ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೋರ್ಬ್ಸ್ ಪಟ್ಟಿ ಪ್ರಕಟ; ಕ್ರೀಡಾಂಗಣದಾಚೆಗೂ ಕೊಹ್ಲಿಯೇ ಪ್ರಭಾವಿ

Virat Kohli top spot on Forbes India Celebrity 2019 list

ವಿರಾಟ್ ಕೊಹ್ಲಿ ಕ್ರೀಡಾಂಗಣದಲ್ಲಿ ಮಾತ್ರವಲ್ಲ ಕ್ರೀಡಾಂಗಣದಾಚೆಗೂ ದೇಶದಲ್ಲಿ ಅತ್ಯಂತ ಪ್ರಭಾವವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. ಪ್ರತಿಷ್ಠಿತ ಫೋರ್ಬ್ಸ್ ಮ್ಯಾಗಜಿನ್ ಈ ವರ್ಷಾಂತ್ಯದ ವೇಳೆಗೆ ಪ್ರಭಾವಿಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಸ್ಟಾರ್‌ಗಳನ್ನು ಹಿಂದಿಕ್ಕಿ ಕ್ರಿಕೆಟರ್‌ ಓರ್ವ ಇದೇ ಮೊದಲ ಬಾರಿಗೆ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

ಫೋರ್ಬ್ಸ್ ಇಂಡಿಯಾ ಸೆಲೆಬ್ರಿಟಿಗಳ ಪಟ್ಟಿಯನ್ನು ಕಳೆದ ಎಂಟು ವರ್ಷಗಳಿಂದ ಪ್ರಕಟಿಸುತ್ತಿದ್ದು ಇದೇ ಮೊದಲ ಬಾರಿಗೆ ಕ್ರೀಡಾಪಟುವೊಬ್ಬರು ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ 2017ರಲ್ಲಿ 3 ನೇ ಸ್ಥಾನದಲ್ಲಿದ್ದರು. ಕಳೆದ ವರ್ಷದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರು.

ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಟೀಮ್‌ ಇಂಡಿಯಾ ನಾಯಕ ಕೊಹ್ಲಿ!ಮೆಸ್ಸಿ, ರೊನಾಲ್ಡೊ ಸಾಲಿನಲ್ಲಿ ಟೀಮ್‌ ಇಂಡಿಯಾ ನಾಯಕ ಕೊಹ್ಲಿ!

ಸ್ಟಾರ್‌ಗಳ ಆದಾಯ, ಅವರ ಜನಪ್ರಿಯತೆಯನ್ನು ಮಾನದಂಡವಾಗಿಟ್ಟುಕೊಂಡು ಈ ಪಟ್ಟಿಯನ್ನು ಸಿದ್ಧ ಪಡಿಸಲಾಗಿದೆ ಎಂದು ಫೋರ್ಬ್ಸ್ ಮ್ಯಾಗಜಿನ್ ಹೇಳಿಕೊಂಡಿದೆ.

ವಿರಾಟ್ ಕೊಹ್ಲಿಯನ್ನು ಹೊರತು ಪಡಿಸಿ ಇನ್ನೂ ಅನೇಕ ಕ್ರಿಕೆಟಿಗರು ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. 5ನೇ ಸ್ಥಾನದಲ್ಲಿ ಮಾಜಿ ನಾಯಕ ಎಮ್ ಎಸ್ ಧೋನಿ ಇದ್ದಾರೆ. ನಿವೃತ್ತಿಯ ಬಳಿಕವೂ ಸಚಿನ್ ತೆಂಡೂಲ್ಕರ್ ಪ್ರಭಾವವನ್ನು ಮುಂದುವರಿದಿದ್ದು ಈ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ರೋಹಿತ್ ಶರ್ಮಾ (11), ರಿಷಬ್ ಪಂತ್(30), ಹಾರ್ದಿಕ್ ಪಾಂಡ್ಯಾ(31), ಜಸ್ಪ್ರೀತ್ ಬೂಮ್ರಾ(33), ಕೆಎಲ್ ರಾಹುಲ್(34), ಶಿಖರ್ ಧವನ್(35) ಟಾಪ್ ಐವತ್ತರಲ್ಲಿ ಸ್ಥಾನ ಪಡೆದುಕೊಂಡಿರುವ ಕ್ರಿಕೆಟರ್‌ಗಳಾಗಿದ್ದಾರೆ.

ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿ: ಕೊಹ್ಲಿ ದ್ವಿತೀಯ, ಹಾರ್ದಿಕ್‌ಗೆ ಗಮನಾರ್ಹ ಸ್ಥಾನ!ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿ: ಕೊಹ್ಲಿ ದ್ವಿತೀಯ, ಹಾರ್ದಿಕ್‌ಗೆ ಗಮನಾರ್ಹ ಸ್ಥಾನ!

ಇನ್ನುಳಿದಂತೆ ರವೀಂದ್ರ ಜಡೇಜಾ(51) ಕುಲ್ದೀಪ್ ಯಾದವ್(61) ಕೂಡ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ (81), ಫೂಟ್ಬಾಲ್ ಆಟಗಾರ ಸುನೀಲ್ ಛೇತ್ರಿ (85), ಬಾಕ್ಸರ್ ಮೆರಿ ಕೊಮ್ (87), ಮಹಿಳಾ ಕ್ರಿಕೆಟರ್‌ಗಳಾದ ಮಿಥಾಲಿ ರಾಜ್ (88), ಸ್ಮೃತಿ ಮಂದಾನ (90) ಹಾಗೂ ಹರ್ಮನ್ ಪ್ರೀತ್ ಕೌರ್(91) ಸ್ಥಾನವನ್ನು ಪಡೆದುಕೊಂಡಿದ್ದರೆ, ಗಾಲ್ಫರ್ ಅನಿರ್ಬನ್ ಲಹಿರಿ(95) ಈ ಪಟ್ಟಿಯಲ್ಲಿರುವ ಇನ್ನುಳಿದ ಕ್ರೀಡಾಪಟುಗಳಾಗಿದ್ದಾರೆ.

Story first published: Thursday, December 19, 2019, 13:36 [IST]
Other articles published on Dec 19, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X