಕೋಟಿ ರೂಪಾಯಿ ಹಣದಲ್ಲಿ ಉಳಿದ ಆಟಗಾರರನ್ನ ಆರ್‌ಸಿಬಿ ಖರೀದಿಸಬೇಕಿದೆ. ಇದುವರೆಗೂ ರನ್ನರ್‌ ಆಪ್‌ ಆಗಿಯೇ ತೃಪ್ತಿಪಟ್ಟಿರುವ ಆರ್‌ಸಿಬಿ ಒಂದು ಬಾರಿಯು ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಕೊಹ್ಲಿ ನೇತೃತ್ವದಲ್ಲಿ ಆರ್‌ಸಿಬಿ ಕಪ್ ಗೆಲ್ಲದಿದ್ದರೂ ವಿರಾಟ್‌ಗಿರುವ ಅಭಿಮಾನಿಗಳ ಬೆಂಬಲಕ್ಕೆ ಯಾವುದೇ ಅಡೆತಡೆಯಿಲ್ಲ.

2021ರ ಐಪಿಎಲ್ ಸೀಸನ್‌ನಲ್ಲಿ ಕೊನೆಯ ಬಾರಿಗೆ ನಾಯಕತ್ವ

2021ರ ಐಪಿಎಲ್ ಸೀಸನ್‌ನಲ್ಲಿ ಕೊನೆಯ ಬಾರಿಗೆ ನಾಯಕತ್ವ

ಕಳೆದ ಐಪಿಎಲ್ ಸೀಸನ್‌ನಲ್ಲಿ ಆರ್‌ಸಿಬಿ ಪರ ಕೊನೆಯ ಬಾರಿಗೆ ನಾಯಕತ್ವ ಎಂದು ಘೋಷಿಸಿದ್ದ ವಿರಾಟ್ ಕೊಹ್ಲಿ ತಂಡವನ್ನ ಫೈನಲ್‌ಗೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ ಇದೇ ಕೊನೆಯ ಬಾರಿಗೆ ನಾನು ಆರ್‌ಸಿಬಿಯನ್ನ ಮುನ್ನಡೆಸುತ್ತೇನೆ ಎಂದು ಆರಂಭದಲ್ಲೇ ವಿರಾಟ್ ಘೋಷಿಸಿದ್ರು. ಆದ್ರೆ ಐಪಿಎಲ್ ಆಡುವವರೆಗೂ ಆರ್‌ಸಿಬಿ ತಂಡದಲ್ಲೇ ಉಳಿಯುವೇ ಎಂದು ಪ್ರಮಾಣಿಸಿದ್ದರು.

ಕ್ರಿಸ್‌ಗೇಲ್‌, ಜಾಂಟಿರೋಡ್ಸ್‌ಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

2008ರಿಂದ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್‌

2008ರಿಂದ ಆರ್‌ಸಿಬಿ ತಂಡದಲ್ಲೇ ಇರುವ ವಿರಾಟ್‌

ಐಪಿಎಲ್ ಇತಿಹಾಸದಲ್ಲಿ ಚೊಚ್ಚಲ ಸೀಸನ್‌ನಿಂದ ಒಂದೇ ತಂಡದಲ್ಲಿ ಇರುವ ಏಕೈಕ ಆಟಗಾರ ಅಂದ್ರೆ ಅದು ವಿರಾಟ್ ಕೊಹ್ಲಿ ಅಲ್ಲದೆ ಮತ್ಯಾರು ಅಲ್ಲ. ವಿರಾಟ್ 2008ರ ಉದ್ಘಾಟನಾ ಸೀಸನ್‌ನಿಂದ ಇದುವರೆಗೂ 207 ಐಪಿಎಲ್ ಪಂದ್ಯಗಳಿಂದ 6283 ರನ್ ಕಲೆಹಾಕಿದ್ದಾರೆ. ವಿರಾಟ್ ಬ್ಯಾಟ್‌ನಿಂದ ಒಂದೇ ಸೀಸನ್‌ನಲ್ಲಿ (2016) ನಾಲ್ಕು ಶತಕಗಳು ಸಿಡಿದಿವೆ. ಇದೇ ಆವೃತ್ತಿಯಲ್ಲಿ ಆರ್‌ಸಿಬಿ ಫೈನಲ್ ಕೂಡ ಪ್ರವೇಶಿಸಿತ್ತು. ಆದ್ರೆ ಕಪ್‌ ಗೆಲ್ಲಲು ಆರ್‌ಸಿಬಿ ಸಾಧ್ಯವಾಗಲಿಲ್ಲ.

ಗುಡ್‌ನ್ಯೂಸ್: ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ ರೋಹಿತ್ ಶರ್ಮಾ, ಮುಂದಿನ ಸರಣಿಗೆ ಆಯ್ಕೆ ಗ್ಯಾರೆಂಟಿ

ವಿರಾಟ್‌ ಐಪಿಎಲ್ ನಾಯಕತ್ವ ಸಾಧನೆ

ವಿರಾಟ್‌ ಐಪಿಎಲ್ ನಾಯಕತ್ವ ಸಾಧನೆ

ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕನಾಗಿ ಒಟ್ಟು 140 ಪಂದ್ಯಗಳನ್ನ ಮುನ್ನಡೆಸಿದ್ದು, ಇದರಲ್ಲಿ 66 ಗೆಲುವು ಮತ್ತು 70 ಸೋಲುಗಳನ್ನ ಕಾಣಬಹುದು. ಮುಂದಿನ ಐಪಿಎಲ್ ಸೀಸನ್‌ಗೂ ವಿರಾಟ್‌ರನ್ನೇ ನಾಯಕನನ್ನಾಗಿ ಕಾಣಲು ಫ್ರಾಂಚೈಸಿ ಬಯಸುತ್ತಿದೆ. ಈ ಬಾರಿ ಪ್ರಬಲ ತಂಡವನ್ನ ಕಟ್ಟುವ ವಿಶ್ವಾಸದಲ್ಲಿದೆ. ಈಗಾಗಲೇ ಮೂವರು ಆಟಗಾರರನ್ನ ತಂಡದಲ್ಲಿ ಉಳಿಸಿಕೊಂಡಿದ್ದು, ಕೊಹ್ಲಿಯನ್ನ ಮತ್ತೆ ನಾಯಕನಾಗಿ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಕೊಹ್ಲಿ ಒಪ್ಪಿದರೆ ಮತ್ತೆ ನಾಯಕತ್ವ ಪಟ್ಟ

ಕೊಹ್ಲಿ ಒಪ್ಪಿದರೆ ಮತ್ತೆ ನಾಯಕತ್ವ ಪಟ್ಟ

ವಿರಾಟ್ ಕೊಹ್ಲಿ ಒಪ್ಪಿಗೆ ಸೂಚಿಸಿದರೆ ಅವರೇ ಆರ್‌ಸಿಬಿ ನಾಯಕ ಆಗಲಿದ್ದಾರೆ. ಇಲ್ಲವಾದ್ರೆ ಹರಾಜಿನಲ್ಲಿ ಸೂಕ್ತ ನಾಯಕನ ಖರೀದಿ ಮಾಡಲಿದ್ದೇವೆ ಎಂದು ಆರ್‌ಸಿಬಿ ಮೂಲಗಳು ತಿಳಿಸಿವೆ. ಈಗಾಗಲೇ ಟೀಂ ಇಂಡಿಯಾದ ಎಲ್ಲಾ ಫಾರ್ಮೆಟ್‌ ನಾಯಕತ್ವದಿಂದ ಮುಕ್ತನಾಗಿರುವ ವಿರಾಟ್ ಯಾವುದೇ ಒತ್ತಡವಿಲ್ಲದೆ ಉಳಿದಿದ್ದಾರೆ. ಹೀಗಾಗಿ ವಿರಾಟ್‌ ಆರ್‌ಸಿಬಿಯ ಆಫರ್ ಅನ್ನು ಒಪ್ಪಿಕೊಳ್ಳಲಿದ್ದಾರೆಯೇ ಎಂಬುದನ್ನ ಕಾದು ನೋಡಬೇಕಿದೆ.

KL Rahul ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಆಡುತ್ತಿಲ್ಲ | Oneindia Kannada

Story first published: Wednesday, January 26, 2022, 23:14 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X