ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ನಾಯಕನಿಗೆ ಸಂಕಷ್ಟ: ಕೊಹ್ಲಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು

Virat Kohli Under The Scanner For Conflict Of Interest, Confirms Dk Jain

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ಈಗ ಸ್ವಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬಂದಿದೆ. ಮಧ್ಯಪ್ರದೇಶ ಕ್ರಿಕೆಟ್‌ ಮಂಡಳಿಯ ಸದಸ್ಯ ಸಂಜೀವ್‌ ಗುಪ್ತಾ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ವಿರುದ್ಧ ಸ್ವಹಿತಾಸಕ್ತಿ ಸಂಘರ್ಷ ದೂರು ದಾಖಲಿಸಿದ್ದಾರೆ.

ಟೀಮ್ ಇಂಡಿಯಾ ನಾಯಕನಾಗಿರುವ ವಿರಾಟ್ ಕೊಹ್ಲಿ ಏಕ ಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ಹುದ್ದೆ ನಿಭಾಯಿಸುತ್ತಿದ್ದಾರೆ ಎ೦ಬುದು ಆರೋಪವಾಗಿದೆ. ಈ ಹಿಂದೆ ದಿಗ್ಗಜ ಆಟಗಾರರ ವಿರುದ್ಧ ದೂರು ನೀಡಿದ್ದ ಮಧ್ಯಪ್ರದೇಶ ಕ್ರಿಕಟ್ ಸಂಸ್ಥೆಯ ಸದಸ್ಯ ಸಂಜೀವ್ ಗುಪ್ತಾ ಈಗ ಕೊಹ್ಲಿ ವಿರುದ್ಧವೂ ಬಿಸಿಸಿಐ ಎಥಿಕ್ಸ್ ಅಧಿಕಾರಿ ಡಿಕೆ ಜೈನ್​ಗೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ.

ಪಾಕ್ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ ಆಟಗಾರರು ಕ್ಷಮೆ ಕೇಳುತ್ತಿದ್ದರು: ಶಾಹಿದ್ ಅಫ್ರಿದಿಪಾಕ್ ವಿರುದ್ಧ ಸೋತ ನಂತರ ಟೀಮ್ ಇಂಡಿಯಾ ಆಟಗಾರರು ಕ್ಷಮೆ ಕೇಳುತ್ತಿದ್ದರು: ಶಾಹಿದ್ ಅಫ್ರಿದಿ

ಸುಪ್ರೀಂ ಕೋರ್ಟ್ ಅಂಗೀಕರಿಸಿರುವ ಲೋಧಾ ಸಮಿತಿಯ ಶಿಫಾರಸುಗಳ ಅನ್ವಯ ಯಾವುದೇ ವ್ಯಕ್ತಿ ಏಕಕಾಲದಲ್ಲಿ 2 ಹುದ್ದೆಗಳನ್ನು ಅಲಂಕರಿಸುವಂತಿಲ್ಲ. ಆದರೆ ವಿರಾಟ್ ಕೊಹ್ಲಿ 2 ಹುದ್ದೆಗಳಲ್ಲಿದ್ದಾರೆ. ಇದು ಬಿಸಿಸಿಐ ನಿಯಮ 38(4)ರ ಉಲ್ಲಂಘನೆಯಾಗಿದೆ ಎಂದು ಸಂಜೀವ್ ಗುಪ್ತಾ ದೂರಿದ್ದಾರೆ.

ವಿರಾಟ್‌ ಕೊಹ್ಲಿ ಭಾರತ ತಂಡದ ನಾಯಕತ್ವದ ಜತೆಗೆ ಸಾಹಸೋದ್ಯಮ ಸಂಸ್ಥೆಯೊಂದರ ನಿರ್ದೇಶಕರಾಗಿಯೂ ಕರ್ತವ್ಯ ನಿಭಾಯಿಸುತ್ತಿದ್ದಾರೆ ಎಂದು ಗುಪ್ತಾ ತಮ್ಮ ದೂರಿನಲ್ಲಿ ದಾಖಲಿಸಿದ್ದಾರೆ. ಬಿಸಿಸಿಐ ನೈತಿಕ ಅಧಿಕಾರಿ ಡಿ.ಕೆ. ಜೈನ್‌ ರವಿವಾರ ಇದನ್ನು ಖಚಿತಪಡಿಸಿದ್ದು, ದೂರನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಅಪಘಾತ ಪ್ರಕರಣದಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಸಲ್ ಮೆಂಡಿಸ್ ಬಂಧನಅಪಘಾತ ಪ್ರಕರಣದಲ್ಲಿ ಶ್ರೀಲಂಕಾದ ಕ್ರಿಕೆಟಿಗ ಕುಸಲ್ ಮೆಂಡಿಸ್ ಬಂಧನ

ಸಂಜೀವ್ ಗುಪ್ತಾ ಮಾಡಿದ ಈ ಆರೋಪಕ್ಕೆ ವಿರಾಟ್ ಕೊಹ್ಲಿ ಆಪ್ತ ಮೂಲಗಳು ಪ್ರತಿಕ್ರಿಯಿಸಿದ್ದು ಇದೊಂದು ಪ್ರಚಾರ ಪಡೆಯುವ ತಂತ್ರ. ಕ್ರಿಕೆಟ್ ಹಿತ ದೃಷ್ಟಿಯಿಂದ ಇಂತಾ ದೂರುಗಳು ಉತ್ತಮವಲ್ಲ ಎಂದಿದ್ದಾರೆ. ಬಿಸಿಸಿಐ ಅಧಿಕಾರಿಯೊಬ್ಬರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಈ ದೂರು, ಆಟಗಾರರ ಹೆಸರು ಕೆಡಿಸುವ ಪ್ರಯತ್ನವಾಗಿದೆ. ಬ್ಲ್ಯಾಕ್​ವೆುೕಲ್ ತಂತ್ರಗಳ ಭಾಗವೂ ಆಗಿದೆ ಎಂದು ಟೀಕಿಸಿದ್ದಾರೆ.

Story first published: Monday, July 6, 2020, 16:12 [IST]
Other articles published on Jul 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X