ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವಿರಾಟ್ ಕೊಹ್ಲಿ, ಸಚಿನ್ ಎಲ್ಲಾ ದಾಖಲೆ ಮುರಿಯುತ್ತಾರೆ, ಒಂದನ್ನು ಬಿಟ್ಟು!'

ವಿರಾಟ್ ಗೆ ಚಾಲೆಂಜ್ ಹಾಕಿದ ವಿರೇಂದ್ರ ಸೆಹ್ವಾಗ್..? | virat kohli | Oneindia Kannada
Virat Kohli will break most of Tendulkars record barring one: Sehwag

ನವದೆಹಲಿ, ಆಗಸ್ಟ್ 22: ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ದಾಖಲೆಗಳನ್ನು ಮುರಿಯುತ್ತಾ ಬರುತ್ತಿದ್ದಾರೆ. ಆದರೆ ಕೊಹ್ಲಿಗೆ ಸಚಿನ್ ಮಾಡಿರುವ ಒಂದು ದಾಖಲೆ ಮುರಿಯಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿ: ವೀರೇಂದ್ರ ಸೆಹ್ವಾಗ್ಅನಿಲ್ ಕುಂಬ್ಳೆ ಕ್ರಿಕೆಟ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಲಿ: ವೀರೇಂದ್ರ ಸೆಹ್ವಾಗ್

'ಈ ಕ್ಷಣದಲ್ಲಿ ವಿರಾಟ್ ಕೊಹ್ಲಿಯೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್. ಆತ ಶತಕ ಗಳಿಸುತ್ತಿರುವ ರೀತಿ, ರನ್ ಗಳಿಸುತ್ತಿರು ಪರಿ ಅವರನ್ನು ಬೆಸ್ಟ್ ಕ್ರಿಕೆಟರ್ ಅನ್ನಿಸುವಂತೆ ಮಾಡಿದೆ. ಸಚಿನ್ ಹೆಸರಿನಲ್ಲಿರುವ ಹೆಚ್ಚಿನ ದಾಖಲೆಗಳನ್ನು ಕೊಹ್ಲಿ ಮುರಿಯುತ್ತಾರೆ,' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಸೆಹ್ವಾಗ್ ಹೇಳಿದ್ದಾರೆ.

ಭಾರತ vs ವೆಸ್ಟ್ ಇಂಡೀಸ್, 1ನೇ ಟೆಸ್ಟ್ ಪಂದ್ಯ, Live ಸ್ಕೋರ್‌ಕಾರ್ಡ್

1
46250

ಕೊಹ್ಲಿಗೆ ಸಚಿನ್ ಹೆಸರಿನಲ್ಲಿರುವ ಎಲ್ಲಾ ದಾಖಲೆಗಳನ್ನು ಮುರಿಯುವ ಶಕ್ತಿಯಿದೆ ಎಂದಿರುವ ಸೆಹ್ವಾಗ್, ಆದರೆ ಒಂದನ್ನು ಬಿಟ್ಟು ಎಂದೂ ತಿಳಿಸಿದ್ದಾರೆ.

ಏಕದಿನದಲ್ಲಿ 2 ಶತಕಗಳು

ಏಕದಿನದಲ್ಲಿ 2 ಶತಕಗಳು

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತ, ಗುರುವಾರ (ಆಗಸ್ಟ್ 22) ಮೊದಲ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಕೊಹ್ಲಿ ಎರಡು ಶತಕಗಳನ್ನು ಬಾರಿಸಿದ್ದರು. ಈಗ ಏಕದಿನದಲ್ಲಿ ಒಟ್ಟು 43 ಶತಕಗಳನ್ನು ಸಿಡಿಸಿರುವ ಕೊಹ್ಲಿಗೆ ತೆಂಡೂಲ್ಕರ್ ಏಕದಿನ ದಾಖಲೆ ಮುರಿಯಲು 7 ಶತಕಗಳು ಬೇಕು.

ಸಚಿನ್ 49 ಶತಕ ದಾಖಲೆ

ಸಚಿನ್ 49 ಶತಕ ದಾಖಲೆ

ತೆಂಡೂಲ್ಕರ್ ಒಟ್ಟು 452 ಏಕದಿನ ಇನ್ನಿಂಗ್ಸ್‌ಗಳಲ್ಲಿ 49 ಶತಕಗಳ ದಾಖಲೆ ಹೊಂದಿದ್ದಾರೆ. ಏಕದಿನದಲ್ಲಿ ಸಚಿನ್ 44.83ರ ಸರಾಸರಿಯಂತೆ 18426 ಸಾಧನೆ ಹೊಂದಿದ್ದರೆ, ಕೊಹ್ಲಿ 230 ಇನ್ನಿಂಗ್ಸ್‌ಗಳಲ್ಲಿ 60.31ರ ಸರಾಸರಿಯಲ್ಲಿ 11520 ರನ್ ಗಳಿಸಿದ್ದಾರೆ.

ಯಾರೂ ಮುರಿಯಲಾಗದು

ಯಾರೂ ಮುರಿಯಲಾಗದು

'ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ ಒಂದು ದಾಖಲೆಯನ್ನು ಯಾರೂ ಮುರಿಯಲು ಸಾಧ್ಯವಿಲ್ಲ. ಅದು ಯಾವುದೆಂದರೆ 200 ಟೆಸ್ಟ್ ಪಂದ್ಯಗಳ ದಾಖಲೆ. ತೆಂಡೂಲ್ಕರ್ ಆಡಿರುವ 200 ಟೆಸ್ಟ್ ಪಂದ್ಯಗಳ ದಾಖಲೆ ಯಾರಾದರೂ ಮುರಿಯಬಲ್ಲರು ಎಂದು ನನಗನ್ನಿಸುತ್ತಿಲ್ಲ,' ಎಂದು ಹೆಹ್ವಾಗ್ ಅಭಿಪ್ರಾಯಿಸಿದ್ದಾರೆ.

ಅತ್ಯಧಿಕ ಪಂದ್ಯ, ಇನ್ನಿಂಗ್ಸ್‌ಗಳು

ಅತ್ಯಧಿಕ ಪಂದ್ಯ, ಇನ್ನಿಂಗ್ಸ್‌ಗಳು

ಟೆಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ 200 ಪಂದ್ಯ, 329 ಇನ್ನಿಂಗ್ಸ್‌ಗಳಲ್ಲಿ 15921 ರನ್ ಬಾರಿಸಿದ್ದಾರೆ. ಇದರಲ್ಲಿ 51 ಶತಕ, 6 ದ್ವಿಶತಕಗಳು ಸೇರಿವೆ. ಅದೇ ಕೊಹ್ಲಿ 77 ಟೆಸ್ಟ್ ಪಂದ್ಯಗಳಲ್ಲಿ 131 ಇನ್ನಿಂಗ್ಸ್‌ಗಳಲ್ಲಿ 25 ಶತಕ, 6 ದ್ವಿಶತಕಗಳು ಸೇರಿ 6613 ರನ್ ಗಳಿಸಿದ್ದಾರೆ.

Story first published: Thursday, August 22, 2019, 12:29 [IST]
Other articles published on Aug 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X