ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಡಬೇಡಿ ಎಂದು ಕೊಹ್ಲಿ ಸಲಹೆ ನೀಡಿದ್ದು ಯಾರಿಗೆ?

Virat Kohli wants pacers to skip IPL 2019

ಬೆಂಗಳೂರು, ನವೆಂಬರ್ 08: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಭಾರತದ ಪ್ರಮುಖ ವೇಗಿಗಳಾದ ಜಸ್ ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ್ ಕುಮಾರ್ ಅವರಿಗೆ ಮಹತ್ವದ ಸಲಹೆ ನೀಡಿದ್ದಾರೆ. ಐಸಿಸಿ ವಿಶ್ವಕಪ್ 2019ನಲ್ಲಿ ಆಡುವ ಹಿತದೃಷ್ಟಿಯಿಂದ ನೀವಿಬ್ಬರು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 2019ರಲ್ಲಿ ಆಡದಿರುವುದು ಒಳ್ಳೆಯದು ಎಂದಿದ್ದಾರೆ.

2019ರ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಐಪಿಎಲ್ ಪಂದ್ಯಾವಳಿಗಳು ನಿಗದಿಯಾಗಿವೆ. ವಿಶ್ವಕಪ್ 2019 ಈ ಬಾರಿ ಇಂಗ್ಲೆಂಡ್ ನಲ್ಲಿ ನಡೆಯಲಿದ್ದು ಮೇ30ರಿಂದ ಆರಂಭಗೊಳ್ಳಲಿದೆ.

ಭಾರತ ವಿರುದ್ಧ ಸರಣಿಗೂ ಮುನ್ನ ಪ್ರಮುಖ ಆಟಗಾರರಿಗೆ ಕೊಕ್ ಭಾರತ ವಿರುದ್ಧ ಸರಣಿಗೂ ಮುನ್ನ ಪ್ರಮುಖ ಆಟಗಾರರಿಗೆ ಕೊಕ್

ಇಂಡಿಯನ್ ಎಕ್ಸ್ ಪ್ರೆಸ್ ವರದಿಯಂತೆ, ಇತ್ತೀಚೆಗೆ ಕ್ರಿಕೆಟ್ ಆಡಳಿತ ಸಮಿತಿ(ಸಿಒಎ) ಜತೆ ನಡೆದ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಕೊಹ್ಲಿ, ಪ್ರಮುಖ ವೇಗಿಗಳಿಗೆ ವಿಶ್ರಾಂತಿ ನೀಡುವುದು ಅಗತ್ಯ. ವಿಶ್ವಕಪ್ ಗೆ ಸಿದ್ಧಗೊಳ್ಳಬೇಕಿದೆ ಎಂದಿದ್ದಾರೆ. ಕೋಚ್ ರವಿಶಾಸ್ತ್ರಿ, ಉಪ ನಾಯಕ ರೋಹಿತ್ ಶರ್ಮ, ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ ಕೆ ಪ್ರಸಾದ್, ಹಿರಿಯ ಆಟಗಾರ ಅಜಿಂಕ್ಯ ರಹಾನೆ, ಸಿಒಎ ಮುಖ್ಯಸ್ಥ ವಿನೋದ್ ರೈ, ಸದಸ್ಯೆ ಡಯಾನಾ ಎಡುಲ್ಜಿ ಅವರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ ಭಾರತದಲ್ಲಿ ಏಕಿದ್ದೀರಾ? ಬೇರೆ ದೇಶಕ್ಕೆ ಹೋಗಿ: ಕೊಹ್ಲಿ ಮಾತಿಗೆ ಟ್ವಿಟ್ಟಿಗರ ಆಕ್ರೋಶ

ಒಂದು ವೇಳೆ ಐಪಿಎಲ್ ಆಡಲೇಬೇಕು ಎಂದು ಆಟಗಾರರು ಹಾಗೂ ಫ್ರಾಂಚೈಸಿಯಿಂದ ಒತ್ತಡ ಬಂದರೆ 8 ರಿಂದ 10 ಪಂದ್ಯಗಳನ್ನು ಮಾತ್ರ ಆಡಿಸಲು ಬಿಸಿಸಿಐ ಮುಂದಾಗಬೇಕು. ಈ ಬಗ್ಗೆ ಫ್ರಾಂಚೈಸಿಗಳ ಅಭಿಪ್ರಾಯವನ್ನು ಸಂಗ್ರಹಿಸಿ, ಮುಂದಿನ ನಿರ್ಧಾರ ಕೈಗೊಳ್ಳಿ ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.

ಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆ ಒಂದೇ ಓವರ್‌ನಲ್ಲಿ 43 ರನ್!: ಲಿಸ್ಟ್ ಎ ಕ್ರಿಕಟ್‌ನಲ್ಲಿ ವಿಶ್ವದಾಖಲೆ

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾದ ಆಟಗಾರರು ಕೂಡಾ ಈ ಬಾರಿ ಐಪಿಎಲ್ ನಲ್ಲಿ ಹೆಚ್ಚು ಕಡಿಮೆ ಆಡುವುದು ಅನುಮಾನವಾಗಿದೆ. ಎಲ್ಲರೂ ವಿಶ್ವಕಪ್ 2019ಕ್ಕಾಗಿ ಅಣಿಯಾಗುತ್ತಿದ್ದಾರೆ. ಐಪಿಎಲ್ 2019ರ ಹರಾಜು ಪ್ರಕ್ರಿಯೆ ಈ ಬಾರಿ ಜೈಪುರದಲ್ಲಿ ಡಿಸೆಂಬರ್ ನಲ್ಲಿ ನಡೆಯಲಿದೆ.

Story first published: Thursday, November 8, 2018, 14:01 [IST]
Other articles published on Nov 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X