ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ vs ರೋಹಿತ್ ಶರ್ಮಾ: ಭಾರತದ ನಾಯಕರಾಗಿ ಯಾರು ಮೇಲು ಗೊತ್ತಾ?!

Virat Kohli vs Rohit Sharma: Highest Win Percentage by Indian Captains-detail
ಲ್ಲಾ ವಿಚಾರದಲ್ಲೂ ವಿರಾಟ್ ಗಿಂತ ರೋಹಿತ್ ಬೆಸ್ಟ್ ಅನ್ನೋದು ಸಾಭೀತಾಯ್ತು

ಬೆಂಗಳೂರು: ಈಚಿನ ದಿನಗಳಲ್ಲಿ ಭಾರತ ತಂಡ ಪ್ರಮುಖ ಪಂದ್ಯಗಳಲ್ಲಿ ಸೋತಾಗೆಲ್ಲ ತಂಡದ ನಾಯಕತ್ವದ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದೆ. ಮುಖ್ಯವಾಗಿ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತ ಸೋತರೆ ತಂಡದ ನಾಯಕತ್ವ ಸರಿಯಿಲ್ಲ, ವಿರಾಟ್ ಕೊಹ್ಲಿಯನ್ನು ಬದಲಿಸಬೇಕು ಎಂದು ಕ್ರಿಕೆಟ್‌ ವಲಯ ಮಾತನಾಡಿಕೊಳ್ಳುತ್ತಿರುತ್ತದೆ. ಹೆಚ್ಚಿನವರು ಸೀಮಿತ ಓವರ್‌ನಲ್ಲಿ ರೋಹಿತ್ ಶರ್ಮಾ ನಾಯಕರಾಗೋದನ್ನು ಬಯಸುತ್ತಿದ್ದಾರೆ.

ಭಾರತ vs ಶ್ರೀಲಂಕಾ: ಶಿಖರ್ ಧವನ್ XI ವಿರುದ್ಧ ಭುವನೇಶ್ವರ್ ಕುಮಾರ್ XIಗೆ ಜಯಭಾರತ vs ಶ್ರೀಲಂಕಾ: ಶಿಖರ್ ಧವನ್ XI ವಿರುದ್ಧ ಭುವನೇಶ್ವರ್ ಕುಮಾರ್ XIಗೆ ಜಯ

ಭಾರತಕ್ಕೆ ಎರಡು ವಿಶ್ವಕಪ್‌ ಸಹಿತ ಪ್ರಮುಖ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಹಿರಿಮೆ ಮಾಜಿ ನಾಯಕ ಎಂಎಸ್ ಧೋನಿ ಅವರದ್ದು. ವಿರಾಟ್ ಕೊಹ್ಲಿ ಅವಧಿಯಲ್ಲಿ ಭಾರತ ಪ್ರಮುಖ ಟ್ರೋಫಿಗಳನ್ನು ಗೆದ್ದಿಲ್ಲ. ಆದರೆ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಬಲಿಷ್ಠ ತಂಡವಾಗಿ ಗುರುತಿಸಿಕೊಳ್ಳುವಲ್ಲಿ ವಿರಾಟ್ ಕೊಡುಗೆ ಬಹಳ ಇದೆ.

ಕೊಹ್ಲಿ vs ರೋಹಿತ್‌, ಯಾರು ಮೇಲು?

ಕೊಹ್ಲಿ vs ರೋಹಿತ್‌, ಯಾರು ಮೇಲು?

ಭಾರತ ತಂಡಕ್ಕೆ ನಾಯಕರಾಗಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಅಂಕಿ ಅಂಶಗಳನ್ನು ಗಮನಿಸಿದರೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರಲ್ಲಿ ರೋಹಿತ್ ಶರ್ಮಾ ಕೊಂಚ ಹೆಚ್ಚು ಎತ್ತರದಲ್ಲಿ ನಿಲ್ಲುತ್ತಿದ್ದಾರೆ. ರೋಹಿತ್‌ಗೆ ತಂಡ ಮುನ್ನಡೆಸಲು ಸಿಕ್ಕಿರುವ ಅವಕಾಶಗಳು ಕಡಿಮೆ. ಅದರೆ ಐಪಿಎಲ್‌ನಲ್ಲಿ ರೋಹಿತ್ ನಾಯಕತ್ವದ ಮುಂಬೈ ಇಂಡಿಯನ್ಸ್‌ ಯಶಸ್ವಿ ತಂಡವೆನಿಸಿರುವುದರಿಂದ ಟಿ20 ಕ್ರಿಕೆಟ್‌ಗಾದರೂ ರೋಹಿತ್ ನಾಯಕರಾದರೆ ಚೆನ್ನ ಎಂದು ಕೆಲ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ ಮೊದಲಿನಿಂದಲೂ ಮೂರೂ ಮಾದರಿಗೂ ಏಕ ನಾಯಕ ಸಂಪ್ರದಾಯವಿದೆ. ಅದನ್ನೇ ಮುಂದುವರೆಸಬೇಕು ಅನ್ನೋದು ಇನ್ನು ಕೆಲವರ ವಾದ.

ಟಿ20ಐ ಕ್ರಿಕೆಟ್‌ ಮಾದರಿ

ಟಿ20ಐ ಕ್ರಿಕೆಟ್‌ ಮಾದರಿ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇವರಲ್ಲಿ ಭಾರತೀಯ ತಂಡಕ್ಕೆ ಟಿ20ಐನಲ್ಲಿ ನಾಯಕರಾಗಿ ಹೆಚ್ಚು ಪಂದ್ಯಗಳನ್ನು ಗೆಲ್ಲಿಸಿದ ಶೇಕಡಾವಾರಿನಲ್ಲಿ ರೋಹಿತ್ ಮೇಲೆ ನಿಲ್ಲುತ್ತಾರೆ. ರೋಹಿತ್ ನಾಯಕತ್ವದಲ್ಲಿ ಭಾರತ 19 ಪಂದ್ಯಗಳನ್ನಾಡಿದ್ದು ಇದರಲ್ಲಿ ತಂಡ 15 ಗೆಲುವು, 4 ಸೋಲಿನೊಂದಿಗೆ ಗೆಲುವಿನ ಶೇಕಡಾದಲ್ಲಿ 78.94 ಅಂಕ ಪಡೆದುಕೊಂಡಿದೆ. ಅದೇ ವಿರಾಟ್ ನಾಯಕತ್ವದಲ್ಲಿ ಭಾರತ 45 ಟಿ20 ಪಂದ್ಯಗಳನ್ನಾಡಿದ್ದು ಇದರಲ್ಲಿ 27 ಪಂದ್ಯ ಗೆದ್ದಿದೆ, 14 ಪಂದ್ಯದಲ್ಲಿ ಸೋಲು, 2 ಟೈ, 2 ಪಂದ್ಯ ಫಲಿತಾಂಶವಿಲ್ಲ. ಕೊಹ್ಲಿ ಗೆಲುವಿನ ಶೇಕಡವಾರು 65.11 ಇದೆ.

ಏಕದಿನ ಕ್ರಿಕೆಟ್‌ನಲ್ಲಿ ಅಂಕಿ-ಅಂಶ

ಏಕದಿನ ಕ್ರಿಕೆಟ್‌ನಲ್ಲಿ ಅಂಕಿ-ಅಂಶ

ಏಕದಿನ ಕ್ರಿಕೆಟ್‌ನಲ್ಲಿ ನಾಯಕರಾಗಿ ಸೋಲು ಗೆಲುವಿನ ಅಂಕಿ-ಅಂಶ ತೆಗೆದರೆ, ರೋಹಿತ್ ನಾಯಕತ್ವದಲ್ಲಿ ಭಾರತ 10 ಪಂದ್ಯಗಳನ್ನಾಡಿದ್ದು ಇದರಲ್ಲಿ 8ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಸೋತಿದೆ. ರೋಹಿತ್ ಗೆಲುವಿನ ಶೇಕಡಾ 80.00 ಇದೆ. ವಿರಾಟ್ ನಾಯಕತ್ವದಲ್ಲಿ ಭಾರತ 95 ಪಂದ್ಯಗಳನ್ನಾಡಿದೆ, ಇದರಲ್ಲಿ 65 ಪಂದ್ಯಗಳನ್ನು ಗೆದ್ದು 27 ಪಂದ್ಯಗಳನ್ನು ಸೋತಿದೆ. ಇನ್ನು 1 ಪಂದ್ಯ ಟೈ ಎನಿಸಿದ್ದು 2 ಫಲಿತಾಂಶ ಬಂದಿರಲಿಲ್ಲ. ಏಕದಿನದಲ್ಲಿ ಕೊಹ್ಲಿ ಗೆಲುವಿನ ಶೇ. 70.43 ಇದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋಹಿತ್ ಒಂದು ಪಂದ್ಯಕ್ಕೂ ನಾಯಕತ್ವ ವಹಿಸಿಲ್ಲ.

Story first published: Wednesday, July 7, 2021, 10:07 [IST]
Other articles published on Jul 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X