ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹೊಸ ವರ್ಷಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಅವತಾರ!

Virat Kohli Welcomes New Year With New Hair Style

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಂಗಳದಲ್ಲಿ ಸ್ಟೈಲಿಶ್ ಆಟದಿಂದ ಮಾತ್ರವಲ್ಲ, ಲುಕ್‌ನಿಂದಲೂ ಸಾಕಷ್ಟು ಖ್ಯಾತಿಯನ್ನು ಸೃಷ್ಟಿಸಿರುವ ಆಟಗಾರ. ಕೊಹ್ಲಿ ಆಟವನ್ನು ಫಾಲೋ ಮಾಡುವಷ್ಟೇ ಸಂಖ್ಯೆಯ ಅಭಿಮಾನಿಗಳು ಅವರ ಸ್ಟೈಲನ್ನು ಕೂಡ ಫಾಲೋ ಮಾಡುತ್ತಾರೆ. ಹೊಸ ವರ್ಷಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ಲುಕ್‌ನ ಮೊರೆ ಹೋಗಿದ್ದಾರೆ.

ಟೀಮ್ ಇಂಡಿಯಾ ಹೊಸ ವರ್ಷದ ಮೊದಲ ಸರಣಿಗೆ ಸಿದ್ದವಾಗಿದೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೊಸ ವರ್ಷಕ್ಕೆ ಹೊಸ ಹೇರ್‌ಸ್ಟೈಲ್‌ನ ಮೊರೆ ಹೋಗಿದ್ದಾರೆ. ಖ್ಯಾತ ಸ್ಟೈಲಿಸ್ಟ್‌ ಆಲಿಮ್ ಹಕಿಮ್ ವಿರಾಟ್‌ ಕಹ್ಲಿ ಅವರ ಕೇಶ ವಿನ್ಯಾಸ ಮಾಡಿದ್ದಾರೆ.

ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!ಕೊಹ್ಲಿ ಕಂಡರೆ ಲಂಕಾಗೆ ನಡುಕ; 12 ವರ್ಷದಲ್ಲಿ ಗೆದ್ದಿಲ್ಲ ಒಂದೇ ಒಂದು ಸರಣಿ!

ಹೊಸ ಹೇರ್‌ಸ್ಟೈಲ್‌ನ ಬಳಿಕ ವಿರಾಟ್‌ ಕೊಹ್ಲಿ ತಮ್ಮ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿರಾಟ್‌ ಕೊಹ್ಲಿಯ ಈ ಫೋಟೋದಲ್ಲಿ ಕೇಶ ವಿನ್ಯಾಸಕಾರ ಆಲಿಮ್ ಹಕಿಮ್ ಕೂಡ ಕಾಣಿಸಿಕೊಂಡಿದ್ದಾರೆ. ಮುಂದಿನ ಸರಣಿಯಲ್ಲಿ ಕೊಹ್ಲಿ ನೂತನ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Virat Kohli Welcomes New Year With New Hair Style

ವಿರಾಟ್‌ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಹೊಸ ವರ್ಷವನ್ನು ಸ್ವಿಟ್ಸರ್ಲೆಂಡ್‌ನಲ್ಲಿ ಕಳೆದಿದ್ದರು. ಈ ಸಂದರ್ಭದ ಕೆಲ ಫೋಟೋಗಳನ್ನು ಕೂಡ ಓ ಸೆಲೆಬ್ರಿಟಿ ಜೋಡಿ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲ ಬಾಲಿವುಡ್‌ ತಾರೆಗಳಾದ ಸೈಫ್ ಅಲಿಖಾನ್, ಕರೀನಾ ಕಪೂರ್, ವರುಣ್ ಧವನ್ ಮತ್ತು ನತಾಶಾ ದಲಾಳ್ ಪಾರ್ಟಿಯಲ್ಲೂ ಕಾಣಿಸಿಕೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬ್ರಿಯಾನ್ ಲಾರಾವಿರಾಟ್ ಕೊಹ್ಲಿ ನಾಯಕತ್ವದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬ್ರಿಯಾನ್ ಲಾರಾ

ಟೀಮ್ ಇಂಡಿಯಾ ವಿರುದ್ಧದ ಸರಣಿಗಾಗಿ ಶ್ರೀಲಂಕಾ ತಂಡ ಗುರುವಾರವೇ ಗುವಾಹಟಿಗೆ ಆಗಮಿಸಿದೆ. ಟೀಮ್ ಇಂಡಿಯಾ ಕೆಲ ಆಟಗಾರರು ಇಂದು ಮುಂಜಾನೆ ಗುವಾಹಟಿ ತಲುಪಿದರೆ ಇನ್ನೂ ಕೆಲ ಆಟಗಾರರು ಸಂಜೆಯ ವೇಳೆಗೆ ತಲುಪಲಿದ್ದಾರೆ.

Story first published: Friday, January 3, 2020, 17:02 [IST]
Other articles published on Jan 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X