ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಉರಿಸುತ್ತಿದ್ದರು ಎಂದ ಬಾಂಗ್ಲಾ ಕ್ರಿಕೆಟಿಗ!

Virat Kohli was sledging our batsmen: Rubel Hossain recalled U19 days

ಧಾಕಾ, ಮೇ 11: ಬಾಂಗ್ಲಾದೇಶದ ವೇಗಿ ರುಬೆಲ್ ಹೊಸೇನ್ ಮತ್ತು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಧ್ಯೆ ಇತ್ತಂಡಗಳ ಪಂದ್ಯಗಳಿದ್ದಾಗ ಆಗಾಗ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿರುತ್ತದೆ. ಒಮ್ಮೊಮ್ಮೆ ಕೊಹ್ಲಿ, ರುಬೆಲ್ ಎಸೆತಕ್ಕೆ ಬೌಂಡರಿ ಚಚ್ಚಿ ಪ್ರತೀಕಾರ ತೀರಿಸಿದರೆ, ಇನ್ನೊಮ್ಮೆ ರುಬೆಲ್ ಕೊಹ್ಲಿಯ ವಿಕೆಟ್ ಮುರಿದು ಕೊಂಚ ಹೆಚ್ಚೇ ಎನ್ನುವಂತೆ ಸಂಭ್ರಮ ಆಚರಿಸುತ್ತಾರೆ, ಕೊಹ್ಲಿಗೆ ಉರಿಸುತ್ತಾರೆ. ಇಬ್ಬರ ಮಧ್ಯೆ ಅಷ್ಟರ ಮಟ್ಟಿಗಿನ ವೈರತ್ವ ಆಟದ ವೇಳೆ ಇಬ್ಬರ ಮಧ್ಯೆ ಕಾಣಿಸುತ್ತದೆ.

ಜಸ್ಪ್ರೀತ್ ಬೂಮ್ರಾಗೆ ಅಮೂಲ್ಯ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್ಜಸ್ಪ್ರೀತ್ ಬೂಮ್ರಾಗೆ ಅಮೂಲ್ಯ ಸಲಹೆ ನೀಡಿದ ಪಾಕ್ ಮಾಜಿ ಕ್ರಿಕೆಟಿಗ ವಾಸಿಮ್ ಅಕ್ರಮ್

ಬಾಂಗ್ಲಾದೇಶ-ಭಾರತದ ತಂಡಗಳ ಮಧ್ಯೆ ಪಂದ್ಯವಿದ್ದಾಗ ಕೊಹ್ಲಿ ಮತ್ತು ರುಬೆಲ್ ಹೊಸೇನ್ ನಡುವೆ ಅಷ್ಟು ಹಗೆತನ ಯಾಕಿತ್ತು?, ಅದರ ಹಿಂದಿನ ಕಾರಣವೇನು ಎಂಬುದರ ಬಗ್ಗೆ ರುಬೆಲ್ ಅವರೇ ತುಟಿ ಬಿಚ್ಚಿದ್ದಾರೆ! ಇಬ್ಬರು ಕ್ರಿಕೆಟಿಗರ ಮಧ್ಯೆ ಮೈದಾನದಲ್ಲಿನ ಈ ಹಗೆತನ ಶುರುವಾಗಿದ್ದು ಅಂಡರ್ -19 ದಿನಗಳಿಂದ ಎಂದು ರುಬೆಲ್ ಹೇಳಿಕೊಂಡಿದ್ದಾರೆ.

ಸಿಎಸ್‌ಕೆ-ಎಂಐ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ಆಶಿಷ್ ನೆಹ್ರಾ!ಸಿಎಸ್‌ಕೆ-ಎಂಐ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ಆಶಿಷ್ ನೆಹ್ರಾ!

ಕೊಹ್ಲಿ ಮತ್ತು ತಾನು ಬದ್ಧ ಎದುರಾಳಿಗಳಾಗಿ ಬದಲಾಗಿರುವುದನ್ನು ಒಪ್ಪಿಕೊಂಡಿರುವ ರುಬೆಲ್, ಈ ವೈಷಮ್ಯ ಶುರುವಾಗಿದ್ದು 2008ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಅಂಡರ್-19 ತ್ರಿಕೋನ ಸರಣಿಯಿಂದ ಎಂದಿದ್ದಾರೆ.

ಆವತ್ತಿನಿಂದಲೂ ಇದು ನಡೆಯುತ್ತಿದೆ

ಆವತ್ತಿನಿಂದಲೂ ಇದು ನಡೆಯುತ್ತಿದೆ

'ಅಂಡರ್ 19 ದಿನಗಳಿಂದಲೂ ನಾನು ಕೊಹ್ಲಿ ವಿರುದ್ಧ ಆಡುತ್ತಿದ್ದೇನೆ. ಈ ಹಗೆತನ ನನಗೆ ಅಂಡರ್ 19 ದಿನಗಳಿಂದಲೇ ಶುರುವಾಯಿತು. ಅಂಡರ್-19 ದಿನಗಳಲ್ಲಿ ಕೊಹ್ಲಿ ನಮ್ಮನ್ನು ಭಾರೀ ತಮಾಷೆ ಮಾಡುತ್ತಿದ್ದರು, ನಿಂದಿಸುತ್ತಿದ್ದರು, ಉರಿಸುತ್ತಿದ್ದರು. ಈಗ ನಮ್ಮ ಮಧ್ಯೆ ಅಷ್ಟು ಎದುರಾಳಿತ್ವ ಇಲ್ಲ. ಆದರೆ ಆ ದಿನಗಳಲ್ಲಿ ತುಂಬಾ ಇತ್ತು,' ಎಂದು ಹೊಸೇನ್ ಹೇಳಿದ್ದಾರೆ.

ಕೊಹ್ಲಿ-ರುಬೆಲ್ ಕಿತ್ತಾಡಿಕೊಂಡಿದ್ದು

ಕೊಹ್ಲಿ-ರುಬೆಲ್ ಕಿತ್ತಾಡಿಕೊಂಡಿದ್ದು

2015ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಕೊಹ್ಲಿ ವಿಕೆಟ್ ಲಭಿಸಿದಾಗ ರುಬೆಲ್ ಕೊಂಚ ಓವರ್‌ ಆಗಿಯೇ ಸೆಲೆಬ್ರೇಟ್ ಮಾಡಿದ್ದರು. ಅಷ್ಟೇ ಅಲ್ಲ, 2011ರ ವಿಶ್ವಕಪ್ ವೇಳೆಯೂ ಕೊಹ್ಲಿ ಮತ್ತು ರುಬೆಲ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಇನ್ನು ರುಬೆಲ್ ಅವರೇ ಹೇಳಿದಂತೆ, ಅಂಡರ್ 19 ದಿನಗಳಲ್ಲಂತೂ ಇಬ್ಬರ ನಡುವಿನ ಹಗೆತನ ಇನ್ನೂ ಜೋರಿತ್ತು.

ಬಾಂಗ್ಲಾ ಪರ 126 ವಿಕೆಟ್ ಸಾಧನೆ

ಬಾಂಗ್ಲಾ ಪರ 126 ವಿಕೆಟ್ ಸಾಧನೆ

ತನ್ನ ಸಹ ಆಟಗಾರರಾದ ತಮೀಮ್ ಇಕ್ಬಾಲ್ ಮತ್ತು ತಸ್ಕಿನ್ ಅಹ್ಮದ್ ಜೊತೆ ಫೇಸ್ಬುಕ್ ಲೈವ್‌ನಲ್ಲಿ ಮಾತನಾಡುತ್ತ ರುಬೆಲ್ ಈ ವಿಚಾರಗಳನ್ನೆಲ್ಲ ಹೇಳಿಕೊಂಡಿದ್ದಾರೆ. ಬಾಂಗ್ಲಾದೇಶ ಪರ ಏಕದಿನ ಕ್ರಿಕೆಟ್‌ನಲ್ಲಿ 99 ಇನ್ನಿಂಗ್ಸ್‌ಗಳಲ್ಲಿ 126 ವಿಕೆಟ್ ಪಡೆದಿರುವ ಹೊಸೈನ್, ಅಂಡರ್ 19 ತ್ರಿಕೋನ ಸರಣಿಯ ವೇಳೆ ತಮ್ಮ ಬ್ಯಾಟ್ಸ್‌ಮನ್‌ಗಳನ್ನು ಕೊಹ್ಲಿ ಬಹಳ ನಿಂದಿಸಿದ್ದರು ಎಂದಿದ್ದಾರೆ.

ಕೊಹ್ಲಿಯ ಟರ್ನಿಂಗ್ ಪಾಯಿಂಟ್‌ ದಿನಗಳು

ಕೊಹ್ಲಿಯ ಟರ್ನಿಂಗ್ ಪಾಯಿಂಟ್‌ ದಿನಗಳು

'ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ನಡೆದಿತ್ತು. ತ್ರಿಕೋನ ಸರಣಿಯ ಪಂದ್ಯವದು. ಆಗ ಕೊಹ್ಲಿ ನಮ್ಮ ಬ್ಯಾಟ್ಸ್‌ಮನ್‌ಗಳನ್ನು ಬಹಳ ಉರಿಸುತ್ತಿದ್ದರು, ನಿಂದಿಸುತ್ತಿದ್ದರು,' ಎಂದು ನಗುತ್ತ ರುಬೆಲ್ ಆಗಿನ ಕ್ಷಣವನ್ನು ಸ್ಮರಿಸಿಕೊಂಡರು. ಅಂದ್ಹಾಗೆ, 2008ರಲ್ಲಿ ಮಲೇಶ್ಯಾದ ಕೌಲಾಲಂಪುರ್‌ನಲ್ಲಿ ನಡೆದಿದ್ದ U-19 ವಿಶ್ವಕಪ್‌ನಲ್ಲಿ ಕೊಹ್ಲಿ-ರುಬೆಲ್ ಮುಖಾಮುಖಿಯಾಗಿದ್ದರು. ಅಲ್ಲಿ ಕೊಹ್ಲಿ ನಾಯಕತ್ವದ ಭಾರತ ಚಾಂಪಿಯನ್ ಎನಿಸಿತ್ತು. ಈಗ ಭಾರತದ ನಾಯಕನಾಗಿರುವ ಕೊಹ್ಲಿ ಮಿಂಚಲಾರಂಭಿಸಿದ್ದು ಆವತ್ತಿನಿಂದಲೇ.

Story first published: Monday, May 11, 2020, 13:08 [IST]
Other articles published on May 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X