ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಸದ್ಯದಲ್ಲೇ ವಿಶ್ವಕಪ್ ಎತ್ತಿ ಹಿಡಿಯಲಿದ್ದಾರೆ : ಹರ್ಭಜನ್ ಸಿಂಗ್

Virat Kohli very near to lift a ICC trophy as captain, says Harbhajan Singh

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಯಕತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ರಾಷ್ಟ್ರೀಯ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದರೂ ಐಪಿಎಲ್‌ನಲ್ಲಿ ಕೊಹ್ಲಿ ಮುನ್ನಡೆಸುತ್ತಿರುವ ತಂಡದ ಸತತ ವೈಫಲ್ಯವನ್ನು ಮುಂದಿಟ್ಟು ಕೊಹ್ಲಿ ನಾಯಕತ್ವದ ಸಾಮರ್ಥ್ಯವನ್ನು ಪ್ರಶ್ನಿಸಲಾಗುತ್ತಿದೆ. ಜೊತೆಗೆ ಐಸಿಸಿ ಟೂರ್ನಮೆಂಟ್‌ಗಳಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಉತ್ತಮ ಪ್ರದರ್ಶನಗಳು ಹೊರಬಾರದಿರುವುದು ಟೀಕೆಗೆ ಗುರಿಯಾಗಿದೆ

ಆದರೆ ಟೀಮ್ ಇಂಡಿಯಾದ ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್ ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ವಿಶ್ವಾಸದ ಮಾತುಗಳನ್ನು ಆಡಿದ್ದಾರೆ. ವಿರಾಟ್ ಕೊಹ್ಲಿ ಅತಿ ಶೀಘ್ರದಲ್ಲಿ ವಿಶ್ವಕಪ್ ಎತ್ತಿಹಿಡಿಯುವ ನಾಯಕನಾಗಲಿದ್ದಾರೆ ಎಂಬ ಮಾತನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದಾರೆ.

ಯಾವುದೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಬ್ಯಾಟಿಂಗ್‌ಗೆ ಸಿದ್ಧ: ರೋಹಿತ್ ಶರ್ಮಾಯಾವುದೇ ಕ್ರಮಾಂಕದಲ್ಲಿ ಅವಕಾಶ ನೀಡಿದರೂ ಬ್ಯಾಟಿಂಗ್‌ಗೆ ಸಿದ್ಧ: ರೋಹಿತ್ ಶರ್ಮಾ

ಪ್ರತಿ ನಾಯಕನಿಗೂ ಕನಸು

ಪ್ರತಿ ನಾಯಕನಿಗೂ ಕನಸು

ಪ್ರತಿಯೊಬ್ಬ ನಾಯಕನೂ ಈ ಸಾಧನೆಯನ್ನು ಮಾಡಲು ಕಾತುರನಾಗಿರುತ್ತಾನೆ. 2021ರ ವಿಶ್ವಕಪ್‌ನಲ್ಲಿ ಗೆಲುವು ಸಾಧಿಸುವುದು ಅದ್ಭುತವಾಗಿರಲಿದೆ ಎಮದು ಹರ್ಭಜನ್ ಸಿಂಗ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಕೊಹ್ಲಿ ಈಗಾಗಲೇ ದೊಡ್ಡ ಆಟಗಾರ

ಕೊಹ್ಲಿ ಈಗಾಗಲೇ ದೊಡ್ಡ ಆಟಗಾರ

ಈ ಸಾಧನೆ ವಿರಾಟ್ ಕೊಹ್ಲಿಯನ್ನು ಎತ್ತರಕ್ಕೇರಿಸುವುದಿಲ್ಲ. ಯಾಕೆಂದರೆ ವಿರಾಟ್ ಕೊಹ್ಲಿ ಈಗಾಗಲೇ ದೊಡ್ಡ ಆಟಗಾರನಾಗಿದ್ದಾರೆ. ಆದರೆ ಇದು ಆ ಆಟಗಾರನ ಸಾಧನೆಯ ಹಾದಿಗೆ ಮತ್ತೊಂದು ಸಾಧನೆಯಾಗಿ ಸೇರಿಕೊಳ್ಳಲಿದೆ. ವಿಶ್ವಕಪ್ ವಿಜೇತ ನಾಯಕ ಎಂಬ ಹೆಗ್ಗಳಿಕೆಗೆ ಕಾರಣವಾಗಲಿದೆ ಎಂದು ಹರ್ಭಜನ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ.

ವಿಶ್ವಕಪ್ ಎತ್ತಿಹಿಡಿಯುವ ಕಾಲ ಸನಿಹದಲ್ಲಿದೆ

ವಿಶ್ವಕಪ್ ಎತ್ತಿಹಿಡಿಯುವ ಕಾಲ ಸನಿಹದಲ್ಲಿದೆ

"ಈ ತೆರನಾದ ಅತ್ಯುತ್ತಮ ತಂಡವನ್ನು ಹೊಂದಿರುವಾಗ ಟ್ರೋಫಿಯಿಲ್ಲದೆ ವಿರಾಟ್ ಕೊಹ್ಲಿ ತೆರಳುತ್ತಾರೆ ಎನಿಸುವುದಿಲ್ಲ. ವಿಶ್ವಕಪ್‌ಅನ್ನು ಎತ್ತಿಹಿಡಿಯುವ ಕಾಲ ತುಂಬಾ ಸನಿಹದಲ್ಲಿದೆ. ಅದು ಮುಂದಿನ ಟಿ20 ವಿಶ್ವಕಪ್ ಆಗಿರಬಹುದು ಅಥವಾ ಅದರ ನಂತರದ್ದಾಗಿರಬಹುದು" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಮುಂದಿನ ವಿಶ್ವಕ್ ಭಾರತದಲ್ಲಿ

ಮುಂದಿನ ವಿಶ್ವಕ್ ಭಾರತದಲ್ಲಿ

2021ರ ಟ20 ವಿಶ್ವಕಪ್ ಪಂದ್ಯಾವಳಿ ಭಾರತದಲ್ಲೇ ನಡೆಯಲಿದೆ. ಮುಂದಿನ ಅಕ್ಟೋಬರ್ ನವೆಂಬರ್ ತಿಂಗಳಲ್ಲಿ ಈ ವಿಶ್ವಕಪ್ ಆಯೋಜನೆಯಾಗಲಿದೆ. ಈ ತಿಂಗಳಾರಂಭದಲ್ಲಿ ವಿಶ್ವಕಪ್ ಟ್ರೋಫಿ ಅನಾವರಣ ಕಾರ್ಯಕ್ರಮ ನಡೆಯಿತು. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ರೋಫಿಯನ್ನು ಅನಾವರಣಗೊಳಿಸಿದರು.

Story first published: Monday, November 23, 2020, 13:45 [IST]
Other articles published on Nov 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X