ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗೆ ಯಾರು ನಾಯಕ?!

Virat Kohli to lead Team India across formats in West Indies and beyond

ನವದೆಹಲಿ, ಜುಲೈ 19: ಐಸಿಸಿ ವಿಶ್ವಕಪ್ 2019 ಮುಕ್ತಾಯದ ಬಳಿಕ ಟೀಮ್ ಇಂಡಿಯಾದ ನಾಯಕತ್ವದದಲ್ಲಿ ಬದಲಾವಣೆಗಳಾಗಲಿವೆ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿಬಂದಿತ್ತು. ಆದರೆ ಈ ಗುಸುಗುಸುಗಳಿಗೆ ತೆರೆ ಬಿದ್ದಿದೆ. ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ವೇಳೆ ಈಗಿನ ನಾಯಕ ವಿರಾಟ್ ಕೊಹ್ಲಿಯವರೇ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ತೆಂಡೂಲ್ಕರ್, ಅಲನ್ ಡೊನಾಲ್ಡ್‌ಗೆ 'ಐಸಿಸಿ ಹಾಲ್ ಆಫ್ ಫೇಮ್' ಗೌರವತೆಂಡೂಲ್ಕರ್, ಅಲನ್ ಡೊನಾಲ್ಡ್‌ಗೆ 'ಐಸಿಸಿ ಹಾಲ್ ಆಫ್ ಫೇಮ್' ಗೌರವ

ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ಮುಕ್ತಾಯಗೊಂಡ ವಿಶ್ವಕಪ್ ಟೂರ್ನಿಯಲ್ಲಿ ನಾಯಕ ಕೊಹ್ಲಿಗಿಂತ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಒಟ್ಟು ರನ್ ಸಾಧಕರ ಪಟ್ಟಿಯಲ್ಲಿ ನಂ.1 ಸ್ಥಾನ ಆವರಿಸಿಕೊಂಡಿದ್ದರು. ಹೀಗಾಗಿ ಕ್ಯಾಪ್ಟನ್ ಹೊಣೆಗಾರಿಕೆಯನ್ನು ರೋಹಿತ್ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು.

ಸನ್‌ರೈಸರ್ಸ್ ಮುನ್ನಡೆಸಲಿದ್ದಾರೆ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಕೋಚ್!ಸನ್‌ರೈಸರ್ಸ್ ಮುನ್ನಡೆಸಲಿದ್ದಾರೆ ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್ ಕೋಚ್!

ಮುಂದಿನ ತಿಂಗಳು ವಿಂಡೀಸ್ ಪ್ರವಾಸ ಸರಣಿಯ ವೇಳೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ, ಟಿ20 ಮತ್ತು ಟೆಸ್ಟ್ ಮೂರಕ್ಕೂ ಕೊಹ್ಲಿ ನಾಯಕತ್ವ ವಹಿಸಿಕೊಳ್ಳಲಿದ್ದಾರೆ. 'ಟೀಮ್ ಇಂಡಿಯಾ ನಾಯಕತ್ವದ ಬಗೆಗಿನ ಎಲ್ಲಾ ಅನಗತ್ಯ ಊಹಾಪೋಹಗಳಿಗೆ ಭಾನುವಾರ (ಜುಲೈ 20) ತೆರೆ ಬೀಳಲಿದೆ' ಎಂದು ಮೂಲವೊಂದು ತಿಳಿಸಿದೆ.

ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ಬಾಂಗ್ಲಾ ಪ್ರೀಮಿಯರ್‌ ಲೀಗ್‌ ಅಖಾಡಕ್ಕೆ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌

ಹಿಂದಿನಸಾರಿ ವಿಂಡೀಸ್ ಪ್ರವಾಸ ಸರಣಿಗಳ ವೇಳೆ ತಂಡದ ನಾಯಕತ್ವವನ್ನು ಒಬ್ಬರೇ ವಹಿಸಿರಲಿಲ್ಲ. 2016ರಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ನಲ್ಲಿ ತಂಡ ಮುನ್ನಡೆಸಿದ್ದರು. ಇದಕ್ಕೂ ಮೊದಲು ಅಂದರೆ ನವೆಂಬರ್ 2007ರಿಂದ ಅಕ್ಟೋಬರ್ 2008ರ ವರೆಗೆ ಅನಿಲ್ ಕುಂಬ್ಳೆ ಟೆಸ್ಟ್‌ಗೆ, ಧೋನಿ ಏಕದಿನ ಮತ್ತು ಟಿ20ಗೆ ನಾಯಕರಾಗಿದ್ದರು.

ವಿಶ್ವಕಪ್ ನೋವು ಮರೆಯೋಕೆ ನಾಯೀನ ವಾಕ್ ಕರ್ಕೊಂಡ್ಹೋಗ್ತೀನಿ: ಬೌಲ್ಟ್ವಿಶ್ವಕಪ್ ನೋವು ಮರೆಯೋಕೆ ನಾಯೀನ ವಾಕ್ ಕರ್ಕೊಂಡ್ಹೋಗ್ತೀನಿ: ಬೌಲ್ಟ್

ವೆಸ್ಟ್‌ ಇಂಡೀಸ್ ಪ್ರವಾಸ ಸರಣಿಯು ಆಗಸ್ಟ್ 3ರಿಂದ ಆರಂಭಗೊಳ್ಳಲಿದೆ. 3 ಪಂದ್ಯಗಳ ಟಿ20 ಸರಣಿಯೊಂದಿಗೆ ಪಂದ್ಯಗಳು ಫ್ಲೊರಿಡಾದ ಲಾಡರ್‌ಹಿಲ್‌ನಲ್ಲಿ ಆರಂಭಗೊಳ್ಳಲಿವೆ. ಪ್ರವಾಸ ಸರಣಿಯು 3 ಟಿ20, 3 ಏಕದಿನ ಪಂದ್ಯಗಳು, 2 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿರಲಿದೆ.

Story first published: Friday, July 19, 2019, 11:44 [IST]
Other articles published on Jul 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X