ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುರುಗ್ರಾಮದಲ್ಲಿ ವೋಟ್‌ ಮಾಡಲಿರುವ ವಿರಾಟ್‌ ಕೊಹ್ಲಿ

ಎಲೆಕ್ಷನ್ ಟೈಂ ನಲ್ಲಿ ಮಾಡಿದ್ದ ಎಡವಟ್ಟು ಸರಿಮಾಡಿಕೊಂಡ ವಿರಾಟ್..! | Oneindia Kannada
Virat Kohli to exercise his voting right in Gurugram on May 12

ಮುಂಬೈ, ಏಪ್ರಿಲ್‌ 28: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ವೋಟ್‌ ಮಾಡಲು ಸಾಧ್ಯವಿಲ್ಲ ಎಂದು ವರದಿಯಾಗಿತ್ತು.

 ಐಪಿಎಲ್‌: ಪ್ಲೇ ಆಫ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ಔಟ್‌ ಐಪಿಎಲ್‌: ಪ್ಲೇ ಆಫ್ಸ್‌ಗೆ ಡೆಲ್ಲಿ ಕ್ಯಾಪಿಟಲ್ಸ್‌, ಆರ್‌ಸಿಬಿ ಔಟ್‌

ಆದರೀಗ, ತಾವು ಗುರುಗ್ರಾಮದಿಂದ ಮತದಾನದ ಹಕ್ಕನ್ನು ಚಲಾಯಿಸುವುದಾಗಿ ಕಿಂಗ್‌ ಕೊಹ್ಲಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ ತಮ್ಮ ವೋಟರ್‌ ಐಡಿ ಕಾರ್ಡ್‌ ಚಿತ್ರವನ್ನು ಪೋಸ್ಟ್‌ ಮಾಡಿರುವ ವಿರಾಟ್‌ ಕೊಹ್ಲಿ, "ವೋಟ್‌ ಮಾಡಲು ನಾನು ರೆಡಿ, ನೀವು,'' ಎಂದು ಸಂದೇಶ ನೀಡಿದ್ದಾರೆ.

ಇದಕ್ಕೂ ಮೊದಲು ವಿರಾಟ್‌ ವೋಟ್‌ ಮಾಡಲು ಸಾಧ್ಯವಿಲ್ಲ ಎಂದು ಭಾರಿ ಸುದ್ದಿಯಾಗಿತ್ತು. ಏಕೆಂದರೆ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಮುಂಬಯಿನ ವೊರ್ಲಿಗೆ ತಮ್ಮ ನಿವಾಸ ಸ್ಥಳಾಂತರಿಸಿದ್ದ ಕೊಹ್ಲಿ, ಮತದಾರರ ಪಟ್ಟಿಗೆ ಮಾರ್ಚ್‌ 30ರ ಒಳಗಾಗಿ ತಮ್ಮ ಹೆಸರನ್ನು ಸೇರಿಸಬೇಕಿತ್ತು.

 ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು! ಐಪಿಎಲ್‌ನಲ್ಲಿ ಆ್ಯಟಮ್ ಬಾಂಬ್‌ನಂತೆ ಕಾಣಿಸಿ ಠುಸ್ ಪಟಾಕಿ ಆದೋರು!

ಆನ್‌ಲೈನ್‌ ಮೂಲಕ ಹೆಸರು ಸೇರ್ಪಡೆಗೆ ಕೊಹ್ಲಿ ಪ್ರಯತ್ನಿಸಿದ್ದರಾದರೂ ಅಂತಿಮ ದಿನಾಂಕ ಮುಗಿದಿದ್ದರಿಂದ ಹೆಸರು ಸೇರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮುಂಬೈನಲ್ಲಿ ಕೊಹ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಲ್ಲಿ ವಿಫಲರಾಗಿದ್ದರು.

ಆದರೆ, ತಮ್ಮ ಮತದಾನದ ಹಕ್ಕನ್ನು ಚಲಾಯಿಸಲೇ ಬೇಕೆಂಬ ಹಟದಲ್ಲಿರುವ ವಿರಾಟ್‌, ತಮ್ಮ ಈ ಹಿಂದಿನ ನಿವಾಸದಲ್ಲೇ ವೋಟ್‌ ಮಾಡಲು ಮುಂದಾಗಿದ್ದಾರೆ. ಹರಿಯಾಣದ ಗುರುಗ್ರಾಮದಲ್ಲಿ ವಿರಾಟ್‌ ಅವರ ಕುಟುಂಬ ಸದ್ಯರು ಈಗಲೂ ಇದ್ದು, ಮತದಾರರ ಪಟ್ಟಿಯಲ್ಲಿ ಕೊಹ್ಲಿ ಅವರ ಹೆಸರಿದೆ. ಹೀಗಾಗಿ ಗುರುಗ್ರಾಮದ ಮೂಲಕ ಮತ ಚಲಾಯಿಸಲು ಕೊಹ್ಲಿ ಮುಂದಾಗಿದ್ದಾರೆ. ಗುರುಗ್ರಾಮದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

Story first published: Sunday, April 28, 2019, 20:52 [IST]
Other articles published on Apr 28, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X