ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಟ್ರೋಲ್ ಮಾಡಿದ ವಿರಾಟ್ ಕೊಹ್ಲಿ

Virat Kohli trolls Cheteshwar Pujara with throwback picture

ನವದೆಹಲಿ, ಮೇ 6: ಟೆಸ್ಟ್ ಪಂದ್ಯವೊಂದರ ಹಳೆ ಫೋಟೋವನ್ನು ಬಳಸಿಕೊಂಡು ಭಾರತದ ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಕಾಲೆಳೆಯಲು ನಾಯಕ ವಿರಾಟ್ ಕೊಹ್ಲಿ ತೀರ್ಮಾನಿಸಿದಂತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ, ಪೂಜಾರ ಟ್ರೋಲ್ ಮಾಡಲು ಯತ್ನಿಸಿದ್ದರೆ, ಪೂಜಾರ ಅಷ್ಟೇ ಚಂದವಾಗಿ ಕೊಹ್ಲಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳುಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ನಿಸ್ವಾರ್ಥ ಆಟಗಳು

ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋ ಶೇರ್ ಮಾಡಿದ್ದ ಕೊಹ್ಲಿ ಅದರ ಜೊತೆಗೆ, 'ಲಾಕ್‌ಡೌನ್ ಮುಗಿದ ಮೇಲೆ ಫಸ್ಟ್ ಸೆಶನ್‌ನಲ್ಲಿ ಪೂಜಾರ ಅವರಂಥ ಸ್ಥಿತಿ ನಮ್ಮದಾಗುತ್ತದೆ. ಪೂಜಾರ ಅವರೆ ನೀವು ಹೀಗೆ ಸುಮ್ಮನೆ ನೋಡದೆ, ಚೆಂಡು ಹಿಡಿಯಲು ಹೋಗುತ್ತೀರಿ ಎಂದು ನಾನು ಭಾವಿಸುತ್ತೇನೆ,' ಎಂದು ತಮಾಷೆಯಾಗಿ ಸಾಲು ಬರೆದುಕೊಂಡಿದ್ದರು.

ಕೊಹ್ಲಿಗೆ ಹೋಲಿಸಿ ಪಾಕ್ ಕ್ರಿಕೆಟರ್ ಬಾಬರ್ ಅಜಂ ಬ್ಯಾಟಿಂಗ್ ಶೈಲಿ ಹೊಗಳಿದ ಟಾಮ್ ಮೂಡಿಕೊಹ್ಲಿಗೆ ಹೋಲಿಸಿ ಪಾಕ್ ಕ್ರಿಕೆಟರ್ ಬಾಬರ್ ಅಜಂ ಬ್ಯಾಟಿಂಗ್ ಶೈಲಿ ಹೊಗಳಿದ ಟಾಮ್ ಮೂಡಿ

ಸೆಕೆಂಡ್ ಸ್ಲಿಪ್ ಫೀಲ್ಡರ್ ಜಾಗದಲ್ಲಿದ್ದ ಕೊಹ್ಲಿ ಒಂದು ಅದ್ಭುತ ಕ್ಯಾಪ್ ಪಡೆಯುತ್ತಿರುವಾಗ ಸ್ವಲ್ಪದೂರದಲ್ಲಿ ಫಸ್ಟ್ ಸ್ಲಿಪ್‌ ಫೀಲ್ಡರ್ ಜಾಗದಲ್ಲಿದ್ದ ಪೂಜಾರ ಕೊಹ್ಲಿಯನ್ನೇ ದಿಟ್ಟಿಸುತ್ತಿರುವ ಚಿತ್ರಣ, ವಿರಾಟ್ ಹಂಚಿಕೊಂಡಿರುವ ಫೋಟೋದಲ್ಲಿತ್ತು. ಕೊಹ್ಲಿ ಈ ಚಿತ್ರಕ್ಕೆ ಪೂಜಾರ ಕೂಡ ರಿಪ್ಲೆ ಮಾಡಿದ್ದಾರೆ.

ಪ್ರೀತಿಯ ನಾಯಿಯ ಸಾವಿಗೆ ಭಾವನಾತ್ಮಕ ಸಂದೇಶ ಬರೆದ ವಿರಾಟ್ ಕೊಹ್ಲಿಪ್ರೀತಿಯ ನಾಯಿಯ ಸಾವಿಗೆ ಭಾವನಾತ್ಮಕ ಸಂದೇಶ ಬರೆದ ವಿರಾಟ್ ಕೊಹ್ಲಿ

ಕೊಹ್ಲಿ ತರಲೆಗೆ, 'ಹೌದು ಕ್ಯಾಪ್ಟನ್, ನಾನದನ್ನು ಎರಡೂ ಕೈಗಳಲ್ಲೂ ಕ್ಯಾಚ್ ಮಾಡುತ್ತಿದ್ದೆ,' ಎಂದು ಪೂಜಾರ ತಮಾಷೆಯಾಗಿ ರಿಪ್ಲೆ ಮಾಡಿದ್ದಾರೆ. ಕೊರೊನಾವೈರಸ್ ಕಾರಣ ಕ್ರಿಕೆಟ್ ಪಂದ್ಯಗಳು ನಿಲುಗಡೆಯಾಗಿರುವುದರಿಂದ ವಿರಾಟ್ ಮತ್ತು ಪೂಜಾರ ಇಬ್ಬರೂ ತಮ್ಮ ಕುಟುಂಬದ ಜೊತೆ ಬಿಡುವಿನ ವೇಳೆ ಕಳೆಯುತ್ತಿದ್ದಾರೆ.

Story first published: Wednesday, May 6, 2020, 16:28 [IST]
Other articles published on May 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X