ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟ್ವಿಟರ್ ಎಂಗೇಜ್ಮೆಂಟ್ಸ್: ಅಗ್ರಸ್ಥಾನದಲ್ಲಿ ವಿರಾಟ್ ಕೊಹ್ಲಿ, ಸುರೇಶ್ ರೈನಾ

Virat Kohli tops the charts in Twitter engagements in October, Suresh Raina second

ನವದೆಹಲಿ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಪ್‌ ಗೆಲ್ಲೋದನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಿಸ್ ಮಾಡಿಕೊಂಡಿರಬಹುದು. ಆದರೆ ಟೀಮ್ ಇಂಡಿಯಾ ಮತ್ತು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಅಕ್ಟೋಬರ್‌ನಲ್ಲಿನ ಟ್ವಿಟರ್ ಎಂಗೇಜ್ಮೆಂಟ್ಸ್‌ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!ಸಹಾ ಆಸ್ಟ್ರೇಲಿಯಾಕ್ಕೆ ಹೋಗೋದಾದ್ರೆ ರೋಹಿತ್, ಇಶಾಂತ್ ಯಾಕಿಲ್ಲ?!

ಸಾಮಾಜಿಕ ಜಾಲತಾಣಗಳ ವಿಶ್ಲೇಷಕ ಟ್ವಿಟ್ವೀಟ್ ಪ್ರಕಾರ, ಅಕ್ಟೋಬರ್ ತಿಂಗಳಲ್ಲಿ ಕೊಹ್ಲಿಗೆ 24,65,918 ಟ್ವಿಟರ್ ಎಂಗೇಜ್ಮೆಂಟ್ ಲಭಿಸಿದೆ. ಹೆಚ್ಚು ಟ್ವೀಟ್ ಎಂಗೇಜ್ಮೆಂಟ್ ಲಭಿಸಿದ ಭಾರತದ ಸ್ಟಾರ್‌ಗಳಲ್ಲಿ ಕೊಹ್ಲಿ ಟಾಪ್ 3ರಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ (72,15,913), ದ್ವಿತೀಯ ಸ್ಥಾನದಲ್ಲಿ ರಾಹುಲ್ ಗಾಂಧಿ (35,53,825) ಇದ್ದಾರೆ.

'ಕ್ರಿಕೆಟರ್‌ಗಳ ಪಾಲಿಗೆ ಐಪಿಎಲ್ ನೆಚ್ಚಿನ ಸೀಸನ್‌ ಆಗಿತ್ತು. ಹೀಗಾಗಿ ಎಣಿಕೆಯಂತೆ ವಿರಾಟ್ ಕೊಹ್ಲಿಗೆ ಟ್ವಿಟರ್‌ನಲ್ಲಿ 2.4 ಮಿಲಿಯನ್ ಎಂಗೇಜ್ಮೆಂಟ್ ಲಭಿಸಿದೆ. ಕ್ರಿಕೆಟರ್ ಸುರೇಶ್ ರೈನಾಗೆ 1.9 ಮಿಲಿಯನ್ ಎಂಗೇಜ್ಮೆಂಟ್ ಲಭಿಸಿದ್ದು ಅವರು ದ್ವಿತೀಯ ಸ್ಥಾನದಲ್ಲಿದ್ದಾರೆ,' ಎಂದು ಟ್ವಿಟ್ವೀಟ್ ಹೇಳಿದೆ.

ಇಂಗ್ಲೆಂಡ್ ವಿರುದ್ಧ ಭಾರತ 5 ಟಿ20ಐ ಪಂದ್ಯಗಳನ್ನಾಡಲಿದೆ: ಗಂಗೂಲಿಇಂಗ್ಲೆಂಡ್ ವಿರುದ್ಧ ಭಾರತ 5 ಟಿ20ಐ ಪಂದ್ಯಗಳನ್ನಾಡಲಿದೆ: ಗಂಗೂಲಿ

'ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್‌ 3ನೇ ಸ್ಥಾನದಲ್ಲಿ, ಹರ್ಭಜನ್ ಸಿಂಗ್ 5ನೇ ಸ್ಥಾನದಲ್ಲಿ ಮತ್ತು ವೀರೇಂದ್ರ ಸೆಹ್ವಾಗ್ 6ನೇ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಸಕ್ರಿಯ ಅಭಿಮಾನಿಗಳು ಮತ್ತು ಫಾಲೋವರ್ಸ್ ಜೊತೆ 1.5 ಮಿಲಿಯನ್+ ಎಂಗೇಜ್ಮೆಂಟ್ ತಂದಿದ್ದಾರೆ,' ಎಂದು ಟ್ವಿಟ್ವೀಟ್ ಮಾಹಿತಿ ನೀಡಿದೆ.

Story first published: Tuesday, November 24, 2020, 19:04 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X